ಸ್ಥಗಿತಗೊಂಡ ಮೆಸೇಜಿಂಗ್ ಆ್ಯಪ್ ಹೈಕ್.. ದೇಶೀ ಆ್ಯಪ್ ನೇಪಥ್ಯಕ್ಕೆ

| Updated By: ganapathi bhat

Updated on: Jan 18, 2021 | 6:07 PM

ಸ್ಥಗಿತಗೊಂಡ ನಂತರ ಹೈಕ್​ಗೆ ಸಂಬಂಧಿಸಿ ತಮ್ಮ ಯಾವುದೇ ಸಮಸ್ಯೆಗೆ care@hike.in ನ್ನು ಸಂಪರ್ಕಿಸಬಹುದು ಎಂದು ಹೈಕ್ ತಿಳಿಸಿದೆ. ಆದರೆ ಸ್ಥಗಿತಕ್ಕೆ ನಿರ್ದಿಷ್ಟ ಕಾರಣವನ್ನು ಹೈಕ್ ಬಹಿರಂಗಪಡಿಸಿಲ್ಲ.

ಸ್ಥಗಿತಗೊಂಡ ಮೆಸೇಜಿಂಗ್ ಆ್ಯಪ್ ಹೈಕ್.. ದೇಶೀ ಆ್ಯಪ್ ನೇಪಥ್ಯಕ್ಕೆ
ಹೈಕ್ ಆ್ಯಪ್
Follow us on

ಆತ್ಮನಿರ್ಭರತೆ ಮತ್ತು ವೈಯಕ್ತಿಕ/ಖಾಸಗಿ ಮಾಹಿತಿ ಸೋರಿಕೆ ಕೂಗಿನ ನಡುವೆ ದೇಶೀಯ ಖಾಸಗಿ ಮೆಸೇಜಿಂಗ್ ಆ್ಯಪ್ ಹೈಕ್ ಸದ್ದಿಲ್ಲದೆ ಸ್ಥಗಿತಗೊಂಡಿದೆ. ತನ್ನ ವಿಶಿಷ್ಟ ಸ್ಟಿಕರ್​ಗಳಿಂದಲೇ ಹೆಸರುವಾಸಿಯಾಗಿದ್ದ ಹೈಕ್ ಸ್ಟಿಕರ್ ಚಾಟ್​ ಇನ್ಮುಂದೆ ಕಾರ್ಯನಿರ್ವಹಿಸುವುದಿಲ್ಲ. ಈಗಾಗಲೇ ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಸ್ಟೋರ್​ಗಳಿಂದ ಹೈಕ್ ಅ​ನ್ನು ಕಿತ್ತುಹಾಕಲಾಗಿದೆ. ಜನವರಿ 21ರಿಂದ ಹೈಕ್ ಸ್ಟಿಕರ್ ಆ್ಯಪ್ ತನ್ನ ಚಟುವಟಿಕೆಯನ್ನು ಸಂಪೂರ್ಣ ನಿಲ್ಲಿಸಲಿದೆ ಎಂದು ಹೈಕ್ ತಿಳಿಸಿದೆ.

ಹೈಕ್​ನ್ನು ಸ್ಥಗಿತಗೊಳಿಸುವುದಾಗಿ ಹೈಕ್​ನ ಸ್ಥಾಪಕ ಮತ್ತು ಭಾರ್ತಿ ಎಂಟರ್​ಪ್ರೈಸಸ್​ನ ಸಿಇಒ ಕೆವಿನ್ ಭಾರ್ತಿ ಮಿತ್ತಲ್ ಜನವರಿ 6ರಂದೇ ಘೋಷಿಸಿದ್ದರು. ಜನವರಿ 14 ರಂದು ಹೈಕ್​ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಕುರಿತು ಟ್ವೀಟ್ ಮಾಡಲಾಗಿತ್ತು.

ಬಳಕೆದಾರರು ತಮ್ಮ ಮೆಸೇಜ್, ಫೊಟೊ ಮತ್ತು ವಿಡಿಯೋ ಸೇರಿ ಎಲ್ಲ ಬಗೆಯ ಡಾಟಾಗಳನ್ನು ಜನವರಿ 14ರ ರಾತ್ರಿ 11:59ರವರೆಗೆ ಬ್ಯಾಕ್​ಅಪ್ ಮಾಡಿಕೊಳ್ಳಬಹುದು ಎಂದು ಹೈಕ್ ತಿಳಿಸಿತ್ತು. ಹೈಕ್​ಗೆ ಸಂಬಂಧಿಸಿ ತಮ್ಮ ಯಾವುದೇ ಸಮಸ್ಯೆಗೆ care@hike.in ನ್ನು ಸಂಪರ್ಕಿಸಬಹುದು ಎಂದು ಹೈಕ್ ತಿಳಿಸಿದೆ.

ಹೈಕ್ ಆ್ಯಪ್

ಹೈಕ್​ನ ಸ್ಥಾಪಕ ಕೆವಿನ್ ಭಾರ್ತಿ ಮಿತ್ತಲ್ ಈ ಮುನ್ನವೇ ‘ಭಾರತ ಮೂಲದ ಆ್ಯಪ್​ಗಳು ಉಳಿಯಬೇಕೆಂದರೆ ಐರೋಪ್ಯ ಮೂಲದ ಆ್ಯಪ್​ಗಳನ್ನು ದೇಶದಲ್ಲಿ ನಿಷೇಧಿಸಬೇಕು’ ಎಂದು ವಿನಂತಿಸಿದ್ದರು. ಮೇಡ್ ಇನ್ ಇಂಡಿಯಾ, ಆತ್ಮನಿರ್ಭರ ಭಾರತದ ಕೂಗಿನ ನಡುವೆಯೇ ನಮ್ಮದೇ ಆ್ಯಪ್​ ಮುಚ್ಚುತ್ತಿದೆ. ಆದರೆ ಸ್ಥಗಿತಕ್ಕೆ ನಿರ್ದಿಷ್ಟ ಕಾರಣವನ್ನು ಹೈಕ್ ಬಹಿರಂಗಪಡಿಸಿಲ್ಲ.

ಬೇರೆ ರೂಪದಲ್ಲಿ ಪ್ರತ್ಯಕ್ಷ!
ಖಾಸಗಿ ಮೆಸೇಜಿಂಗ್ ಆ್ಯಪ್​ ಹೈಕ್ ಸ್ಥಗಿತಗೊಂಡರೂ ಅದೇ ಸಂಸ್ಥೆಯ ವೈಬ್ ಮತ್ತು ರಷ್ ಎಂಬ ಎರಡು ಆ್ಯಪ್​ಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಿರುವುದಾಗಿ ಕೆವಿನ್ ಭಾರ್ತಿ ಮಿತ್ತಲ್ ತಿಳಿಸಿದ್ದರು. ವೈಬ್ ಫೇಸ್​ಬುಕ್​ ಸ್ವರೂಪದ ಸಾಮಾಜಿಕ ಜಾಲತಾಣವಾಗಿದ್ದು, ರಷ್ ಗೇಮಿಂಗ್ ಆ್ಯಪ್ ಆಗಿದೆ. ಹೈಕ್ ಸ್ಟಿಕರ್​ಗಳು ಬಹಳ ಜನಪ್ರಿಯವಾಗಿದ್ದವು. ಅಲ್ಲದೇ ಹೈಕ್ ವಾಲೆಟ್ ಮೂಲಕ ಹಣ ವರ್ಗಾಯಿಸುವ ಸೌಲಭ್ಯವನ್ನೂ ಹೈಕ್ ಒದಗಿಸಿತ್ತು.

ಹೈಕ್ ಸ್ಟಿಕರ್​ಗಳು

ನಮ್ಮನ್ನು ನಂಬಿ ಪ್ಲೀಸ್.. ಫೇಸ್​ಬುಕ್​ನೊಂದಿಗೆ ನಿಮ್ಮ ಡೇಟಾ ಹಂಚಿಕೊಳ್ಳುವುದಿಲ್ಲ; ಸ್ಟೇಟಸ್​ ಮೂಲಕ ಅಂಗಲಾಚಿದ ವಾಟ್ಸ್​ಆ್ಯಪ್​

Published On - 5:42 pm, Mon, 18 January 21