India vs Australia Test Series | ಬ್ರಿಸ್ಬೇನ್ ಟೆಸ್ಟ್ನಲ್ಲಿ ನಾಳೆ ಎಲ್ಲ ಮೂರು ಫಲಿತಾಂಶಗಳ ಸಾಧ್ಯತೆ
ಗೆಲುವಿಗೆ ಬೇಕಾಗಿರುವ 329ರನ್ಗಳ ಮೊತ್ತನ್ನು ಬೆನ್ನಟ್ಟುವ ಇರಾದೆ ಪ್ರಕಟಿಸಿರುವ ರೋಹಿತ್ ಶರ್ಮ ಮಂಗಳವಾರದಂದು ಸಹ ಆದೇ ಧೋರಣೆಯೊಂದಿಗೆ ಬ್ಯಾಟ್ ಮಾಡಿದರೆ, ಭಾರತಕ್ಕೆ ಗೆಲುವು ಅಸಂಭವವೇನೂ ಅಲ್ಲ. ಶರ್ಮ ಇಲ್ಲವೇ ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರು ಬಿಗ್ ಇನ್ನಿಂಗ್ಸ್ ಆಡಬೇಕು ಮತ್ತು ಒಂದೆರಡು ಉತ್ತಮ ಜೊತೆಯಾಟಗಳು ಬರಬೇಕು.
ಭಾರತ ಮತ್ತು ಆಸ್ಟ್ರೇಲಿಯ ನಡುವಿನ 4 ಪಂದ್ಯಗಳ ಟೆಸ್ಟ್ ಸರಣಿ ಕೊನೆಗೊಳ್ಳಲು ಕೇವಲ ಇನ್ನೊಂದು ದಿನ ಮಾತ್ರ ಬಾಕಿ ಉಳಿದಿದೆ. ನಾಳೆ ಅಂದರೆ ಮಂಗಳವಾರದ ಫಲಿತಾಂಶ ಏನು ಬೇಕಾದರೂ ಆಗಬಹುದು. ಅಂದರೆ ಎಲ್ಲ ಮೂರು ಬಗೆಯ ಫಲಿತಾಂಶಗಳು ಹೊರಬೀಳುವ ಸಾಧ್ಯತೆಯಿದೆ.
ಭಾರತದ ಗೆಲುವು, ಅತಿಥೇಯರ ಗೆಲುವು, ಇಲ್ಲವೇ ಡ್ರಾ.. ಹೀಗೆ ಮೂರು ಸಾಧ್ಯತೆಯ ಬಗ್ಗೆ ವಿಶ್ಲೇಷಣೆಗಳು ಚಾಲ್ತಿಗೆ ಬಂದಿವೆ. ಬ್ರಿಸ್ಬೇನ್ ಹವಾಮಾನ ಇಲಾಖೆ ನಾಳೆಯೂ ಮಳೆಯಾಗುವ ಮುನ್ಸೂಚನೆ ನೀಡಿರುವುದರಿಂದ ಪಂದ್ಯ ಫಲಿತಾಂಶ ಕಾಣದೆ ಹೋಗುವ ಸಾಧ್ಯತೆಯೇ ಜಾಸ್ತಿ ಎಂದು ಕಾಮೆಂಟೇಟರ್ಗಳು ಹೇಳುತ್ತಿದ್ದರು.
ಟೆಸ್ಟ್ ಎಲ್ಲೇ ನಡೆಯುತ್ತಿರಲಿ, ಕೊನೆಯ ದಿನ ಬೌಲರ್ಗಳು ವಿಜೃಂಭಿಸುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಬಿಸ್ಬೇನ್ ಪಿಚ್ನಲ್ಲಿ ನಾಲ್ಕನೇ ದಿನವೇ ಬಿರುಕುಗಳು ಕಾಣಿಸುತ್ತಿದ್ದವು. ನಾಳೆ ಅವು ಮತ್ತಷ್ಟು ಅಗಲಗೊಂಡು ಬೌಲರ್ಗಳ ಸಾಧಾರಣ ಎಸೆತಗಳು ಸಹ ಬ್ಯಾಟ್ಸ್ಮನ್ ಎದೆಯಲ್ಲಿ ಭೀತಿ ಹುಟ್ಟಿಸುತ್ತವೆ. ಹಾಗಾಗಿ, ನಾಳೆ ಮಳೆಯಾಗದಿದ್ದರೆ, ಟೀಮ್ ಇಂಡಿಯಾದ ಬ್ಯಾಟ್ಸ್ಮನ್ಗಳು ಹೆಚ್ಚು ಜಾಗರೂಕತೆಯಿಂದ ಆಡಬೇಕಾಗುತ್ತದೆ.
ಮಿಚೆಲ್ ಸ್ಟಾರ್ಕ್ ಅವರ ಎಸೆತವೊಂದನ್ನು ಭರ್ಜರಿಯಾದ ಕವರ್ ಡ್ರೈವ್ ಮೂಲಕ ಬೌಂಡರಿಗಟ್ಟಿ ಗೆಲುವಿಗೆ ಬೇಕಾಗಿರುವ 329 ರನ್ಗಳ ಮೊತ್ತವನ್ನು ಬೆನ್ನಟ್ಟುವ ಇರಾದೆ ಪ್ರಕಟಿಸಿರು ರೋಹಿತ್ ಶರ್ಮ ಒಂದು ವೇಳೆ ಮಂಗಳವಾರವೂ ಆದೇ ಧೋರಣೆಯೊಂದಿಗೆ ಬ್ಯಾಟ್ ಮಾಡಿದರೆ, ಭಾರತಕ್ಕೆ ಗೆಲುವು ಅಸಂಭವವೇನೂ ಅಲ್ಲ. ಶರ್ಮ ಇಲ್ಲವೇ ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರು ಬಿಗ್ ಇನ್ನಿಂಗ್ಸ್ ಆಡಬೇಕು ಮತ್ತು ಒಂದೆರಡು ಉತ್ತಮ ಜೊತೆಯಾಟಗಳು ಬರಬೇಕು.
ಇದು ಕೇವಲ ಆಶಯದ ಮಾತು ಮಾತ್ರವೇ ಅಲ್ಲ. ಅಂಥ ಕ್ಷಮತೆ ಶರ್ಮ, ಪೂಜಾರಾ ಮತ್ತು ನಾಯಕ ರಹಾನೆ ಅವರಲ್ಲಿದೆ. ಯುವ ಆಟಗಾರ ಶುಭ್ಮನ್ ಗಿಲ್ ಸಹ ಭಾರಿ ಭರವಸೆ ಮೂಡಿಸಿದ್ದಾರೆ.
ಟೆಸ್ಟ್ ಪಂದ್ಯದ ನಾಲ್ಕನೇ ಇನ್ನಿಂಗ್ಸ್ನಲ್ಲಿ ಶತಕ ಬಾರಿಸಿವುದು ಸುಲಭ. ಸಿಡ್ನಿಯಲ್ಲಿ ರಿಷಭ್ ಪಂತ್ ಅವರು ಹೇಗೆ ಆಡಿದರೆನ್ನುವುದನ್ನು ನಾವೆಲ್ಲ ನೋಡಿದ್ದೇವೆ. ಅವರು ಅವರು ಆಕ್ರಮಣವನ್ನು ಎದುರಾಳಿ ಶಿಬಿರಕ್ಕೆ ತೆಗೆದುಕೊಂಡು ಹೋಗುವಂಥ ಪ್ರವೃತ್ತಿಯುಳ್ಳವರು. ಭಾರತದ ಮೊದಲ ಇನ್ನಿಂಗ್ಸ್ನಲ್ಲಿ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಬ್ಯಾಟ್ ಮಾಡಿದ ವಾಷಿಂಗ್ಟನ್ ಸುಂದರ್ ಮತ್ತು ಶಾರ್ದುಲ್ ಠಾಕೂರ್ ರವಿವಾರದಂದು ತೋರಿದ ದಿಟ್ಟ ಬ್ಯಾಟಿಂಗ್ ಪ್ರದರ್ಶನವನ್ನೂ ನಾವು ನೋಡಿದ್ದೇವೆ. ಈ ಎಲ್ಲ ಆಂಶಗಳನ್ನು ಗಮನಿಸಿದ್ದೇ ಆದರೆ ಭಾರತ ಗೆಲ್ಲಲು ಅಸಾಧ್ಯವಾದಂಥ ಸ್ಥಿತಿಯೇನೂ ಇಲ್ಲ.
ಮತ್ತೊಂದು ಕೋನದಿಂದ ಯೋಚಿಸಿದರೆ, ಪಂದ್ಯದ ನಾಲ್ಕನೇ ದಿನವಾಗಿದ್ದ ಇಂದು ಭಾರತದ ಅನನುಭವಿಗಳು ವಿಜೃಂಭಿಸಿ, ಆಸ್ಟ್ರೇಲಿಯಾದ ಅನುಭವಿ ಮತ್ತು ಪ್ರತಿಭಾವಂತ ಬ್ಯಾಟ್ಸ್ಮನ್ಗಳ ಪಡೆಯನ್ನು 294ರನ್ ಮೊತ್ತಕ್ಕೆ ಸೀಮಿತಗೊಳಿಸಿದರು. ಈ ಪಂದ್ಯದಲ್ಲಿ ಆಡುತ್ತಿರುವ ಆಸ್ಟ್ರೇಲಿಯಾದ ಬೌಲರ್ಗಳು ತಮ್ಮ ನಡುವೆ 1013 ವಿಕೆಟ್ಗಳನ್ನು ಪಡೆದಿದ್ದರೆ, ಭಾರತದ ಬೌಲರ್ಗಳು ಒಟ್ಟಾಗಿ ಕೇವಲ 13 ವಿಕೆಟ್ ಪಡೆದಿದ್ದಾರೆ. ಈ ಅಗಾಧವಾದ ವ್ಯತ್ಯಾಸವನ್ನು ಉಡಾಫೆ ಮಾಡದೆ ಗಂಭೀರವಾಗಿ ಯೋಚಿಸಿದರೆ, ಅತಿಥೇಯರು ಗೆಲ್ಲುವ ಅವಕಾಶ ಯಾಕೆ ಜಾಸ್ತಿಯಿದೆ ಎನ್ನುವುದು ಮನದಟ್ಟಾಗುತ್ತದೆ.
ಒಂದು ವೇಳೆ ಭಾರತ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಸಫಲವಾದರೂ ಕಳೆದ ಸರಣಿಯನ್ನು ಗೆದ್ದಿರುವುದರಿಂದ ಬಾರ್ಡರ್-ಗಾವಸ್ಕರ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳಲಿದೆ. ನಾಳೆ ಫಲಿತಾಂಶ ಏನೇ ಆಗಲಿ, ಭಾರತದ ಬೌಲರ್ಗಳು ಇಂದು ಅತ್ಯುತ್ತಮವಾಗಿ ಬೌಲ್ ಮಾಡಿದರು. ಕೇವಲ ಮೂರನೇ ಟೆಸ್ಟ್ ಆಡುತ್ತಿರುವ ಮತ್ತು ಸಿಡ್ನಿಯಲ್ಲಿ ಜನಗನಮನ ಅಧಿನಾಯಕ ಜಯಹೇ.. ಅಂತ ರಾಷ್ಟ್ರಗೀತೆ ಹಾಡುವಾಗ ಭಾವುಕರಾಗಿಬಿಟ್ಟ ಮೊಹಮ್ಮದ್ ಸಿರಾಜ್ ಇಂದು ತಾನು ಲಂಬಿ ರೇಸ್ ಕಾ ಘೋಡಾ ಎನ್ನುವುದನ್ನು ಸಾಬೀತು ಮಾಡಿ ಟೆಸ್ಟ್ ಕರೀಯರ್ನಲ್ಲಿ ಮೊದಲ ಬಾರಿಗೆ 5 ವಿಕೆಟ್ ಪಡೆಯುವ ಸಾಧನೆ ಮಾಡಿದರು .
ಅವರಿಗೆ ಉತ್ಕೃಷ್ಟ ಬೆಂಬಲ ನೀಡಿದ ಮತ್ತು ಕೇವಲ ಎರಡನೇ ಟೆಸ್ಟ್ ಆಡುತ್ತಿರುವ ಶಾರ್ದುಲ್ ಠಾಕೂರ್ ತಮ್ಮನ್ನು ಇದುವರೆಗೆ ಕಡೆಗಣಿಸಿದ್ದು ತಪ್ರು ಎನ್ನುವಂತೆ ದಾಳಿ ನಡೆಸಿ 4 ವಿಕೆಟ್ ಪಡೆದರು. ಒಂದು ಹಂತದಲ್ಲಿ ಆವೇಶಕ್ಕೊಳಗಾಗಿ ಸತತವಾಗಿ ಬೌಲರ್ಗಳನ್ನು ಎಸೆಯಲಾರಂಭಿಸಿದ ಠಾಕೂರರನ್ನು ಭೀತಿ ಹುಟ್ಟಿಸುವ ಬೌಲಿಂಗ್ ಮಾಡುತ್ತಿರುವ ಬಗ್ಗೆ ಅಂಪೈರ್ ಎಚ್ಚರಿಸಿದರು.
ಅತಿಥೇಯರ ಪರ ಇನ್ನೊಮ್ಮೆ ಬ್ಯಾಟಿಂಗ್ನಲ್ಲಿ ಮಿಂಚಿದ ಸ್ಟೀವ್ ಸ್ಮಿತ್ ತಮ್ಮ ಟೆಸ್ಟ್ ಕ್ರಿಕೆಟ್ ಬದುಕಿನ 31 ನೇ ಅರ್ಧ ಶತಕ ಬಾರಿಸಿದರೆ, ಡೇವಿಡ್ ವಾರ್ನರ್ 48 ರನ್ಗಳ ಕಾಣಿಕೆ ನೀಡಿದರು. ವೈಯಕ್ತಿಕ ಸ್ಕೋರ್ 42 ಆಗಿದ್ದಾಗ ಸ್ಮಿತ್ ಸಿರಾಜ್ರಿಂದ ಜೀವದಾನ ಪಡೆದರು. ಅನಂತರ ತಮ್ಮದೇ ಬೌಲಿಂಗ್ಲ್ಲಿ ಕೆಮೆರಾನ್ ನೀಡಿದ ಕ್ಯಾಚನ್ನು ನೆಲಸಮಗೊಳಿಸಿದರು. ಈ ವಿಷಯಗಳು ಗಣನೆಗೆ ಬರುವುದರಿಂದ ಸಿರಾಜ್ ತಮ್ಮ ಫೀಲ್ಡಿಂಗ್ನ್ನು ಸುಧಾರಿಸಿಕೊಳ್ಳಬೇಕು.