AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಗ್ಲೆಂಡ್​ನ ಅತ್ಯಂತ ಯಶಸ್ವೀ ನಾಯಕ ಎನಿಸಿಕೊಳ್ಳುವತ್ತ ಜೋ ರೂಟ್ ದಾಪುಗಾಲು

ನಾಯಕನಾಗಿ ರೂಟ್ 24ಟೆಸ್ಟ್​ಗಳನ್ನು ಗೆದ್ದಿದ್ದಾರೆ. ಌಂಡ್ರ್ಯೂ ಸ್ಟ್ರಾಸ್ ಮತ್ತು ಅಲಸ್ಟೇರ್ ಕುಕ್ ಸಹ ಅಷ್ಟೇ ಟೆಸ್ಟ್​ಗಳನ್ನು ಇಂಗ್ಲೆಂಡ್​ಗೆ ಗೆದ್ದುಕೊಟ್ಟಿದ್ದಾರೆ. 26 ಟೆಸ್ಟ್​ ಗೆದ್ದಿರುವ ಮೈಕೆಲ್ ವಾನ್ ಈ ಪಟ್ಟಿಯ ಅಗ್ರಸ್ಥಾನದಲ್ಲಿದ್ದಾರೆ.

ಇಂಗ್ಲೆಂಡ್​ನ ಅತ್ಯಂತ ಯಶಸ್ವೀ ನಾಯಕ ಎನಿಸಿಕೊಳ್ಳುವತ್ತ ಜೋ ರೂಟ್ ದಾಪುಗಾಲು
ಫೀಲ್ಡ್ ಸೆಟ್ ಮಾಡುತ್ತಿರುವ ಜೋ ರೂಟ್
ಅರುಣ್​ ಕುಮಾರ್​ ಬೆಳ್ಳಿ
|

Updated on:Jan 18, 2021 | 10:57 PM

Share

ಶ್ರೀಲಂಕಾದ ವಿರುದ್ಧ ಇಂದು ಕೊನೆಗೊಂಡ ಮೊದಲ ಟೆಸ್ಟ್​ನಲ್ಲಿ ಇಂಗ್ಲೆಂಡ್​ಗೆ 7 ವಿಕೆಟ್​​ಗಳ ಭರ್ಜರಿ ಜಯ ದೊರಕಿಸುವಲ್ಲಿ ಮೊದಲ ಇನ್ನಿಂಗ್ಸ್​ನಲ್ಲಿ ಬಾರಿಸಿದ ದ್ವಿಶತಕದೊಂದಿಗೆ ಪ್ರಮುಖ ಪಾತ್ರ ನಿರ್ವಹಿದ ನಾಯಕ ಜೋ ರೂಟ್ ತಮ್ಮ ರಾಷ್ಟ್ರಕ್ಕೆ ಅತಿಹೆಚ್ಚು ಟೆಸ್ಟ್​ಗಳನ್ನು ಗೆದ್ದುಕೊಟ್ಟ ನಾಯಕರ ಪೈಕಿ ಎರಡನೆ ಸ್ಥಾನವನ್ನು ಌಂಡ್ರ್ಯೂ ಸ್ಟ್ರಾಸ್ ಮತ್ತು ಅಲಸ್ಟೇರ ಕುಕ್​ರೊಂದಿಗೆ ಹಂಚಿಕೊಡಿದ್ದಾರೆ.

ರೂಟ್​ ನಾಯಕನಾಗಿ ಗಾಲ್ ಮೈದಾನದಲ್ಲಿ ಇವತ್ತು ಸಾಧಿಸಿದ್ದು 24ನೇ ಗೆಲುವಾಗಿದೆ. ಸ್ಟ್ರಾಸ್ ಮತ್ತು ಅಲಸ್ಟೇರ್ ಕುಕ್ ಸಹ ಅಷ್ಟೇ ಸಂಖ್ಯೆಯ ಟೆಸ್ಟ್​ಗಳನ್ನು ಇಂಗ್ಲೆಂಡ್​ಗೆ ಗೆದ್ದುಕೊಟ್ಟಿದ್ದಾರೆ. 26 ಟೆಸ್ಟ್​ಗಳನ್ನು ಗೆದ್ದಿರುವ ಮೈಕೆಲ್ ವಾನ್ ಈ ಪಟ್ಟಿಯ ಅಗ್ರಸ್ಥಾನದಲ್ಲಿದ್ದಾರೆ. ರೂಟ್​ ಇನ್ನೆರಡು ಟೆಸ್ಟ್​ಗಳನ್ನು ಗೆದ್ದರೆ, ವಾನ್ ದಾಖಲೆಯನ್ನೂ ಸರಿಗಟ್ಟಲಿದ್ದಾರೆ. ಕ್ರಿಕೆಟ್​ ಪರಿಣಿತರ ಪ್ರಕಾರ 30-ವರ್ಷ ವಯಸ್ಸಿನ ರೂಟ್​ಗೆ ಅದು ಇಷ್ಟರಲ್ಲೇ ಸಾಧ್ಯವಾಗಲಿದೆ.

‘ಅಲ್ಪ ಪ್ರಮಾಣದ ತಯಾರಿಯೊಂದಿಗೆ ಇಲ್ಲಿಗೆ (ಶ್ರೀಲಂಕಾ) ಆಗಮಿಸಿದ ನಮ್ಮ ಟೀಮು ನೀಡಿರುವ ಅಮೋಘ ಪ್ರದರ್ಶನ ಬಹಳ ತೃಪ್ತಿ ಮತ್ತು ಸಂತೋಷವನ್ನು ನೀಡಿದೆ. ನಿನ್ನೆ ನಮ್ಮ ಪ್ರದರ್ಶನ ಮತ್ತೂ ಅದ್ಭುತವಾಗಿತ್ತು. ನಮ್ಮ ಇಬ್ಬರು ಸ್ಪಿನ್ನರ್​ಗಳಿಬ್ಬರು 5-ವಿಕೆಟ್ ಪಡೆಯುವ ಸಾಧನೆ ಮಾಡಿದ್ದು ಹೆಮ್ಮೆಪಟ್ಟುಕೊಳ್ಳುವ ಸಂಗತಿ. ಯಾಕೆಂದರೆ ಕಳೆದ ವರ್ಷದಲ್ಲಿ ಅವರು ಬಹಳ ಕಡಿಮೆ ಪ್ರಮಾಣದ ಕ್ರಿಕೆಟ್ ಆಡಿದ್ದರು’ ಎಂದು ಪಂದ್ಯದ ನಂತರ ರೂಟ್ ಹೇಳಿದರು.

ಸ್ಟ್ರಾಸ್ ಮತ್ತು ಕುಕ್

‘ಉಪಖಂಡದಲ್ಲಿ ಕ್ರಿಕೆಟ್ ಆಡುವುದು ಕಷ್ಟದ ಕೆಲಸವೇ, ಆದರೆ ಯಾವುದೇ ಬಗೆಯ ತಯಾರಿಯಿಲ್ಲದೆ ಈ ರೀತಿಯ ಪ್ರದರ್ಶನ ನೀಡಿ ಟೆಸ್ಟ್​ ಗೆಲ್ಲುವುದು ನಮ್ಮ ಆಟಗಾರರ ಮನೋಬಲದ ಪ್ರತೀಕವಾಗಿದೆ. ಸರಣಿಯಲ್ಲಿ ನಮಗೆ ಉತ್ತಮ ಆರಂಭ ಸಿಕ್ಕಿದೆ. ಸ್ಪಿನ್ನರ್​ಗಳ ಸಾಧನೆಯನ್ನು ಎಷ್ಟು ಹೊಗಳಿದರೂ ಸಾಲದು. ಮುಂದಿನ ದಿನಗಳಲ್ಲಿ ನಮ್ಮ ಈ ಗುಂಪು ಮತ್ತೂ ರೋಮಾಂಚಕ ಪ್ರದರ್ಶನಗಳನ್ನು ನೀಡಲಿದೆ. ಬಹಳ ಪ್ರಮುಖ ಅಂಶವೇನೆಂದರೆ ಮುಂದಿನ ಎಲ್ಲ ಪಂದ್ಯಗಳಲ್ಲಿ ನಾವು ಇದೇ ತೆರನಾದ ಪ್ರದರ್ಶನವನ್ನು ಕಾಯ್ದುಕೊಳ್ಳಲು ಉತ್ಸುಕರಾಗಿದ್ದೇವೆ’ ಎಂದು ರೂಟ್ ಹೇಳಿದರು.

ತಮ್ಮ ಬ್ಯಾಟಿಂಗ್ ಫಾರ್ಮ್​ ಬಗ್ಗೆಯೂ ಮಾತಾಡಿದ ರೂಟ್ ಲಂಕಾದ ಸ್ಪಿನ್ನರ್​ಗಳನ್ನು ಎದುರಿಸುವಾಗ ಪಾದಗಳ ಚಲನೆ ಬಹಳ ಚೆನ್ನಾಗಿತ್ತು ಎಂದು ಹೇಳಿದರು.

ಜೋ ರೂಟ್ ದ್ವಿಶತಕ ಬಾರಿಸಿದ ನಂತರ

‘ಬಯೊ-ಬಬಲ್ ಶಿಷ್ಟಾಚಾರ ಸೇರಿದಂತೆ ಹಲವಾರು ಸಮಸ್ಯೆಗಳನ್ನು ನಾವು ಒಂದು ತಂಡವಾಗಿ ಎದುರಿಸುತ್ತಿದ್ದೇವೆ. ಎಲ್ಲರೂ ಒಟ್ಟಾಗಿ ಒಂದೆಡೆ ಇರುವುದು ಬಹಳ ಖುಷಿ ನೀಡುತ್ತಿದೆ. ವೈಯಕ್ತಿಕ ಪ್ರದರ್ಶನ ಕುರಿತು ಹೇಳುವುದಾದರೆ ನನ್ನ ಮನಸ್ಥಿತಿ ಮತ್ತು ಫುಟ್​ವರ್ಕ್ ಅದ್ಭುತವಾಗಿದ್ದವು. ಪಾದಗಳ ಚಲನೆ ಉತ್ತವಾಗಿದ್ದರೆ ಬಾಲನ್ನು ಸರಿಯಾಗಿ ಕನೆಕ್ಟ್ ಮಾಡಲು ಸಾಧ್ಯವಾಗುತ್ತದೆ. ಉತ್ತಮ ಫುಟ್​ವರ್ಕ್​ನಿಂದಾಗಿಯೇ ಎಚ್ಚರಿಕೆ-ಮಿಶ್ರಿತ ಆಕ್ರಮಣಕಾರಿ ಆಟವಾಡಲು ನನಗೆ ಸಾಧ್ಯವಾಗಿದ್ದು. ನನ್ನ ಏಕಾಗ್ರತೆ ಯಾವ ಹಂತದಲ್ಲೂ ವಿಚಲಿತಗೊಳ್ಳಲಿಲ್ಲ. ನನ್ನ ಸಾಮರ್ಥ್ಯದ ಬಗ್ಗೆ ಟೀಕೆಗಳು ಕೇಳಿ ಬರಲಾರಂಭಿಸಿದ್ದವು. ಆದರೆ, ಗಾಲ್​ನಲ್ಲಿ ಬಿಗ್ ಇನ್ನಿಂಗ್ಸ್ ಆಡಿದ್ದು ಟೀಕಾಕಾರನ್ನು ನಿಶಬ್ದವಾಗಿಸಿದೆ ಎಂದು ಭಾವಿಸುತ್ತೇನೆ’ ಎಂದು ರೂಟ್​ ಹೇಳಿದರು.

ಈ ಗೆಲುವಿನೊಂದಿಗೆ ಇಂಗ್ಲೆಂಡ್​ ಶ್ರೀಲಂಕಾ ನೆಲದಲ್ಲಿ ಸತತ 5 ಟೆಸ್ಟ್​ಗಳನ್ನು ಜಯಿಸಿದಂತಾಗಿದೆ. ಗೆಲುವಿನ ಸರಪಳಿ ಶುರುವಾಗಿದ್ದು 2012ರಲ್ಲಿ. ಆ ಸರಣಿಯನ್ನು ಇಂಗ್ಲೀಷರು 1-1ರಿಂದ ಸಮ ಮಾಡಿಕೊಂಡಿದ್ದರು. ಆಮೇಲೆ 2018ರಲ್ಲಿ ಇಂಗ್ಲೆಂಡ್ ಅತಿಥೇಯರನ್ನು 3-0 ಅಂತರದಿಂದ ಸೋಲಿಸಿ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿತ್ತು. ಸೋಮವಾರದ ಗೆಲುವು ಐದನೆಯದ್ದಾಗಿದೆ.

Photo Gallery | ಕ್ರಿಕೆಟ್​ ಜಗತ್ತಿನ ಅಜಾತಶತ್ರುವಿಗೆ ಇಂದು 48 ರ ಸಂಭ್ರಮ.. ಹ್ಯಾಪಿ ಬರ್ಥ್​ಡೆ ರಾಹುಲ್​ ದ್ರಾವಿಡ್..

Published On - 9:57 pm, Mon, 18 January 21

Follow Us
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!