30 ಲಕ್ಷ ಹಣ ದುರುಪಯೋಗ ಆರೋಪ, ರೈತ ಭವನದಲ್ಲಿ ಮಾಜಿ ಅಧ್ಯಕ್ಷರ ಆತ್ಮಹತ್ಯೆ ಹೈಡ್ರಾಮಾ‌

| Updated By: ಸಾಧು ಶ್ರೀನಾಥ್​

Updated on: Dec 21, 2020 | 3:54 PM

ನನಗೆ ಸಭೆಯಲ್ಲಿ ಮಾತನಾಡಲು ಅವಕಾಶ ಕೊಡುತ್ತಿಲ್ಲ. ಅಲ್ಲದೆ ನಾನು ಹಣ ದುರುಪಯೋಗ ಮಾಡಿಕೊಂಡಿಲ್ಲ ಎಂದು ಹಾಲಿ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕುತ್ತ ರೈತ ಭವನ ಕಟ್ಟದ ಮೇಲೆರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಿದ್ದರು.

30 ಲಕ್ಷ ಹಣ ದುರುಪಯೋಗ ಆರೋಪ, ರೈತ ಭವನದಲ್ಲಿ ಮಾಜಿ ಅಧ್ಯಕ್ಷರ ಆತ್ಮಹತ್ಯೆ ಹೈಡ್ರಾಮಾ‌
ಮಗ್ಗಲಮಕ್ಕಿ ಲಕ್ಷ್ಮಣಗೌಡ
Follow us on

ಚಿಕ್ಕಮಗಳೂರು: ರೈತ ಭವನ ಕಟ್ಟಡದ ಮೇಲೇರಿದ ವ್ಯಕ್ತಿ ಆತ್ಮಹತ್ಯೆ ಹೈಡ್ರಾಮಾ‌ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಪಟ್ಟಣದ ರೈತ ಭವನದಲ್ಲಿ ನಡೆದಿದೆ.

ಮಗ್ಗಲಮಕ್ಕಿ ಲಕ್ಷ್ಮಣಗೌಡ ಎಂಬುವರಿಂದ ಈ ಆತ್ಮಹತ್ಯೆ ಯತ್ನ ನಡೆದಿದೆ. ಲಕ್ಷ್ಮಣಗೌಡ ವ್ಯವಸಾಯೋತ್ಪನ್ನ ಸಹಕಾರ ಮಾರಾಟ ಸಮಿತಿ ಮಾಜಿ ಅಧ್ಯಕ್ಷರಾಗಿದ್ದು, ಲಕ್ಷ್ಮಣಗೌಡ 30 ಲಕ್ಷ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಹಾಲಿ ಆಡಳಿತ ಮಂಡಳಿಯಿಂದ ಆರೋಪ ಹೊರಿಸಲಾಗಿತ್ತು.

ಇದರಿಂದ ಬೇಸತ್ತ ಮಗ್ಗಲಮಕ್ಕಿ ಲಕ್ಷ್ಮಣಗೌಡ, ನನಗೆ ಸಭೆಯಲ್ಲಿ ಮಾತನಾಡಲು ಅವಕಾಶ ಕೊಡುತ್ತಿಲ್ಲ. ಅಲ್ಲದೆ ನಾನು ಹಣ ದುರುಪಯೋಗ ಮಾಡಿಕೊಂಡಿಲ್ಲ ಎಂದು ಹಾಲಿ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕುತ್ತ ರೈತ ಭವನ ಕಟ್ಟಡದ ಮೇಲೆರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು.

ಕಳೆದ ಒಂದು ಗಂಟೆಯಿಂದ ರೈತ ಭವನದ ಕಟ್ಟಡದಲ್ಲಿ ಆತ್ಮಹತ್ಯೆ ಹೈ ಡ್ರಾಮಾ ನಡೆಸಿದ್ದ ಲಕ್ಷ್ಮಣಗೌಡರ ಗಮನ ಬೇರೆಡೆ ಸೆಳೆದು, ಹಿಂದೆಯಿಂದ ಹೋಗಿ ಸದಸ್ಯರು ಹಿಡಿದುಕೊಂಡಿದ್ದಾರೆ. ಇದರಿಂದ ಕೋಪಗೊಂಡ ಲಕ್ಷ್ಮಣಗೌಡ ನನ್ನನ್ನು ಎಲ್ಲರೂ ಸೇರಿ ಸಾಯಿಸೋಕೆ ಹೊರಟಿದ್ರಿ ಅಂತ ಆಕ್ರೋಶಗೊಂಡಿದ್ದಾರೆ.

ಲಕ್ಷ್ಮಣಗೌಡರ ಮನವೋಲಿಕೆಯ ನಂತರ ಮತ್ತೆ ನಡೆದ ಸಭೆಯಲ್ಲಿ ಮಾತಿನ ಚಕಮಕಿ, ತಳ್ಳಾಟ, ನೂಕಾಟ ನಡೆದಿದ್ದು, ನೀವು ಮಾಡಿದ್ದು ತಪ್ಪು ಅಂತ ಲಕ್ಷ್ಮಣಗೌಡರನ್ನ ಸದಸ್ಯರು ತರಾಟೆಗೆ ತೆಗೆದುಕೊಂಡಿದ್ದಾರೆ.