Christmas Special | ಕ್ರಿಸ್ಮಸ್ ಹಬ್ಬಕ್ಕೆ ತಯಾರಿಸಲೇಬೇಕಾದ ಸಿಹಿ ಕಲ್ಕಲ್ಸ್ ಮಾಡುವ ವಿಧಾನ ಇಲ್ಲಿದೆ
ಕ್ರಿಸ್ಮಸ್ಗೆ ತಿನ್ನಲೇಬೇಕಾದ ಸಿಹಿ ತಿಂಡಿ ಕಲ್ಕಲ್ಸ್ ತಯಾರಿಸುವ ವಿಧಾನ ಇಲ್ಲಿದೆ. ಈ ತಿನಿಸು ತಯಾರಿಸುವುದು ತುಂಬಾನೇ ಸುಲಭ. ನೀವು ಕೂಡ ಅರಾಮಾಗಿ ತಯಾರಿಸಿ ತಿನ್ನಬಹುದು.
ಡಿಸೆಂಬರ್ ಬಂತೂ ಅಂದ್ರೆ ಮೊದಲು ನೆನಪಾಗೋದು ಕ್ರಿಸ್ಮಸ್ ಹಬ್ಬ. ಏಸು ಕ್ರಿಸ್ತ ಹುಟ್ಟಿದ ಈ ದಿನವನ್ನು ಕ್ರಿಶ್ಚಿಯನ್ನರು ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಇದು ಅವರ ದೊಡ್ಡ ಹಾಗೂ ಶ್ರೇಷ್ಟ ಹಬ್ಬ. ಈ ಹಬ್ಬಕ್ಕೆ ಕಲ್ಕಲ್ಸ್ ಬೇಕೇ ಬೇಕು.
ಕಲ್ಕಲ್ಸ್ ಬಗ್ಗೆ ನೀವು ಕೇಳಿರಲೇಬೇಕು. ಹೆಸರು ವಿಚಿತ್ರ ಅನಿಸಬಹುದು. ಆದರೆ ಕ್ರಿಸ್ಮಸ್ಗೆ ಈ ತಿಂಡಿ ಕಂಪಲ್ಸರಿ. ನಮಗೆ ಕ್ರಿಶ್ಚಿಯನ್ ಫ್ರೆಂಡ್ಸ್ ಇಲ್ಲ. ಈ ತಿಂಡಿ ತಿನ್ನೋಕೆ ಅಗಲ್ಲ ಅಂತಾ ಬೇಜಾರ್ ಮಾಡ್ಕೋಬೇಡಿ. ಯಾಕಂದ್ರೆ ಈ ತಿನಿಸು ತಯಾರಿಸುವುದು ತುಂಬಾನೇ ಸುಲಭ. ನೀವು ಕೂಡ ಅರಾಮಾಗಿ ತಯಾರಿಸಿ ತಿನ್ನಬಹುದು. ಮೈದಾ ಹಿಟ್ಟಿನಿಂದ ಮಾಡುವಂತಹ ಈ ಕಲ್ಕಸ್ ಟೇಸ್ಟಿಯಾಗಿರುತ್ತದೆ. ಈ ರೆಸಿಪಿ ಮಾಡುವುದು ಹೇಗೆ ಅಂಥ ನಾವು ನಿಮ್ಗೆ ತಿಳಿಸ್ತೀವಿ. ರೆಸಿಪಿನಾ ತಿಳ್ಕೊಂಡು ನೀವೂ ಟ್ರೈ ಮಾಡಿ ರುಚಿ ನೋಡಿ.
ಕಲ್ಕಲ್ಸ್ ತಯಾರಿಸುವ ವಿಧಾನ ಮೊದಲು ರವೆಯನ್ನು ಪ್ಯಾನ್ನಲ್ಲಿ ಹಾಕಿ ಹುರಿಯಬೇಕು. ಒಂದು ನಿಮಿಷದ ನಂತರ ಗ್ಯಾಸ್ ಆಫ್ ಮಾಡಿ. ಒಂದು ಬೌಲ್‌ನಲ್ಲಿ ಒಂದು ಕಪ್ ಮೈದಾವನ್ನು ತೆಗೆದುಕೊಳ್ಳಿ. ಈಗ ಅದಕ್ಕೆ ಶುದ್ಧತುಪ್ಪವನ್ನು ಹಾಕಿ ಮೈದಾ ಮತ್ತು ತುಪ್ಪವನ್ನು ಕೈಯಲ್ಲಿಯೇ ಚೆನ್ನಾಗಿ ಮಿಕ್ಸ್ ಮಾಡಿ.
ನಂತರ ಅದಕ್ಕೆ ಹುರಿದ ರವೆ ಮತ್ತು ಸಕ್ಕರೆ ಪುಡಿಯನ್ನು ಸೇರಿಸಿ. ಜೊತೆಗೆ ವೆನಿಲ್ಲಾ ಎಸೆನ್ಸ್ ಆ್ಯಡ್ ಮಾಡಿ. ಚಿಟಿಕೆಯಷ್ಟು ಉಪ್ಪನ್ನು ಸೇರಿಸಿ. ಈಗ ಎಲ್ಲವನ್ನು ಕೈಯಲ್ಲಿಯೆ ಮಿಕ್ಸ್ ಮಾಡಿ. ಒಂದು ಬೌಲ್‌ನಲ್ಲಿ ಹಾಲನ್ನು ಸ್ವಲ್ಪಸ್ವಲ್ವವೇ ಹಾಕಿ ಕೈಯಲ್ಲಿಯೇ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಅದು ಉಂಡೆಯಾಕಾರಕ್ಕೆ ಬಂದಿರುತ್ತದೆ. ಈಗ ಪೋರ್ಕ್ ಸ್ಪೂನ್ ತೆಗೆದುಕೊಳ್ಳಿ. ಸಣ್ಣಸಣ್ಣ ಉಂಡೆಗಳನ್ನಾಗಿ ಮಾಡಿ ಪೋರ್ಕ್ನಲ್ಲಿ ಆ ಉಂಡೆಗಳ ಮೇಲೆ ಗೆರೆ ಎಳೆದು ಕಲ್ಕಲ್ಸ್ ಮಾದರಿ ಸಿದ್ಧಪಡಿಸಿಕೊಳ್ಳಿ.
ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿಯಾಗಲು ಇಡಿ. ಕಾದ ಎಣ್ಣೆಯಲ್ಲಿ ಎಲ್ಲಾ ಉಂಡೆಗಳನ್ನು ಹಾಕಿ ಗೋಲ್ಡನ್ ಬ್ರೌನ್ ಕಲರ್ಗೆ ತಿರುಗುವವರೆಗೆ ಫ್ರೈ ಮಾಡಿ. ಇದಾದ ಬಳಿಕ ಈ ಕಲ್ಕಲ್ಸ್ನ ಮೇಲೆ ಶುಗರ್ ಪೌಡರನ್ನು ಸ್ಪೆರ್ಡ್ ಮಾಡಿ. ಈಗ ಕಲ್ಕಲ್ಸ್ ರೆಸಿಪಿ ಸಂಪೂರ್ಣವಾಗಿ ರೆಡಿ ಆಗಿದೆ. ಮನೆಯಲ್ಲಿ ಆರಾಮಾಗಿ ತಿಂದು ಖುಷಿಪಡಿ.
Published On - 3:32 pm, Mon, 21 December 20