ಆ್ಯಪಲ್ ಸಂಸ್ಥೆ ಸಿದ್ಧಪಡಿಸುವ ಮೊಬೈಲ್ಗಳು ಅತಿ ಸುರಕ್ಷಿತ. ಈ ಮೊಬೈಲ್ಗಳಿಂದ ಮಾಹಿತಿ ಕಳುವು ಆಗುವುದು ಅಷ್ಟು ಸುಲಭವಲ್ಲ ಎಂಬುವುದು ಅನೇಕರ ನಂಬಿಕೆ. ಆದರೆ, ಕೆಲವೊಮ್ಮೆ ಆ್ಯಪಲ್ ಸಂಸ್ಥೆಯ ಮೊಬೈಲ್ಗಳಲ್ಲೂ ಸಹ ಕೆಲವೊಂದು ಲೋಪಗಳು (ಬಗ್) ಇರುವುದು ಕಂಡುಬಂದಿದೆ. ಅಂಥದ್ದೇ ಒಂದು ಉದಾಹರಣೆ ಇಲ್ಲಿದೆ ನೋಡಿ.
ವರ್ಷದ ಆರಂಭದಲ್ಲಿ ಆ್ಯಪಲ್ ಮೊಬೈಲ್ನಲ್ಲಿ ಸಮಸ್ಯೆ ಒಂದು ಕಾಣಿಸಿಕೊಂಡಿತ್ತು. ಆ್ಯಪಲ್ ಫೋನ್ ಬಳಸುವ iOS ಕರ್ನಲ್ ಆಪರೇಟಿಂಗ್ ಸಿಸ್ಟಂನಲ್ಲಿ ಕಾಣಿಸಿಕೊಂಡ ಈ ಲೋಪ ಅಥವಾ ಬಗ್ನ ಸಹಾಯದಿಂದ ಹ್ಯಾಕರ್ಗಳು ವೈ-ಫೈ ಸಹಾಯದಿಂದ ಮೊಬೈಲ್ನ ಆ್ಯಕ್ಸೆಸ್ ಪಡೆದುಕೊಳ್ಳಬಹುದಿತ್ತು. ಆ್ಯಕ್ಸೆಸ್ ಪಡೆದ ನಂತರ ಮೊಬೈಲ್ನಲ್ಲಿದ್ದ ಫೈಲ್ಗಳನ್ನುಸುಲಭವಾಗಿ ನಾಶ ಮಾಡುವ ಅವಕಾಶವೂ ಇರುತ್ತಿತ್ತು. ಉದಾಹರಣೆಗೆ, ನೀವು ನಿಮ್ಮ ಆ್ಯಪಲ್ ಫೋನ್ನಲ್ಲಿ ಮುಖ್ಯವಾದ ಫೈಲ್ಗಳನ್ನು (ಫೋಟೋ, ವಿಡಿಯೋ) ಇಟ್ಟುಕೊಂಡಿರುತ್ತೀರಿ ಎಂದು ಅಂದುಕೊಳ್ಳೋಣ. ಆಗ, ಈ ಬಗ್ನ ನೆರವಿನಿಂದ ಹ್ಯಾಕರ್ಗಳು ಆ ಫೈಲ್ಗಳನ್ನು ವಿಶ್ವದ ಯಾವುದೇ ಮೂಲೆಯಿಂದಲೂ ಡಿಲೀಟ್ ಅಥವಾ ನಾಶ ಮಾಡುವ ಅವಕಾಶ ಸಿಗುತ್ತಿತ್ತು.
ಮತ್ತೊಂದು ಶಾಕಿಂಗ್ ವಿಚಾರ ಎಂದರೆ, ಈ ಬಗ್ನಿಂದ ನಿಮ್ಮ ಮೊಬೈಲ್ ಸಮೀಪದಲ್ಲಿರುವ ಮತ್ತೊಂದು ಆ್ಯಪಲ್ ಫೋನ್ನ ಆ್ಯಕ್ಸೆಸ್ ಕೂಡ ಪಡೆಯಬಹುದಾಗಿತ್ತು. ಅದು ಕೂಡ, ಯಾವುದೇ ಹ್ಯಾಕರ್ನ ನೆರವಿಲ್ಲದೆ. ಕೊರೊನಾ ವೈರಸ್ ಹೇಗೆ ಒಬ್ಬರಿಂದ ಒಬ್ಬರಿಗೆ ಹರಡುತ್ತದೋ, ಇದು ಕೂಡ ಹಾಗೆ. ಹಾಗಾಗಿ, ಇದರಿಂದ ಆ ಮೊಬೈಲ್ನ ಫೈಲ್ಗಳನ್ನು ಕೂಡ ಡಿಲೀಟ್ ಅಥವಾ ನಾಶ ಮಾಡಬಹುದಾದ ಸಾಧ್ಯತೆ ಇತ್ತು.
ಅಂದ ಹಾಗೆ, ಇಯನ್ ಬೀರ್ ಎಂಬ ಕಂಪ್ಯೂಟರ್ ತಜ್ಞ ಈ ಲೋಪವನ್ನು ಮೊದಲು ಪತ್ತೆ ಹಚ್ಚಿದರು. ಕೂಡಲೇ ಈ ಬಗ್ಗೆ ಎಚ್ಚೆತ್ತುಕೊಂಡ ಌಪಲ್ ಕಂಪನಿ ಸಮಸ್ಯೆಯನ್ನು ಸರಿಪಡಿಸಿದೆ. ಆ್ಯಪಲ್ ಕಂಪನಿ ಇತಿಹಾಸದಲ್ಲೇ ಇದು ಅತಿದೊಡ್ಡ ದೋಷ ಎಂದು ಪರಿಗಣಿಸಲಾಗಿದೆ. ಆ್ಯಪಲ್ ಮೊಬೈಲ್ಗಳೆಂದರೆ ಅತ್ಯಂತ ಸುರಕ್ಷಿತ ಫೋನ್ ಎಂದೇ ಹೆಸರುವಾಸಿ. ಇದೇ ಕಾರಣಕ್ಕೆ ಜನರು ಇದರ ಖರೀದಿಗೆ ಹೆಚ್ಚು ಒಲವು ತೋರುತ್ತಾರೆ.
Published On - 4:50 pm, Sat, 5 December 20