ಮರಳುಗಾಡಿನಲ್ಲಿ IPL ಬಿರುಗಾಳಿ: ಇಂದು ಗೆಲ್ಲೋದು ಧೋನಿ ದರ್ಬಾರಾ? ರೋಹಿತ್ ಆರ್ಭಟನಾ?
ಆರು ತಿಂಗಳಿಂದ ಕೊರೊನಾದಿಂದ ಯಾವುದೇ ಹೊರಾಂಗಣ ಚಟುವಟಿಕೆಗಳು ಇಲ್ಲದೆ ಮನೆಗಳಲ್ಲೇ ಜಡ್ಡುಗಟ್ಟಿರುವ ಮೈ-ಮನಗಳಿಗೆ ಇಂದಿನಿಂದ ಹೊಸ ಟಾನಿಕ್ ದೊರೆಯಲಿದೆ. ಜಡಭರತ ಭಾರತಕ್ಕೆ, ಇಡೀ ಕ್ರಿಕೆಟ್ ದುನಿಯಾದಲ್ಲಿ ಇಂದಿನಿಂದ ದೊಡ್ಡ ಹಬ್ಬ ಎನಿಸಿರುವ IPL ಕ್ರಿಕೆಟಿಗೆ ಚಾಲನೆ ಸಿಗಲಿದೆ. ಸೆಪ್ಟಂಬರ್ 19.. ಬಂದೇ ಬಿಡ್ತು ನೋಡಿ.. ಇಡೀ ಭಾರತೀಯ ಕ್ರಿಕೆಟ್ಟೇ ಚಾತಕ ಪಕ್ಷಿಯಂತೆ ಕಾಯ್ತಿದ್ದ ಈ ಸೆಪ್ಟಂಬರ್ 19.. ಐಪಿಎಲ್ ಇತಿಹಾಸದಲ್ಲೇ ಇವತ್ತಿನ ದಿನ ಅವಿಸ್ಮರಣೀಯ ಅಂದ್ರೆ ತಪ್ಪಾಗೋಲ್ಲ. ಕಲರ್ಫುಲ್ ಟೂರ್ನಿ ಆರಂಭದಲ್ಲೇ ಬಲಿಷ್ಠ ಮತ್ತು ಭಯಾನಕ ತಂಡಗಳಾದ […]
ಆರು ತಿಂಗಳಿಂದ ಕೊರೊನಾದಿಂದ ಯಾವುದೇ ಹೊರಾಂಗಣ ಚಟುವಟಿಕೆಗಳು ಇಲ್ಲದೆ ಮನೆಗಳಲ್ಲೇ ಜಡ್ಡುಗಟ್ಟಿರುವ ಮೈ-ಮನಗಳಿಗೆ ಇಂದಿನಿಂದ ಹೊಸ ಟಾನಿಕ್ ದೊರೆಯಲಿದೆ. ಜಡಭರತ ಭಾರತಕ್ಕೆ, ಇಡೀ ಕ್ರಿಕೆಟ್ ದುನಿಯಾದಲ್ಲಿ ಇಂದಿನಿಂದ ದೊಡ್ಡ ಹಬ್ಬ ಎನಿಸಿರುವ IPL ಕ್ರಿಕೆಟಿಗೆ ಚಾಲನೆ ಸಿಗಲಿದೆ.
ಸೆಪ್ಟಂಬರ್ 19.. ಬಂದೇ ಬಿಡ್ತು ನೋಡಿ.. ಇಡೀ ಭಾರತೀಯ ಕ್ರಿಕೆಟ್ಟೇ ಚಾತಕ ಪಕ್ಷಿಯಂತೆ ಕಾಯ್ತಿದ್ದ ಈ ಸೆಪ್ಟಂಬರ್ 19.. ಐಪಿಎಲ್ ಇತಿಹಾಸದಲ್ಲೇ ಇವತ್ತಿನ ದಿನ ಅವಿಸ್ಮರಣೀಯ ಅಂದ್ರೆ ತಪ್ಪಾಗೋಲ್ಲ. ಕಲರ್ಫುಲ್ ಟೂರ್ನಿ ಆರಂಭದಲ್ಲೇ ಬಲಿಷ್ಠ ಮತ್ತು ಭಯಾನಕ ತಂಡಗಳಾದ ಚೆನ್ನೈ ಮತ್ತು ಮುಂಬೈ ಎದುರು ಬದುರಾಗ್ತಿವೆ.
ಮರಳುಗಾಡಿನ ಮಹಾಯುದ್ಧದ ಉದ್ಘಾಟನಾ ಪಂದ್ಯಕ್ಕೆ ಅಬುಧಾಬಿ ಮೈದಾನ ಸಾಕ್ಷಿಯಾಗ್ತಿದೆ. ಪ್ರೇಕ್ಷಕರೇ ಇಲ್ಲದ ಖಾಲಿ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದ್ರೂ, ಚೆನ್ನೈ ಮತ್ತು ಮುಂಬೈ ನಡುವಿನ ರಣರೋಚಕ ಸೆಣಸಾಟ ಅಭಿಮಾನಿಗಳ ಉಸಿರು ಬಿಗಿಹಿಡಿಯುವಂತೆ ಮಾಡುತ್ತೆ.
ನೋ ಡೌಟ.. ಅಬುಧಾಬಿ ಸಮರ ಈ ಪಾಟಿ ಹವಾ ಕ್ರಿಯೇಟ್ ಮಾಡಿರೋದಕ್ಕೆ ಪ್ರಮುಖ ಕಾರಣವೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ತಲಾ ಮಹೇಂದ್ರ ಸಿಂಗ್ ಧೋನಿ.
14 ತಿಂಗಳ ಬಳಿಕ ಮೈದಾನಕ್ಕಿಳಿಯುತ್ತಿದ್ದಾರೆ ಧೋನಿ! ಅಂತರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಿರುವ ಧೋನಿ, 14 ತಿಂಗಳ ಬಳಿಕ ಅಭಿಮಾನಿಗಳಿಗೆ ಮೈದಾನದಲ್ಲಿ ದರ್ಶನ ನೀಡುತ್ತಿದ್ದಾರೆ. ಹೀಗಾಗಿ ಹಳದಿ ಬಣ್ಣದ ಜೆರ್ಸಿ ತೊಡೋ ಧೋನಿ ಮೇಲೆ, ಅಭಿಮಾನಿಗಳು ಬಣ್ಣ ಬಣ್ಣದ ಕನಸುಗಳನ್ನಿಟ್ಟುಕೊಂಡಿದ್ದಾರೆ.
ತಲಾ ಧೋನಿ ಮೇಲೆ ಅಭಿಮಾನಿಗಳು ಕಲರ್ ಕಲರ್ ಕನಸುಗಳನ್ನಿಟ್ಟುಕೊಂಡಿದ್ದಾರೆ ನಿಜ. ಆದ್ರೆ ಅಭಿಮಾನಿಗಳ ಬಣ್ಣದ ಕನಸು ನನಸು ಮಾಡಲು ಹೊರಟಿರೋ ಧೋನಿ ಮುಂದೆ, ಸಾಕಷ್ಟು ಸವಾಲುಗಳಿವೆ. ಪ್ರತಿ ಸೀಸನ್ನಲ್ಲೂ ಧೋನಿ ಚೆನ್ನೈ ತಂಡದ ಮೇಲೆ ಸಂದೇಹವೇ ಇರದಂತೆ ನೋಡಿಕೊಳ್ಳುತ್ತಿದ್ರು. ಆದ್ರೆ ಈ ಸೀಸನ್ನಲ್ಲಿ ಸುರೇಶ್ ರೈನಾ ಅಲಭ್ಯತೆ ಮತ್ತು ಹರ್ಭಜನ್ ಸಿಂಗ್ ಅನುಪಸ್ಥಿತಿ.. ಮಹೇಂದ್ರನ ತಂಡದ ಸಾಮರ್ಥ್ಯವನ್ನ ಪ್ರಶ್ನೆ ಮಾಡೋ ಹಾಗೇ ಮಾಡಿದೆ.
ಸವಾಲಿನ ನಡುವೆಯೂ ಸೇಡಿನ ಸಮರಕ್ಕೆ ತೊಡೆ ತಟ್ಟಿದ ಧೋನಿ! ಕಳೆದ ಸೀಸನ್ನ ಫೈನಲ್ನಲ್ಲಿ ಧೋನಿ ನಾಯಕತ್ವದ ಚೆನ್ನೈ ತಂಡ, ಮುಂಬೈ ಎದುರು ಮುಗ್ಗರಿಸಿತ್ತು. ಕಳೆದ ಸೀಸನ್ನಲ್ಲಿ ಮಾತ್ರವಲ್ಲ.. ಮೂರು ಬಾರಿ ಚೆನ್ನೈ ತಂಡವನ್ನ ಮುಂಬೈ ಫೈನಲ್ನಲ್ಲಿ ಮಣಿಸಿದೆ. ಹೀಗಾಗಿ ಈ ಬಾರಿ ರೈನಾ, ಭಜ್ಜಿ ಅಲಭ್ಯತೆಯ ನಡುವೆಯೂ ಧೋನಿ ಮುಂಬೈ ವಿರುದ್ಧ ಸೇಡು ತೀರಿಸಿಕೊಳ್ಳೋದಕ್ಕೆ ಸಜ್ಜಾಗಿದ್ದಾರೆ.
ಚಾಂಪಿಯನ್ ಓಟ ಮುಂದುವರಿಸೋಕೆ ಮುಂಬೈ ರೆಡಿ! ಕಳೆದ ಸೀಸನ್ನಲ್ಲಿ ಇದೇ ಚೆನ್ನೈ ತಂಡವನ್ನ ಫೈನಲ್ನಲ್ಲಿ ಮಣಿಸಿರೋ ಮುಂಬೈ, ಮರಳುಗಾಡಿನಲ್ಲೂ ಚೆನ್ನೈ ವಿರುದ್ಧ ಚಾಂಪಿಯನ್ ಓಟ ಮುಂದುವರಿಸೋ ವಿಶ್ವಾಸದಲ್ಲಿದೆ. ರೋಹಿತ್ ಶರ್ಮಾ ನಾಯಕತ್ವದ ಮುಂಬೈ ತಂಡದಲ್ಲಿ ಟಿಟ್ವೆಂಟಿ ಕ್ರಿಕೆಟ್ಗೆ ಹೇಳಿ ಮಾಡಿಸಿದ ಆಟಗಾರರೇ ತುಂಬಿದ್ದಾರೆ.
ಐಪಿಎಲ್ನಲ್ಲಿ ಚೆನ್ನೈ, ಮುಂಬೈ ಐಪಿಎಲ್ನಲ್ಲಿ ಇದುವರೆಗೂ ಚೆನ್ನೈ ಮತ್ತು ಮುಂಬೈ 28 ಬಾರಿ ಮುಖಾಮುಖಿಯಾಗಿದೆ. ಮುಂಬೈ 17 ಬಾರಿ ಗೆಲುವು ದಾಖಲಿಸಿ ಪ್ರಾಭಲ್ಯ ಸಾಧಿಸಿದ್ರೆ, ಚೆನ್ನೈ 11 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ.
ದಿಗ್ಗಜರಿಂದ ರೋಹಿತ್ಗೆ ಜೈ.. ಲೆಕ್ಕಾಚಾರ ಉಲ್ಟಾ ಮಾಡ್ತಾರಾ ಧೋನಿ? ಈಗಾಗಲೇ ದಿಗ್ಗಜ ಕ್ರಿಕೆಟಿಗರೆಲ್ಲಾ.. ಅಬುಧಾಬಿಯಲ್ಲಿ ರಣಕೇಕೆ ಹಾಕೊದು ರೋಹಿತ್ ಶರ್ಮಾ ನಾಯಕತ್ವದ ಮುಂಬೈ ತಂಡ ಎಂದು ವಿಶ್ಲೇಷಣೆ ಮಾಡುತ್ತಿದ್ದಾರೆ. ದಿಗ್ಗಜ ಸುನಿಲ್ ಗವಾಸ್ಕರ್ ಸೇರಿದಂತೆ ಮಾಜಿ ಕ್ರಿಕೆಟಿಗರಾದ ಡೀನ್ ಜಾನ್ಸ್, ಸಂಜಯ್ ಬಂಗಾರ್, ಚೆನ್ನೈ ತಂಡದ ಸಮಸ್ಯೆಗಳತ್ತ ಬೊಟ್ಟು ಮಾಡಿದ್ದಾರೆ. ಅದ್ರೆ ತಂಡದಲ್ಲಿರೋ ಸಮಸ್ಯೆಗಳನ್ನ ಮೆಟ್ಟಿ ನಿಲ್ಲೋದನ್ನ, ಚಾಂಪಿಯನ್ ನಾಯಕ ಧೋನಿಗೆ ಹೇಳಿಕೊಡಬೇಕಾಗಿಲ್ಲ.
ಅಬುಧಾಬಿಯಲ್ಲಿ ಮುಂಬೈ ಗೆಲುವಿನ ಹಣೆ ಪಟ್ಟಿ ಹೊತ್ತುಕೊಂಡು ಕಣಕ್ಕಿಳಿಯುತ್ತಿದೆ ನಿಜ. ಆದ್ರೆ ರೋಹಿತ್ಗೆ, ಮಹೇಂದ್ರ ಮುಟ್ಟಿನೋಡಿಕೊಳ್ಳುವಂತ ಏಟು ಕೊಡ್ತಾರೆ ಅನ್ನೋ ನಂಬಿಕೆಯನ್ನ ಅಭಿಮಾನಿಗಳು ಕಳೆದುಕೊಂಡಿಲ್ಲ. ಇದೇ ಕ್ಯಾಪ್ಟನ್ ಧೋನಿ ಮೇನಿಯಾ.
Published On - 8:03 am, Sat, 19 September 20