
ಬೆಳಗಾವಿ: 2 ಕುಟುಂಬಗಳ ನಡುವಿನ ಗಲಾಟೆಯಲ್ಲಿ ವ್ಯಕ್ತಿಗೆ ಗಂಭೀರ ಗಾಯಗಳಾಗಿದ್ದು, ಗಾಯಗಳೊಂದಿಗೆ ದೂರು ನೀಡುವುದಕ್ಕೆ ಠಾಣೆಗೆ ವ್ಯಕ್ತಿ ಭೇಟಿ ನೀಡಿದ್ದಾನೆ. ಆದರೆ ತೀವ್ರ ನೋವಿನಿಂದ ಗಾಯಾಳು ಠಾಣೆಯ ಮುಂದೆ ನರಳಾಡುತ್ತಿದ್ದರೂ ಸಹ ಠಾಣಾ ಪೊಲೀಸರು ದೂರು ದಾಖಲಿಸಿಕೊಳ್ಳದೆ ನಿದ್ದೆ ಹೊಡೆಯುತ್ತಿದ್ದ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಕಟಕೋಳ ಠಾಣೆಯಲ್ಲಿ ನೆಡೆದಿದೆ.
ಆದರೆ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರೂ ದೂರು ದಾಖಲಿಸಿಕೊಳ್ಳದೇ ಕಟಕೋಳ ಪೊಲೀಸರು ಬೇಜವಾಬ್ದಾರಿ ತೋರಿದ್ದಾರೆ ಎಂದು ಗಾಯಾಳು ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ. ಠಾಣೆ ಹೊರಗೆ ಗಾಯಾಳು ಬಿದ್ದು ಒದ್ದಾಡುತ್ತಿದ್ದರೆ ಠಾಣೆ ಒಳಗೆ ಸಿಬ್ಬಂದಿ ನಿದ್ದೆ ಮಾಡುತ್ತಿದ್ದರು. ಜೊತೆಗೆ FIR ದಾಖಲಿಸಲು ವಿಳಂಬ ಮಾಡಿದರು ಎಂದು ಕಟಕೋಳ ಪೊಲೀಸ್ ಠಾಣೆ ಸಿಬ್ಬಂದಿ ವಿರುದ್ಧ ಗಾಯಾಳು ಮಾರುತಿ ಮಾದರ್ ಆರೋಪ ಮಾಡಿದ್ದಾರೆ.