ಬೆಂಗಳೂರು: ನಗರದ ಕೆಜೆ.ಹಳ್ಳಿಯಲ್ಲಿ ISD, NIA ಅಧಿಕಾರಿಗಳಿಂದ ಶಂಕಿತ ಐಸಿಸ್ ಉಗ್ರನ ಬಂಧನವಾಗಿದೆ. ಸಿನಿಮೀಯ ರೀತಿಯಲ್ಲಿ ಉಗ್ರ ಫಜಿ ಉರ್ ರೆಹಮಾನ್ ಬೆನ್ನಟ್ಟಿ ಎನ್‌ಐಎ ಅಧಿಕಾರಿಗಳು ಕೆಜೆ.ಹಳ್ಳಿಯ ಟ್ಯಾನರಿ ರಸ್ತೆಯಲ್ಲಿ ಬಂಧಿಸಿದ್ದಾರೆ.
ಶಂಕಿತ ಉಗ್ರ ಫಜಿ ಉರ್ ರೆಹಮಾನ್ ಅಲ್ಹಿಂದ್ ಸಂಘಟನೆಯಲ್ಲಿ ಹಾಗೂ ಮೆಹಬೂಬ್, ಖ್ವಾಜಿ ತಂಡದ ಜತೆ ಗುರುತಿಸಿಕೊಂಡಿದ್ದ. ಕಳೆದ 2 ದಿನಗಳ ಹಿಂದೆ NIA ಅಧಿಕಾರಿಗಳು ರಾಜ್ಯಾದ್ಯಂತ 19 ಕಡೆ ದಾಳಿ ನಡೆಸಿದ್ದರು. ಈ ವೇಳೆ ಫಜಿ ಉರ್ ರೆಹಮಾನ್ ಕಾನಿಸಿಕೊಂಡಿದ್ದಾರೆ. ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದ್ದಾನೆ. ಆದರೆ ಬೆನ್ನಟ್ಟಿದ ಅಧಿಕಾರಿಗಳು ಈತನನ್ನು ಬಂಧಿಸಿದ್ದಾರೆ.
Published On - 2:00 pm, Wed, 26 February 20