ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಜಾಲದ ನಂಟು ಆರೋಪ ಕೇಸ್ಗೆ ಸಂಬಂಧಿಸಿದಂತೆ ನಟ ಲೂಸ್ ಮಾದ ಯೋಗೀಶ್ ಹಾಗೂ ಮಾಜಿ ಕ್ರಿಕೆಟಿಗ NC ಅಯ್ಯಪ್ಪರ ವಿಚಾರಣೆ ಸಹ ನಡೆಸಲಾಗಿದೆ ಎಂಬ ಮಾಹಿತಿ ದೊರೆತಿದೆ. ಆಂತರಿಕ ಭದ್ರತಾ ವಿಭಾಗದ ಪೊಲೀಸರಿಂದ ವಿಚಾರಣೆ ನಡೆದಿದ್ದು ಡ್ರಗ್ ಪೆಡ್ಲರ್ ಒಬ್ಬನ ಹೇಳಿಕೆ ಆಧಾರದ ಮೇಲೆ ವಿಚಾರಣೆ ನಡೆಸಲಾಯಿತು ಎಂದು ಹೇಳಲಾಗಿದೆ. ಇಬ್ಬರನ್ನು ಶಾಂತಿನಗರದ ಕೇಂದ್ರ ಕಚೇರಿಯಲ್ಲಿ ವಿಚಾರಣೆ ಮಾಡಿದ್ದೇವೆ ಎಂದು ಆಂತರಿಕ ಭದ್ರತಾ ವಿಭಾಗದ ADGP ಭಾಸ್ಕರ್ ರಾವ್ ಮಾಹಿತಿ ನೀಡಿದ್ದಾರೆ.
ಜೊತೆಗೆ, ಇಂದು ನಟ ಯೋಗೀಶ್ ಹಾಗೂ ಖಾಸಗಿ ವಾಹಿನಿಯೊಂದರಅಸೋಸಿಯೇಟೆಡ್ ಪ್ರೊಡ್ಯೂಸರ್ ನಿಶ್ಚಿತಾ ಶರತ್ರ ವಿಚಾರಣೆ ನಡೆಸಲಾಗಿದೆ. ಈ ವೇಳೆ ನಾನೊಬ್ಬ ನಟ. ನನಗೆ ಡ್ರಗ್ ಪೆಡ್ಲರ್ಗಳ ಸಂಪರ್ಕವಿಲ್ಲ ಎಂದು ನಟ ಯೋಗೀಶ್ ಹೇಳಿದ್ದಾರಂತೆ.
ಇದಲ್ಲದೆ, ಮತ್ತಿಬ್ಬರಿಗೆ ನಾಳೆ ವಿಚಾರಣೆಗೆ ಹಾಜರಾಗಲು ISDಯಿಂದ ನೋಟಿಸ್ ಸಹ ಹೊರಡಿಸಲಾಗಿದೆ. ಅಭಿಷೇಕ್ ಹಾಗೂ ಕಿರುತೆರೆ ನಟಿ ಗೀತಾ ಭಾರತಿ ಭಟ್ಗೆ ನೋಟಿಸ್ ನೀಡಲಾಗಿದ್ದು ನಾಳೆ ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.