ಸರ್ಕಾರ ಕಾಲೇಜು ತೆರೆಯಬೇಡಿ ಅಂದ್ರೂ ಡೋಂಟ್ ಕೇರ್! ಪದವಿ ಪರೀಕ್ಷೆ ನಡೆಸೋಕೆ ರೆಡಿಯಾಗಿದೆ ನ್ಯಾಷನಲ್ ಕಾಲೇಜು

ಬೆಂಗಳೂರು: ಕೊರೊನಾದಿಂದಾಗಿ ಸರ್ಕಾರ ಲಾಕ್​ಡೌನ್ ಹೇರಿತ್ತು. ಈಗ ಲಾಕ್​ಡೌನ್ ಬಹಳಷ್ಟು ಸಡಿಲಿಕೆಯಾಗಿ ಫ್ರೀಡೌನ್ ಆಗಿದೆ. ಆದರೆ ಕೊರೊನಾ ಸೋಂಕಿತರ ಸಂಕ್ಯೆ ಕೂಡ ದಿನೇ ದಿನೆ ಹೆಚ್ಚಾಗ್ತಾನೆ ಇದೆ. ಆದರೆ ಇಲ್ಲೊಂದು ಕಾಲೇಜು ಸರ್ಕಾರ ತೆರೆಯಬೇಡಿ ಅಂದ್ರೂ ಶುಲ್ಕ ಪಡೆಯಲು ಆಡಳಿತ ಮಂಡಳಿ ಕಾಲೇಜು ಓಪನ್ ಮಾಡಿದೆ. ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಕಾಳಜಿ ಇಲ್ವಾ ಈ ಕಾಲೇಜಿಗೆ ಎನ್ನವಂತಾಗಿದೆ. ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ಶುಲ್ಕ ವಸೂಲಿಗೆ ಕಾಲೇಜನ್ನು ಓಪನ್ ಮಾಡಲಾಗಿದೆ. ಹಾಗೂ ಜೂನ್ 15ರ ನಂತರ ಪ್ರಾಕ್ಟಿಕಲ್ ಪರೀಕ್ಷೆ […]

ಸರ್ಕಾರ ಕಾಲೇಜು ತೆರೆಯಬೇಡಿ ಅಂದ್ರೂ ಡೋಂಟ್ ಕೇರ್! ಪದವಿ ಪರೀಕ್ಷೆ ನಡೆಸೋಕೆ ರೆಡಿಯಾಗಿದೆ ನ್ಯಾಷನಲ್ ಕಾಲೇಜು

Updated on: Jun 05, 2020 | 3:19 PM

ಬೆಂಗಳೂರು: ಕೊರೊನಾದಿಂದಾಗಿ ಸರ್ಕಾರ ಲಾಕ್​ಡೌನ್ ಹೇರಿತ್ತು. ಈಗ ಲಾಕ್​ಡೌನ್ ಬಹಳಷ್ಟು ಸಡಿಲಿಕೆಯಾಗಿ ಫ್ರೀಡೌನ್ ಆಗಿದೆ. ಆದರೆ ಕೊರೊನಾ ಸೋಂಕಿತರ ಸಂಕ್ಯೆ ಕೂಡ ದಿನೇ ದಿನೆ ಹೆಚ್ಚಾಗ್ತಾನೆ ಇದೆ. ಆದರೆ ಇಲ್ಲೊಂದು ಕಾಲೇಜು ಸರ್ಕಾರ ತೆರೆಯಬೇಡಿ ಅಂದ್ರೂ ಶುಲ್ಕ ಪಡೆಯಲು ಆಡಳಿತ ಮಂಡಳಿ ಕಾಲೇಜು ಓಪನ್ ಮಾಡಿದೆ. ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಕಾಳಜಿ ಇಲ್ವಾ ಈ ಕಾಲೇಜಿಗೆ ಎನ್ನವಂತಾಗಿದೆ.

ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ಶುಲ್ಕ ವಸೂಲಿಗೆ ಕಾಲೇಜನ್ನು ಓಪನ್ ಮಾಡಲಾಗಿದೆ. ಹಾಗೂ ಜೂನ್ 15ರ ನಂತರ ಪ್ರಾಕ್ಟಿಕಲ್ ಪರೀಕ್ಷೆ ನಡೆಸಲು ಆಡಳಿತ ಮಂಡಳಿ ತೀರ್ಮಾನ ಕೈಗೊಂಡಿದೆ. ಜುಲೈ 1ರ ನಂತರ ಪದವಿ ಪರೀಕ್ಷೆ ನಡೆಸುವುದಾಗಿ ವಿದ್ಯಾರ್ಥಿಗಳಿಗೆ ಸುತ್ತೋಲೆ ಹೊರಡಿಸಿಲಾಗಿತ್ತು. ಹೀಗಾಗಿ ಇಂದು ಫೀಸ್ ವಸೂಲಿಗೆ ಕಾಲೇಜು ಆಡಳಿತ ಮಂಡಳಿ ಮುಂದಾಗಿದೆ.

ಹೀಗಾಗಿ ವಿದ್ಯಾರ್ಥಿಗಳ ಬಗ್ಗೆ ಕಾಳಜಿಯೇ ಇಲ್ವಾ? ಪರೀಕ್ಷೆ ಮುಖ್ಯನಾ? ವಿದ್ಯಾರ್ಥಿಗಳ ಜೀವ ಮುಖ್ಯನಾ? ಎನ್ನುವಂತಾಗಿದೆ. ಕಾಲೇಜು ಆರಂಭವಾದ್ರೆ, ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುವುದು ಕಟ್ಟಿಟ್ಟಬುತ್ತಿ. ಪ್ರಥಮ ಮತ್ತು ದ್ವಿತೀಯ ಪದವಿ ಪರೀಕ್ಷೆ ನಡೆಸದಿರಲು ಕೇಂದ್ರದ ಚಿಂತನೆ ನಡೆಸಿದೆ. ಆದ್ರೆ, ನ್ಯಾಷನಲ್ ಕಾಲೇಜು ಪರೀಕ್ಷೆ ನಡೆಸಲು ಮುಂದಾಗಿದೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

Published On - 11:51 am, Fri, 5 June 20