
ತುಮಕೂರು: ಜೆಡಿಎಸ್ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಶಿರಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಅಮ್ಮಾಜಮ್ಮ ಉಮೇದುವಾರಿಕೆ ಆಖೈರುಗೊಳಿಸಿದ ದಿನದಂದೇ ವೈಯಕ್ತಿವಾಗಿ ಅಮ್ಮಾಜಮ್ಮಗೆ ಮತ್ತು ಪಕ್ಷಕ್ಕೆ ಭಾರಿ ಹೊಡೆತವೊಂದು ಬಿದ್ದಿತ್ತು. ಚುನಾವಣೆ ಕಣದಲ್ಲಿ ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಳ್ಳಬೇಕಿದ್ದ ಅಮ್ಮಾಜಮ್ಮಗೆ ಮಹಾಮಾರಿ ಕೊರೊನಾ ಅಂಟಿಕೊಂಡಿತ್ತು. ಇದು ಚುನಾವಣಾ ಪ್ರಚಾರದ ಮೇಲೆ ಕರಿನೆರಳು ಬೀರಿದೆ.
ಕೊರೊನಾ ಕಾರಣಕ್ಕೆ ಅಮ್ಮಾಜಮ್ಮ ಹಾಜರಿಲ್ಲ
ಜೆಡಿಎಸ್ ಅಭ್ಯರ್ಥಿಯ ಪರ ನಾಮಪತ್ರ ಸಲ್ಲಿಸಲು ಸಂಸದ ಪ್ರಜ್ವಲ್ ರೇವಣ್ಣ, ಶಾಸಕರುಗಳಾದ ರೇವಣ್ಣ, ಗೌರಿಶಂಕರ್, ಹೆಚ್ ಕೆ ಕುಮಾರಸ್ವಾಮಿ ಸೇರಿದಂತೆ ಹಲವರು ಆಗಮಿಸಿದ್ದರು. ಜೆಡಿಎಸ್ ನಾಯಕರು ಪಕ್ಷದ ಸಾವಿರಾರು ಕಾರ್ಯಕರ್ತರು ಜೊತೆಗೂಡಿ ಕೊನೆಗೂ ನಾಮಪತ್ರ ಸಲ್ಲಿಸಿದರು.
Published On - 3:16 pm, Wed, 14 October 20