ಮದ್ಯ ಮಾರಾಟಗಾರರ ಪಡಿಪಾಟಲು.. ಸರ್ಕಾರದ ಮುಂದೆ ಅಹವಾಲುಗಳ ಸನ್ನದು ಹೀಗಿದೆ
ಬೆಂಗಳೂರು: ರಾಜ್ಯದ ಚಿಲ್ಲರೆ ಮದ್ಯ ಮಾರಾಟಗಾರರ ಬಹುಕಾಲದ ಬೇಡಿಕೆಗಳತ್ತ ಸರ್ಕಾರದ ಗಮನವನ್ನು ಸೆಳೆಯಲು ಫೆಡರೇಷನ್ ಆಫ್ ವೈನ್ ಮರ್ಚಂಟ್ ಅಸೋಸಿಯೇಷನ್ ಇಂದು ಒಂದು ದಿನ ಪರ್ಮಿಟ್ ಚಳುವಳಿ ನಡೆಸಿದೆ. ಪರ್ಮಿಟ್ ಚಳವಳಿ ಪ್ರಕಾರ ಇಂದು ರಾಜ್ಯದ ಸನ್ನದುದಾರರು ಮದ್ಯ ಖರೀದಿ ಮಾಡದಿರಲು ನಿರ್ಧರಿಸಿದ್ದಾರೆ. ಚಿಲ್ಲರೆ ಮದ್ಯ ಮಾರಾಟಗಾರರ ಪ್ರಮುಖ ಬೇಡಿಕೆಗಳು: 1. ಆನ್ ಲೈನ್ ಮದ್ಯ ಮಾರಾಟ ಪ್ರಸ್ತಾಪ ಕೈಬಿಡಬೇಕು. 2. ಜನಗಣತಿ 2011 ಅನ್ವಯ 300 ಅಥವಾ ಅದಕ್ಕಿಂತ ಹೆಚ್ಚು ಜನಸಂಖ್ಯೆಯುಳ್ಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ […]
ಬೆಂಗಳೂರು: ರಾಜ್ಯದ ಚಿಲ್ಲರೆ ಮದ್ಯ ಮಾರಾಟಗಾರರ ಬಹುಕಾಲದ ಬೇಡಿಕೆಗಳತ್ತ ಸರ್ಕಾರದ ಗಮನವನ್ನು ಸೆಳೆಯಲು ಫೆಡರೇಷನ್ ಆಫ್ ವೈನ್ ಮರ್ಚಂಟ್ ಅಸೋಸಿಯೇಷನ್ ಇಂದು ಒಂದು ದಿನ ಪರ್ಮಿಟ್ ಚಳುವಳಿ ನಡೆಸಿದೆ. ಪರ್ಮಿಟ್ ಚಳವಳಿ ಪ್ರಕಾರ ಇಂದು ರಾಜ್ಯದ ಸನ್ನದುದಾರರು ಮದ್ಯ ಖರೀದಿ ಮಾಡದಿರಲು ನಿರ್ಧರಿಸಿದ್ದಾರೆ.
ಚಿಲ್ಲರೆ ಮದ್ಯ ಮಾರಾಟಗಾರರ ಪ್ರಮುಖ ಬೇಡಿಕೆಗಳು: 1. ಆನ್ ಲೈನ್ ಮದ್ಯ ಮಾರಾಟ ಪ್ರಸ್ತಾಪ ಕೈಬಿಡಬೇಕು. 2. ಜನಗಣತಿ 2011 ಅನ್ವಯ 300 ಅಥವಾ ಅದಕ್ಕಿಂತ ಹೆಚ್ಚು ಜನಸಂಖ್ಯೆಯುಳ್ಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಾದು ಹೋಗುವ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಇಕ್ಕೆಲಗಳಲ್ಲಿ ಸಿಎಲ್ 6ಎ ಮತ್ತು ಸಿ ಎಲ್ 7 ಸನ್ನದು ಪ್ರಾರಂಭಿಸಲು ನೀಡಿರುವ ಅನುಮತಿ ರದ್ದುಗೊಳಿಸ ಬೇಕು. 3. ಹೊಸ MSIL ಅಂಗಡಿ ತೆರೆಯುವುದನ್ನು ತಡೆಹಿಡಿಯಬೇಕು. 4. ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಸನ್ನದುದಾರರಿಗೆ ಆಗಿರುವ ನಷ್ಟಕ್ಕೆ ಪರಿಹಾರ ನೀಡಬೇಕು. 5. ಅಬಕಾರಿ ಅಧಿಕಾರಿಗಳು ಲಂಚಕ್ಕಾಗಿ ಸನ್ನದುದಾರರಿಗೆ ತೊಂದರೆ ನೀಡುತ್ತಿರುವುದಕ್ಕೆ ಕಡಿವಾಣ ಹಾಕಬೇಕು. 6. ಕೊವಿಡ್ ಸಂದರ್ಭದಲ್ಲಿ ಹೆಚ್ಚಳ ಮಾಡಿರುವ ಹೆಚ್ಚುವರಿ ಅಬಕಾರಿ ಶುಲ್ಕವನ್ನು ಕಡಿಮೆ ಮಾಡಬೇಕು. ಹೀಗೆ ಅನೇಕ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಚಳವಳಿ ನಡೆಸುತ್ತಿದ್ದಾರೆ.