AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

DC ಕಚೇರಿಯಲ್ಲಿ ಹಾವು ಪ್ರತ್ಯಕ್ಷ! ಕೆಲಸ ಬಿಟ್ಟು ಓಡಿ ಹೋದ ಸಿಬ್ಬಂದಿ..

ಚಿಕ್ಕಮಗಳೂರು: ಕೆರೆ ಹಾವೊಂದು ಅತ್ತಿಂದಿತ್ತ ಓಡಾಡಿ ಸಿಬ್ಬಂದಿಗಳಲ್ಲಿ ಆತಂಕ ಹುಟ್ಟಿಸಿದ್ದ ಪ್ರಸಂಗ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು. ಜಿಲ್ಲಾಧಿಕಾರಿ ಕಚೇರಿ ಆವರಣದ ಮಧ್ಯದಲ್ಲಿ ಗಾಂಧಿ ಪ್ರತಿಮೆ ಸುತ್ತಲೂ ಇರೋ ಹುಲ್ಲು ಹಾಸಿನ ಮೇಲೆ ಕೆರೆ ಹಾವನ್ನ ಕಂಡು ಸಿಬ್ಬಂದಿಗಳು ಹಾಗೂ ಕೆಲಸಕ್ಕೆ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದ ಜನಸಾಮಾನ್ಯರು ಗಾಬರಿಯಾಗಿದ್ದರು. ಒಂದು ಆಫೀಸಿನಿಂದ ಮತ್ತೊಂದು ಆಫೀಸ್ ಗೆ ಹೋಗುವಾಗ ಹಾವನ್ನ ಕಂಡ ಸಿಬ್ಬಂದಿಗಳು ಗಾಬರಿಗೊಂಡಿದ್ದರು.‌ ಅತ್ಯಂತ ವೇಗವಾಗಿ ಓಡುವ ಕೆರೆ ಹಾವು ಸಿಬ್ಬಂದಿಗಳ ಜೊತೆ ಕಣ್ಣಾಮುಚ್ಚಾಲೆ ಆಟವಾಡ್ತ ನೋಡ-ನೋಡ್ತಿದ್ದಂತೆ […]

DC ಕಚೇರಿಯಲ್ಲಿ ಹಾವು ಪ್ರತ್ಯಕ್ಷ! ಕೆಲಸ ಬಿಟ್ಟು ಓಡಿ ಹೋದ ಸಿಬ್ಬಂದಿ..
ಸಾಧು ಶ್ರೀನಾಥ್​
| Edited By: |

Updated on: Oct 14, 2020 | 1:57 PM

Share

ಚಿಕ್ಕಮಗಳೂರು: ಕೆರೆ ಹಾವೊಂದು ಅತ್ತಿಂದಿತ್ತ ಓಡಾಡಿ ಸಿಬ್ಬಂದಿಗಳಲ್ಲಿ ಆತಂಕ ಹುಟ್ಟಿಸಿದ್ದ ಪ್ರಸಂಗ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು. ಜಿಲ್ಲಾಧಿಕಾರಿ ಕಚೇರಿ ಆವರಣದ ಮಧ್ಯದಲ್ಲಿ ಗಾಂಧಿ ಪ್ರತಿಮೆ ಸುತ್ತಲೂ ಇರೋ ಹುಲ್ಲು ಹಾಸಿನ ಮೇಲೆ ಕೆರೆ ಹಾವನ್ನ ಕಂಡು ಸಿಬ್ಬಂದಿಗಳು ಹಾಗೂ ಕೆಲಸಕ್ಕೆ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದ ಜನಸಾಮಾನ್ಯರು ಗಾಬರಿಯಾಗಿದ್ದರು.

ಒಂದು ಆಫೀಸಿನಿಂದ ಮತ್ತೊಂದು ಆಫೀಸ್ ಗೆ ಹೋಗುವಾಗ ಹಾವನ್ನ ಕಂಡ ಸಿಬ್ಬಂದಿಗಳು ಗಾಬರಿಗೊಂಡಿದ್ದರು.‌ ಅತ್ಯಂತ ವೇಗವಾಗಿ ಓಡುವ ಕೆರೆ ಹಾವು ಸಿಬ್ಬಂದಿಗಳ ಜೊತೆ ಕಣ್ಣಾಮುಚ್ಚಾಲೆ ಆಟವಾಡ್ತ ನೋಡ-ನೋಡ್ತಿದ್ದಂತೆ ಮಾಯವಾಗ್ತಿತ್ತು. ಇದರಿಂದ ಸಿಬ್ಬಂದಿಗಳ ಭಯ ಮತ್ತಷ್ಟು ಹೆಚ್ಚಾಗಿತ್ತು. ಸಿಬ್ಬಂದಿಗಳ ಜೊತೆ ಕಣ್ಣಾಮುಚ್ಚಾಲೆ ಆಟವಾಡಿದ ಕೆರೆ ಹಾವು ಬಳಿಕ ಪೈಪ್ ಒಳಗೆ ಸೇರಿತ್ತು.

ಸೆರೆ ಹಿಡಿದ ಹಾವನ್ನ ಕೈಯಲ್ಲಿ ಹಿಡಿದು ಖುಷಿ ಪಟ್ಟ ಸಿಬ್ಬಂದಿ ಕೂಡಲೇ ಡಿಸಿ ಕಚೇರಿ ಸಿಬ್ಬಂದಿಗಳು, ಸ್ನೇಕ್ ನರೇಶ್ ಗೆ ವಿಷಯ ಮುಟ್ಟಿಸಿದ್ರು. ಸ್ಥಳಕ್ಕೆ ಬಂದ ಉರಗಪ್ರಿಯ ಸ್ನೇಕ್ ನರೇಶ್ ಅರ್ಧ ಗಂಟೆಗಳ ಕಾಲ ಹಾವನ್ನ ಹುಡುಕಿದರು. ಕೊನೆಗೆ ಪೈಪನ್ನ ಮೇಲೆತ್ತುತ್ತಿದ್ದಂತೆ ನಿಧಾನವಾಗಿ ಹೊರ ಬಂದ ಹಾವನ್ನ ಕಂಡು ನರೇಶ್, ಕೆರೆ ಹಾವು ಏನೂ ಮಾಡಲ್ಲ. ಅದಕ್ಕೆ ನಿಮಗಿಂತ ಭಯ ಹೆಚ್ಚು ಎಂದು ತನ್ನ ಮೈಮೇಲೆ ಕೆರೆ ಹಾವನ್ನು ಹಾಕಿಕೊಂಡರು.

ಆ ಬಳಿಕ ಹಾವನ್ನ ನೋಡಿ ಗಾಬರಿಯಾಗಿದ್ದ ಸಿಬ್ಬಂದಿಗಳ ಕೈಯಲ್ಲೂ ಅದೇ ಹಾವನ್ನ ಹಿಡಿಸಿದರು. ಭಯದಲ್ಲೇ ಹಾವನ್ನ ಹಿಡಿದ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗಳು ಕೊನೆಗೆ ಸಂತೋಷಪಟ್ರು. ಉರಗ ಪ್ರಿಯ ನರೇಶ್ ಈವರೆಗೆ ಸುಮಾರು 35000ಕ್ಕೂ ಅಧಿಕ ಹಾವುಗಳನ್ನ ಸೆರೆ ಹಿಡಿದಿದ್ದಾರೆ.

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?