AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರಿಸ್ಟಿಯಾನೊ ರೊನಾಲ್ಡೊ ಮದುವೆಗೆ ಡೇಟ್ ಫಿಕ್ಸ್​!

Cristiano Ronaldo and Georgina Rodríguez: ಪೋರ್ಚುಗಲ್​ ಫುಟ್​ಬಾಲ್ ತಾರೆ 41 ವರ್ಷದ ಕ್ರಿಸ್ಟಿಯಾನೊ ರೊನಾಲ್ಡೊ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ತನ್ನ ಬಹುಕಾಲದ ಗೆಳೆತಿ ಜಾರ್ಜಿನಾ ರೋಡ್ರಿಗಸ್ ಅವರನ್ನು ಇದೇ ಆಗಸ್ಟ್ 8 ರಂದು ಫುಂಚಾಲ್ ಕ್ಯಾಥೆಡ್ರಲ್ ಚರ್ಚ್‌ನಲ್ಲಿ ವಿವಾಹವಾಗಲಿದ್ದಾರೆ ಎಂದು ವರದಿಯಾಗಿದೆ.

ಕ್ರಿಸ್ಟಿಯಾನೊ ರೊನಾಲ್ಡೊ ಮದುವೆಗೆ ಡೇಟ್ ಫಿಕ್ಸ್​!
Cristiano RonaldoImage Credit source: Google
ಝಾಹಿರ್ ಯೂಸುಫ್
|

Updated on:Aug 06, 2026 | 8:45 AM

Share

ಫುಟ್‌ಬಾಲ್ ಜಗತ್ತಿನ ದಂತಕಥೆ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಅವರ ಪ್ರೇಯಸಿ ಜಾರ್ಜಿನಾ ರೋಡ್ರಿಗಸ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ಆಗಸ್ಟ್ 2025 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ, ಈಗ ಅಧಿಕೃತವಾಗಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡುತ್ತಿವೆ.

ಮದುವೆಗೆ ಡೇಟ್ ಫಿಕ್ಸ್​!

ಬ್ರಿಟಿಷ್ ಸುದ್ದಿ ಸಂಸ್ಥೆ ‘The Sun’ ವರದಿ ಮಾಡಿರುವ ಪ್ರಕಾರ, ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಜಾರ್ಜಿನಾ ರೋಡ್ರಿಗಸ್ ಜೋಡಿಯು ಆಗಸ್ಟ್ 8, 2026 ರಂದು ವಿವಾಹವಾಗಲಿದ್ದಾರೆ.

ಮದುವೆ ನಡೆಯುವುದು ಎಲ್ಲಿ?

ಕ್ರಿಸ್ಟಿಯಾನೊ ರೊನಾಲ್ಡೊ ಅವರ ತಾಯ್ನಾಡಾದ ಪೋರ್ಚುಗಲ್‌ನ ಮಾಡೈರಾ ದ್ವೀಪದಲ್ಲಿರುವ ಐತಿಹಾಸಿಕ ಫುಂಚಾಲ್ ಕ್ಯಾಥೆಡ್ರಲ್ ಚರ್ಚ್‌ನಲ್ಲಿ ಧಾರ್ಮಿಕ ವಿವಾಹ ಕಾರ್ಯಕ್ರಮ ನಡೆಯಲಿದೆ ಎಂದು ವರದಿಯಾಗಿದೆ.

ಐಷಾರಾಮಿ ಹೋಟೆಲ್ ಬುಕ್ಕಿಂಗ್:

ಮದುವೆಯ ನಂತರದ ಭರ್ಜರಿ ರಿಸೆಪ್ಷನ್ ಪಾರ್ಟಿಗಾಗಿ ಅಲ್ಲಿನ ಪ್ರಸಿದ್ಧ 5-ಸ್ಟಾರ್ ಹೋಟೆಲ್ ಆದ ಸವಾಯ್ ಪ್ಯಾಲೇಸ್​ನ ಹಲವು ಫ್ಲೋರ್‌ಗಳನ್ನು ಮತ್ತು ಬಾರ್ ಏರಿಯಾಗಳನ್ನು ಈಗಾಗಲೇ ಕಾಯ್ದಿರಿಸಲಾಗಿದೆ ಎಂಬ ಸುದ್ದಿಯಿದೆ.

10 ವರ್ಷಗಳ ಬಳಿಕ ಮದುವೆ!

ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಜಾರ್ಜಿನಾ ರೋಡ್ರಿಗಸ್ ಮೊದಲ ಬಾರಿಗೆ ಭೇಟಿಯಾಗಿದ್ದು 2016 ರಲ್ಲಿ. ಜಾರ್ಜಿನಾ  ಮ್ಯಾಡ್ರಿಡ್‌ನ ಪ್ರತಿಷ್ಠಿತ ‘ಗುಸ್ಸಿ’ ಐಷಾರಾಮಿ ಬಟ್ಟೆ ಮಳಿಗೆಯಲ್ಲಿ ಸಾಮಾನ್ಯ ಸೇಲ್ಸ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಈ ವೇಳೆ ಶಾಪ್​ಗೆ ಆಗಮಿಸಿದ್ದ ರೊನಾಲ್ಡೊ ಅವರಿಗೆ ಜಾರ್ಜಿನಾ ಪರಿಚಯವಾಗಿದ್ದರು. ಇದಾದ ಬಳಿಕ ಇಬ್ಬರ ನಡುವೆ ಫ್ರೆಂಡ್​ಶಿಪ್ ಬೆಳೆಯಿತು.  ಇದರ ಬೆನ್ನಲ್ಲೇ ಇಬ್ಬರು ಡೇಟ್ ಮಾಡುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು.

ಜನವರಿ 2017 ರಲ್ಲಿ ಜ್ಯೂರಿಚ್‌ನಲ್ಲಿ ನಡೆದ ಪ್ರತಿಷ್ಠಿತ ‘ಬೆಸ್ಟ್ ಫಿಫಾ ಫುಟ್‌ಬಾಲ್ ಅವಾರ್ಡ್ಸ್’ ರೆಡ್ ಕಾರ್ಪೆಟ್ ಮೇಲೆ ರೊನಾಲ್ಡೊ ಮತ್ತು ಜಾರ್ಜಿನಾ ಜೋಡಿಯಾಗಿ ಒಟ್ಟಿಗೆ ಹೆಜ್ಜೆ ಹಾಕುವ ಮೂಲಕ ತಮ್ಮ ಸಂಬಂಧವನ್ನು ಜಗತ್ತಿನ ಮುಂದೆ ಅಧಿಕೃತಗೊಳಿಸಿದರು.

ಇದನ್ನೂ ಓದಿ: 3 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಪಾಕಿಸ್ತಾನ್!

ಕಳೆದ ಸುಮಾರು ಹತ್ತು ವರ್ಷಗಳಿಂದ ಅತ್ಯಂತ ಬಲವಾದ ಸಂಬಂಧವನ್ನು ಕಾಯ್ದುಕೊಂಡಿರುವ ಈ ಜೋಡಿಗೆ ಈಗಾಗಲೇ ಇಬ್ಬರು ಜಂಟಿ ಮಕ್ಕಳಿದ್ದಾರೆ (ಒಟ್ಟು ಐದು ಮಕ್ಕಳ ಕುಟುಂಬ). ಇದೀಗ ದೀರ್ಘಾವಧಿಯ ಪ್ರೇಮ ಪ್ರಯಾಣದ ಬಳಿಕ, ಈ ಜೋಡಿಯು ಅಧಿಕೃತವಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದೆ.

Published On - 8:43 am, Thu, 6 August 26

Follow Us