AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಪಿಎಫ್​ ವೇತನ ಮಿತಿ 25,000 ರೂಗೆ ಏರಿಸಿದ್ದರ ಪರಿಣಾಮಗಳೇನು? ಬದಲಾಗುವುದೇನು, ಇತ್ಯಾದಿ ಮಾಹಿತಿ

ಸೆಪ್ಟೆಂಬರ್ 17ರಿಂದ ಸರ್ಕಾರವು ಪಿಎಫ್ ಸ್ಕೀಮ್​ಗೆ ವೇತನ ಮಿತಿಯನ್ನು 15,000 ರೂನಿಂದ 25,000 ರೂಗೆ ಏರಿಸಿದೆ. ಇದರಿಂದ ಉದ್ಯೋಗದಾತರು ಒಂದು ಉದ್ಯೋಗಿಯ ಇಪಿಎಫ್ ಅಕೌಂಟ್​ಗೆ ನೀಡಬೇಕಾದ ಗರಿಷ್ಠ ಕೊಡುಗೆ 1,800 ರೂನಿಂದ 3,000 ರೂಗೆ ಏರುತ್ತದೆ. ಸರ್ಕಾರ ನೀಡಬೇಕಾದ ಬಡ್ಡಿ ಹಣವೂ ಹೆಚ್ಚಳಗೊಳ್ಳಲಿದೆ. ಉದ್ಯೋಗಿಗೆ ಹೆಚ್ಚು ಹಣ ಉಳಿಸುವ ಅವಕಾಶ ಸಿಗಲಿದೆ.

ಇಪಿಎಫ್​ ವೇತನ ಮಿತಿ 25,000 ರೂಗೆ ಏರಿಸಿದ್ದರ ಪರಿಣಾಮಗಳೇನು? ಬದಲಾಗುವುದೇನು, ಇತ್ಯಾದಿ ಮಾಹಿತಿ
ಇಪಿಎಫ್Image Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Sep 23, 2026 | 12:35 PM

Share

ನವದೆಹಲಿ, ಸೆಪ್ಟೆಂಬರ್ 23: ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಇಪಿಎಫ್​ಒ ಖಾತೆಗಳಿಗೆ ವೇತನ ಮಿತಿಯನ್ನು 15,000 ರೂನಿಂದ 25,000 ರೂಗೆ ವಿಸ್ತರಿಸಿತು. ಈ ಕ್ರಮದಿಂದ ಲಕ್ಷಾಂತರ ಉದ್ಯೋಗಿಗಳಿಗೆ ಇಪಿಎಫ್ ಸ್ಕೀಮ್ ಲಭಿಸುವ ಅವಕಾಶ ಸಿಕ್ಕಂತಾಗಿದೆ. ಸರ್ಕಾರಕ್ಕೆ ವರ್ಷಕ್ಕೆ ಸಾವಿರಾರು ಕೋಟಿ ರೂ ಹೆಚ್ಚಿರುವ ಹೊರೆ ಬೀಳುತ್ತದೆ. ಹಾಗೆಯೆ, ಉದ್ಯೋಗಿಯ ಕೈಸೇರುವ ಸಂಬಳದಲ್ಲಿ ಆಗುವ ವ್ಯತ್ಯಯ, ಎಷ್ಟು ಹೊಸ ಉದ್ಯೋಗಿಗಳಿಗೆ ಇಪಿಎಫ್ ಸ್ಕೀಮ್ ಪಡೆಯುವ ಅವಕಾಶ, ಇತ್ಯಾದಿ ಮಾಹಿತಿ ಇಲ್ಲಿದೆ.

ಇಪಿಎಫ್​ಒ ವೇತನ ಮಿತಿ ಎಂದರೇನು?

ಇಪಿಎಫ್ ಎಂಬುದು ಉದ್ಯೋಗಿಗಳ ಭವಿಷ್ಯದ ಹಣ ಉಳಿಸುವಿಕೆಗಾಗಿ ಸರ್ಕಾರ ಮಾಡಿರುವ ಯೋಜನೆ. ಕನಿಷ್ಠ 20 ನಿಯಮಿತ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳಿಗೆ ಕಡ್ಡಾಯವಾಗಿರುವ ಯೋಜನೆ. 20ಕ್ಕಿಂತ ಕಡಿಮೆ ಉದ್ಯೋಗಿಗಳಿರುವ ಸಂಸ್ಥೆಗಳು ಇಪಿಎಫ್ ಯೋಜನೆ ಅಳವಡಿಸಿಕೊಳ್ಳುವುದು ಕಡ್ಡಾಯ ಇರುವುದಿಲ್ಲವಾದರೂ ಅದು ಅವರ ಐಚ್ಛಿಕ ಆಯ್ಕೆ.

ಹಾಗೆಯೇ, ಉದ್ಯೋಗಿಯ ಮೂಲ ವೇತನ ಮತ್ತು ಭತ್ಯೆಗಳೆರಡೂ ಸೇರಿಸಿದರೆ ತಿಂಗಳಿಗೆ 15,000 ರೂ ಹಾಗೂ ಅದಕ್ಕಿಂತ ಕಡಿಮೆ ಮೊತ್ತವಿದ್ದರೆ, ಆ ಉದ್ಯೋಗಿಗೆ ಇಪಿಎಫ್ ಅಕೌಂಟ್ ತೆರೆಯುವುದು ಕಡ್ಡಾಯ. ಈ 15,000 ಎಂಬುದು ಇಪಿಎಫ್​ಒದ ವೇತನ ಮಿತಿ. ಸರ್ಕಾರ 2026ರ ಸೆಪ್ಟೆಂಬರ್ 17ರಿಂದ ಜಾರಿಗೆ ಬರುವಂತೆ ವೇತನ ಮಿತಿಯನ್ನು 15,000 ರೂನಿಂದ 25,000 ರೂಗೆ ಹೆಚ್ಚಿಸಿದೆ.

ಇದನ್ನೂ ಓದಿ: ಪಿಎಫ್ ಹಣವನ್ನು ಸರ್ಕಾರ ಏನು ಮಾಡುತ್ತದೆ, ಎಲ್ಲಿ ಹೂಡಿಕೆ ಮಾಡುತ್ತದೆ? ಇಲ್ಲಿದೆ ಮಾಹಿತಿ

ಅಂದರೆ, 25,000 ರೂ ಹಾಗು ಅದಕ್ಕಿಂತ ಕಡಿಮೆ ಬೇಸಿಕ್ ಸ್ಯಾಲರಿ ಇರುವ ಉದ್ಯೋಗಿಗಳಿಗೆ ಇಪಿಎಫ್ ಅಕೌಂಟ್ ತೆರೆಯುವುದು ಕಡ್ಡಾಯವಾಗಿರುತ್ತದೆ. ಹೆಚ್ಚಿನ ವೇತನ ಇದ್ದರೆ ಅದು ಐಚ್ಛಿಕ.

ಉದ್ಯೋಗಿಗಳಿಗೆ ಇಪಿಎಫ್ ಅಕೌಂಟ್ ತೆರೆಯುವುದರಿಂದ ಕಂಪನಿಗಳಿಗೆ ಏನು ಕಷ್ಟ?

ಉದ್ಯೋಗಿಯ ವೇತನದಲ್ಲಿ ಆತ ಮೂಲ ವೇತನದ ಶೇ. 12ರಷ್ಟು ಹಣವನ್ನು ಮುರಿದುಕೊಂಡು ಇಪಿಎಫ್ ಅಕೌಂಟ್​ಗೆ ಹಾಕಲಾಗುತ್ತದೆ. ಅಷ್ಟೇ ಮೊತ್ತದ ಹಣವನ್ನು ಕಂಪನಿಯು ಆ ಉದ್ಯೋಗಿಯ ಇಪಿಎಫ್ ಮತ್ತು ಇಪಿಎಸ್ ಅಕೌಂಟ್​ಗಳಿಗೆ ಹಂಚಿಕೆ ಮಾಡುತ್ತದೆ. ಹಿಂದೆ 15,000 ವೇತನ ಮಿತಿ ಇದ್ದಾಗ ಅದರ ಶೇ. 12 ಹಣ ಎಂದರೆ 1,800 ರೂ ಅನ್ನು ಉದ್ಯೋಗಿಯ ವೇತನದಿಂದ ಮುರಿದುಕೊಂಡು ಇಪಿಎಫ್ ಅಕೌಂಟ್​​ಗೆ ಹಾಕಲಾಗುತ್ತದೆ. ಕಂಪನಿಯೂ ಕೂಡ 1,800 ರೂ ಹಾಕಬೇಕಾಗುತ್ತದೆ. ಈಗ ವೇತನ ಮಿತಿ 25,000 ರೂ ಆಗಿರುವುದರಿಂದ ಉದ್ಯೋಗಿಯ ಕೊಡುಗೆ 3,000 ರೂಗೆ ಏರುತ್ತದೆ. ಕಂಪನಿ ಕೊಡುಗೆಯೂ 3,000 ರೂ ಆಗುತ್ತದೆ.

ಇದನ್ನೂ ಓದಿ: ಇಪಿಎಫ್​ಒ ವೇತನ ಮಿತಿ ಏರಿದ ಬೆನ್ನಲ್ಲೇ ಇಡಿಎಲ್​ಐ ಇನ್ಷೂರೆನ್ಸ್ ಪ್ರೊಟೆಕ್ಷನ್ ಮಿತಿ 10.50 ಲಕ್ಷ ರೂಗೆ ಏರುವ ನಿರೀಕ್ಷೆ

ಇದರಿಂದ ಉದ್ಯೋಗಿಗೆ ಕೈಗೆ ಸೇರುವ ಸಂಬಳ ಸ್ವಲ್ಪ ಕಡಿಮೆ ಆಗುತ್ತದೆ. ಕಂಪನಿಗೆ ಹೊರೆ ಸ್ವಲ್ಪ ಹೆಚ್ಚುತ್ತದೆ. ಸರ್ಕಾರಕ್ಕೆ ಹೆಚ್ಚು ಮೊತ್ತಕ್ಕೆ ಬಡ್ಡಿ ನೀಡಬೇಕಾಗುತ್ತದೆ.

ಒಂದು ಅಂದಾಜು ಪ್ರಕಾರ, ವೇತನ ಮಿತಿ ಏರಿಕೆಯಿಂದ 51 ಲಕ್ಷಕ್ಕೂ ಅಧಿಕ ಉದ್ಯೋಗಿಗಳು ಮೊದಲ ಬಾರಿಗೆ ಇಪಿಎಫ್ ವ್ಯಾಪ್ತಿಗೆ ಸೇರ್ಪಡೆಯಾಗಲಿದ್ದಾರೆ. ಇಪಿಎಫ್​ಒ ಸಬ್ಸ್​ಕ್ರೈಬರ್ಸ್ ಸಂಖ್ಯೆ, ಅಂದರೆ, ಇಪಿಎಫ್ ವ್ಯಾಪ್ತಿಯಲ್ಲಿರುವವರ ಸಂಖ್ಯೆ 8 ಕೋಟಿ ದಾಟಲಿದೆ. ಸರ್ಕಾರವು ಇಪಿಎಫ್ ಅಕೌಂಟ್​ಗಗಳಿಗೆ ಸಂದಾಯ ಮಾಡುವ ಬಡ್ಡಿ ಮೊತ್ತ ವರ್ಷಕ್ಕೆ 11,339 ಕೋಟಿ ರೂ ಹೆಚ್ಚಳಗೊಳ್ಳುವ ಅಂದಾಜು ಇದೆ.

ಇಪಿಎಫ್ ವೇತನ ಮಿತಿ ಹೆಚ್ಚಳ: ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು (FAQs)

ಇಪಿಎಫ್ ವೇತನ ಮಿತಿ ಹೆಚ್ಚಳ ಎಂದರೇನು?

ಇಪಿಎಫ್ ವೇತನ ಮಿತಿ 25,000 ರೂ ಇದೆ ಎಂದರೆ, ಅಷ್ಟು ಮೊತ್ತ ಅಥವಾ ಅದಕ್ಕಿಂತ ಕಡಿಮೆ ಮೂಲ ವೇತನ ಹೊಂದಿರುವ ಉದ್ಯೋಗಿಗಳಿಗೆ ಅವರ ಉದ್ಯೋಗದಾತರು ಪಿಎಫ್ ಅಕೌಂಟ್ ತೆರೆಯುವುದು ಕಡ್ಡಾಯವಾಗಿರುತ್ತದೆ.

ಪಿಎಫ್ ವೇತನ ಮಿತಿ 25,000 ರೂಗೆ ಏರಿಸಿದ್ದು ಯಾರಿಗೆ ಪ್ರಯೋಜನ?

ಪಿಎಫ್ ವೇತನ ಮಿತಿ ಏರಿಕೆಯಿಂದ ಎಲ್ಲಾ ಉದ್ಯೋಗಿಗಳಿಗೂ ಲಾಭವಾಗುತ್ತದೆ. ಹೆಚ್ಚು ಉದ್ಯೋಗಿಗಳು ಇಪಿಎಫ್ ವ್ಯಾಪ್ತಿಗೆ ಬರುತ್ತಾರೆ. ಉದ್ಯೋಗಿಗಳ ಇಪಿಎಫ್ ಅಕೌಂಟ್​ಗೆ ಹರಿದು ಬರುವ ಹಣ ಹೆಚ್ಚುತ್ತದೆ.

ಪಿಎಫ್ ವೇತನ ಮಿತಿ ಹೆಚ್ಚಳದಿಂದ ಸರ್ಕಾರಕ್ಕೆ ಎಷ್ಟು ಹೊರೆ

ಪಿಎಫ್ ವೇತನ ಮಿತಿ ಹೆಚ್ಚಳದಿಂದ 51 ಲಕ್ಷ ಅಧಿಕ ಉದ್ಯೋಗಿಗಳು ಮೊದಲ ಬಾರಿಗೆ ಇಪಿಎಫ್ ಸಬ್ಸ್​ಕ್ರೈಬರ್​ಗಳಾಗುತ್ತಾರೆ. ಸರ್ಕಾರದ ಬಡ್ಡಿ ಕೊಡುಗೆಯ ಹಣ ವರ್ಷಕ್ಕೆ 11,339 ಕೋಟಿ ರೂ ಹೆಚ್ಚುತ್ತದೆ.

Published On - 12:13 pm, Wed, 23 September 26

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
'ನಕ್ಸಲಿಸಂನ ಎಲ್ಲ ಕುರುಹನ್ನೂ ಅಳಿಸಿಹಾಕಬೇಕು'; ಅಮಿತ್ ಶಾ ಹೇಳಿಕೆ
'ನಕ್ಸಲಿಸಂನ ಎಲ್ಲ ಕುರುಹನ್ನೂ ಅಳಿಸಿಹಾಕಬೇಕು'; ಅಮಿತ್ ಶಾ ಹೇಳಿಕೆ
ಹಾರ್ಮುಜ್ ಜಲಸಂಧಿಯಲ್ಲಿ ಮುಳುಗಿದ ಹಡಗು; ಸಮುದ್ರದಲ್ಲಿ ತೇಲಾಡಿದ ಐಫೋನ್‌ಗಳು
ಹಾರ್ಮುಜ್ ಜಲಸಂಧಿಯಲ್ಲಿ ಮುಳುಗಿದ ಹಡಗು; ಸಮುದ್ರದಲ್ಲಿ ತೇಲಾಡಿದ ಐಫೋನ್‌ಗಳು
ಸ್ಟಿಂಗ್ ಆಪರೇಷನ್: ಉನ್ನತ ಮಟ್ಟದ ತನಿಖೆಗೆ ನೀಡಲು ಸರ್ಕಾರ ಹಿಂದೇಟು!
ಸ್ಟಿಂಗ್ ಆಪರೇಷನ್: ಉನ್ನತ ಮಟ್ಟದ ತನಿಖೆಗೆ ನೀಡಲು ಸರ್ಕಾರ ಹಿಂದೇಟು!
ಸೂಳೆಕೆರೆಯ ಋಣ ತೀರಿಸಲು ಮುಂದಾದ ರೈತರು
ಸೂಳೆಕೆರೆಯ ಋಣ ತೀರಿಸಲು ಮುಂದಾದ ರೈತರು
ಬರಪೀಡಿತ ಪಟ್ಟಿಗೆ 9 ತಾಲೂಕುಗಳ ಸೇರ್ಪಡೆ: ತಾಲೂಕುಗಳ ಸಂಖ್ಯೆ 226ಕ್ಕೆ ಏರಿಕೆ
ಬರಪೀಡಿತ ಪಟ್ಟಿಗೆ 9 ತಾಲೂಕುಗಳ ಸೇರ್ಪಡೆ: ತಾಲೂಕುಗಳ ಸಂಖ್ಯೆ 226ಕ್ಕೆ ಏರಿಕೆ
ಸಿಎಂ ಡಿಕೆ ಶಿವಕುಮಾರ್ ಮನೆಗೆ ಭೇಟಿ ನೀಡಿದ ಹಿರಿಯ ನಟ ದೇವರಾಜ್ ಕುಟುಂಬ
ಸಿಎಂ ಡಿಕೆ ಶಿವಕುಮಾರ್ ಮನೆಗೆ ಭೇಟಿ ನೀಡಿದ ಹಿರಿಯ ನಟ ದೇವರಾಜ್ ಕುಟುಂಬ
ಶ್ರೀರಂಗಪಟ್ಟಣ ದಸರಾ ವೈಭವಕ್ಕೆ ಚಾಲನೆ: ಚಾಮುಂಡೇಶ್ವರಿಗೆ ಪುಷ್ಪಾರ್ಚನೆ
ಶ್ರೀರಂಗಪಟ್ಟಣ ದಸರಾ ವೈಭವಕ್ಕೆ ಚಾಲನೆ: ಚಾಮುಂಡೇಶ್ವರಿಗೆ ಪುಷ್ಪಾರ್ಚನೆ
‘ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದು’: ಗಾನವಿ ಬಗ್ಗೆ ಗಗನ್ ಚಿನ್ನಪ್ಪ ಟೀಕೆ
‘ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದು’: ಗಾನವಿ ಬಗ್ಗೆ ಗಗನ್ ಚಿನ್ನಪ್ಪ ಟೀಕೆ
ರಾಹುಲ್ ಗಾಂಧಿ, ಪ್ರಿಯಾಂಕಾದೂ ಸ್ಟಿಂಗ್ ವಿಡಿಯೋ ಬರಬಹುದು: ಎಚ್​​ಡಿಕೆ
ರಾಹುಲ್ ಗಾಂಧಿ, ಪ್ರಿಯಾಂಕಾದೂ ಸ್ಟಿಂಗ್ ವಿಡಿಯೋ ಬರಬಹುದು: ಎಚ್​​ಡಿಕೆ
ಲಡಾಖ್‌ಗೆ 3,350 ಕೋಟಿ ರೂ. ಯೋಜನೆಗಳ ಕೊಡುಗೆ
ಲಡಾಖ್‌ಗೆ 3,350 ಕೋಟಿ ರೂ. ಯೋಜನೆಗಳ ಕೊಡುಗೆ