ರಾಮನಗರ: ಯೋಗೇಶ್ವರ್ ಕಾರಿಗೆ ಜೆಡಿ (ಎಸ್) ಕಾರ್ಯಕರ್ತರ ಮುತ್ತಿಗೆ, ಮೊಟ್ಟೆ ಎಸೆತ

ರಾಮನಗರ: ಯೋಗೇಶ್ವರ್ ಕಾರಿಗೆ ಜೆಡಿ (ಎಸ್) ಕಾರ್ಯಕರ್ತರ ಮುತ್ತಿಗೆ, ಮೊಟ್ಟೆ ಎಸೆತ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 01, 2022 | 1:04 PM

ಕಾರಿಗೆ ಮುತ್ತಿಗೆ ಹಾಕಿದ ಕಾರ್ಯಕರ್ತರು ಮೊಟ್ಟೆಗಳನ್ನು ಎಸೆದರು ಮತ್ತು ಘೋಷಣೆಗಳನ್ನು ಕೂಗಿದರು. ಅವರನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ಮಾಡಬೇಕಾಯಿತು.

Ramanagara: ಬಿಜೆಪಿ ನಾಯಕ ಸಿಪಿ ಯೋಗೇಶ್ವರ್ (CP Yogeshwar) ಅವರ ವಿರುದ್ಧ ಜೆಡಿ(ಎಸ್) ಕಾರ್ಯಕರ್ತರ (JD(S) workers) ಆಕ್ರೋಷ ಹೆಚ್ಚಾಗುತ್ತಿರುವಂತೆ ಕಾಣುತ್ತಿದೆ. ಶನಿವಾರ ಚನ್ನಪಟ್ಟಣದ (Channapatna) ಭೈರಾಪಟ್ಟಣದಲ್ಲಿ ನಡೆದ ಘಟನೆಯನ್ನು ನೋಡಿದರೆ ಇದು ವೇದ್ಯವಾಗುತ್ತದೆ. ಅವರ ಕಾರಿಗೆ ಮುತ್ತಿಗೆ ಹಾಕಿದ ಕಾರ್ಯಕರ್ತರು ಮೊಟ್ಟೆಗಳನ್ನು ಎಸೆದರು ಮತ್ತು ಘೋಷಣೆಗಳನ್ನು ಕೂಗಿದರು. ಅವರನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ಮಾಡಬೇಕಾಯಿತು.