ಮುಂಬೈ: ಜಿಯೋ ಮತ್ತು ಮೀಡಿಯಾ ಟೆಕ್ ಜಂಟಿಯಾಗಿ ಗೇಮಿಂಗ್ ಮಾಸ್ಟರ್ಸ್ ಹೆಸರಿನ ಚಾಂಪಿಯನ್ಶಿಪ್ ಆರಂಭಿಸುತ್ತಿದೆ. ಆನ್‌ಲೈನ್ ಗೇಮಿಂಗ್ ಉತ್ಸಾಹಿಗಳನ್ನು ಗುರಿಯಾಗಿಸಿಕೊಂಡು ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.
70 ದಿನಗಳ ಇಂಡಿಯಾ ಕಾ ಗೇಮಿಂಗ್ ಚಾಂಪಿಯನ್ ಪೂರ್ಣಗೊಂಡ ನಂತರ ಜಿಯೋ ಗೇಮ್ಸ್‌ನಲ್ಲಿ ಈ ಚಾಂಪಿಯನ್ಶಿಪ್ ಆರಂಭವಾಗುತ್ತಿದೆ. ಈ ಚಾಂಪಿಯನ್ ಶಿಪ್ನಲ್ಲಿ ಗೆದ್ದರೆ 12,50,000 ರೂಪಾಯಿ ಬಹುಮಾನ ಕೂಡ ಸಿಗಲಿದೆ.
ವರ್ಚುವಲ್ ಗೇಮಿಂಗ್ ರಂಗದಲ್ಲಿ ಗೇಮರ್‌ನ ಕೌಶಲ್ಯ, ತಂಡದ ಕೆಲಸ ಮತ್ತು ವಿಶೇಷತೆಯನ್ನು ಪರೀಕ್ಷಿಸಲು ಪಂದ್ಯಾವಳಿಯನ್ನು ನಡೆಸಲಾಗುತ್ತಿದೆ. ಇಡೀ ಪಂದ್ಯಾವಳಿಯನ್ನು ಜಿಯೋಟಿವಿ ಎಚ್ಡಿ ಇಸ್ಪೋರ್ಟ್ಸ್ ಚಾನೆಲ್ ಮತ್ತು ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತಿದೆ.
ಗೇಮಿಂಗ್ ಮಾಸ್ಟರ್ಸ್ ಗರೆನಾ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಹಿಟ್ ಬ್ಯಾಟಲ್ ರಾಯಲ್ ಟೈಟಲ್, ಫ್ರೀ ಫೈರ್ ಗೇಮ್ ಸ್ಪರ್ಧೆಯಲ್ಲಿರಲಿದೆ. ಜಿಯೋ ಗೇಮ್ಸ್ ಪ್ಲಾಟ್‌ಫಾರ್ಮ್ ಮೂಲಕ ಜಿಯೋ ಮತ್ತು ಜಿಯೋ ಅಲ್ಲದ ಬಳಕೆದಾರರಿಗೆ ಈ ಗೇಮ್ ಲಭ್ಯವಾಗುವಂತೆ ಮಾಡಲಾಗುತ್ತಿದೆ.
29 ಡಿಸೆಂಬರ್ 2020 ರಿಂದ 09 ಜನವರಿ 2021ರವರೆಗೆ ನೋಂದಣಿಗೆ ಅವಕಾಶ ಇರಲಿದೆ. 13 ಜನವರಿ 2021 ರಿಂದ 07 ಮಾರ್ಚ್ 2021ರವರೆಗೆ ಪಂದ್ಯಾವಳಿ ನಡೆಯಲಿದೆ. ನೋಂದಣಿ ಅಥವಾ ಭಾಗವಹಿಸುವಿಕೆಗೆ ಯಾವುದೇ ಶುಲ್ಕವಿಲ್ಲ.
ಫೇಸ್ಬುಕ್-ಆ್ಯಪಲ್ ನಡುವೆ ಹಗ್ಗಜಗ್ಗಾಟಕ್ಕೆ ಏನೆಲ್ಲಾ ಆಯಾಮ: ಕಾಳಜಿಯೋ? ಹುನ್ನಾರವೋ?