ಜಪಾನ್ ನೆಲದಿಂದ ಆಗಸಕ್ಕೆ ಚಿಮ್ಮಲಿದೆ ‘‘ಮರದ’’ ಸ್ಯಾಟಲೈಟ್!
ಈಗ ಕ್ಯೋಟೋ ವಿಶ್ವವಿದ್ಯಾಲಯ ಮತ್ತು ಸುಮಿಟೋಮೊ ಅರಣ್ಯ ತಜ್ಞರು ಆಲ್ಯೂಮಿನಿಯಂ ಬದಲಾಗಿ ಮರವನ್ನು ಬಳಕೆ ಮಾಡಲು ಚಿಂತನೆ ನಡೆಸಿದ್ದಾರೆ. ಇದು ಪರಿಸರ ಸ್ನೆಹಿ ಕೃತಕ ಉಪಗ್ರಹವಾಗಿರಲಿದೆ.
ಟೊಕಿಯೋ: ಲೋಹಗಳನ್ನು ಬಳಕೆ ಮಾಡಿ ಕೃತಕ ಉಪಗ್ರಹ ಸಿದ್ಧಪಡಿಸೋದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಮರದ ಸ್ಯಾಟಲೈಟ್ ಬಗ್ಗೆ ಎಲ್ಲಾದರೂ ಕೇಳಿದ್ದೀರಾ? ತಂತ್ರಜ್ಞಾನದಲ್ಲಿ ಮುಂದಿರುವ ಜಪಾನ್ ಹೀಗೊಂದು ಪ್ರಯೋಗಕ್ಕೆ ಮುಂದಾಗಿದೆ. 2023ರ ವೇಳೆಗೆ ಮರದ ಸ್ಯಾಟಲೈಟ್ ಜಪಾನ್ ನೆಲದಿಂದ ಗಗನಕ್ಕೆ ಚಿಮ್ಮಲಿದೆ.
ಈಗ ಸಿದ್ಧಪಡಿಸುತ್ತಿರುವ ಸ್ಯಾಟಲೈಟ್ನಲ್ಲಿ ಆಲ್ಯೂಮಿನಿಯಂ ಲೋಹವನ್ನು ಹೆಚ್ಚು ಬಳಕೆ ಮಾಡಲಾಗುತ್ತದೆ. ಈ ಕಾರಣಕ್ಕೆ ಕೃತಕ ಉಪಗ್ರಹ ಕಡಿಮೆ ಭಾರ ಇರುತ್ತದೆ. ಅಲ್ಲದೆ, ಹೆಚ್ಚು ಕಾಲ ಬಾಳಿಕೆ ಬರುತ್ತದೆ. ಆದರೆ, ಈ ರೀತಿಯ ಉಪಗ್ರಹ ವಿಭಜನೆಯಾದಾಗ ಆಲ್ಯೂಮಿನಿಯಂ ಕಣಗಳು ಬಿಡುಗಡೆ ಆಗುತ್ತವೆ. ಇದು ಅನೇಕ ವರ್ಷಗಳ ಕಾಲ ವಾತಾವರಣದಲ್ಲೇ ಇರುತ್ತದೆ. ಕೆಲವೊಮ್ಮೆ ರಿಯಾಕ್ಷನ್ ಉಂಟಾಗಿ, ಓಜೋನ್ ಪದರ ಹಾಳಾಗುವ ಸಾಧ್ಯತೆ ಇರುತ್ತದೆ.
ಈಗ ಕ್ಯೋಟೋ ವಿಶ್ವವಿದ್ಯಾಲಯ ಮತ್ತು ಸುಮಿಟೋಮೊ ಅರಣ್ಯ ತಜ್ಞರು ಆಲ್ಯೂಮಿನಿಯಂ ಬದಲಾಗಿ ಮರವನ್ನು ಬಳಕೆ ಮಾಡಲು ಚಿಂತನೆ ನಡೆಸಿದ್ದಾರೆ. ಇದು ಪರಿಸರ ಸ್ನೆಹಿ ಕೃತಕ ಉಪಗ್ರಹವಾಗಿರಲಿದೆ. ಈ ಉಪಗ್ರಹ ಆಗಸಕ್ಕೆ ಚಿಮ್ಮುವಾಗ ಮರದ ಭಾಗ ಸಂಪೂರ್ಣ ಸುಟ್ಟು ಭಸ್ಮವಾಗುತ್ತದೆ. ಇದರಿಂದ ಸ್ಯಾಟಲೈಟ್ನ ಯಾವುದೇ ಕಣ ವಾತಾವರಣಕ್ಕೆ ಸೇರುವುದಿಲ್ಲ.
ಈಗಾಗಲೇ ಕ್ಯೋಟೋ ವಿಶ್ವವಿದ್ಯಾಲಯ ಮತ್ತು ಸುಮಿಟೋಮೊ ಅರಣ್ಯ ತಜ್ಞರು ಸಂಶೋಧನೆ ಆರಂಭಿಸಿದ್ದಾರೆ. ಸ್ಯಾಟಲೈಟ್ಗೆ ಯಾವ ಮರ ಬಳಕೆ ಮಾಡಿದರೆ ಉತ್ತಮ ಎನ್ನುವ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯುತ್ತಿವೆ.