AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBMP ಕಾರ್ಯವನ್ನು ಶ್ಲಾಘಿಷಿಸಿದ RCB ಆಟಗಾರ ಟಿಮ್ ಡೇವಿಡ್

BBMP ಕಾರ್ಯವನ್ನು ಶ್ಲಾಘಿಷಿಸಿದ RCB ಆಟಗಾರ ಟಿಮ್ ಡೇವಿಡ್

ಝಾಹಿರ್ ಯೂಸುಫ್
|

Updated on:May 06, 2025 | 12:45 PM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಈವರೆಗೆ 11 ಪಂದ್ಯಗಳನ್ನಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಒಟ್ಟು 8 ಪಂದ್ಯಗಳಲ್ಲಿ ಜಯ ಸಾಧಿಸಿ 16 ಅಂಕಗಳನ್ನು ಕಲೆಹಾಕಿದೆ. ಅಲ್ಲದೆ ಮುಂದಿನ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆಲ್ಲುವ ಮೂಲಕ ಪ್ಲೇಆಫ್ ಹಂತಕ್ಕೇರುವ ಸನಿಹದಲ್ಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ( ಆರ್‌ಸಿಬಿ ) ತಂಡದ ಬ್ಯಾಟ್ಸ್‌ಮನ್ ಟಿಮ್ ಡೇವಿಡ್ ಬೃಹತ್ ಬೆಂಗಳೂರು ಮಹಾನಗರ ಪಾಲಿಗೆಯ ಸಾರ್ವಜನಿಕ ಪಾರ್ಕ್​ನ ಸೌಲಭ್ಯಗಳನ್ನು ಶ್ಲಾಘಿಸಿದ್ದಾರೆ. ಆರ್​ಸಿಬಿಯ ಮಿಸ್ಟರ್ ನಾಗ್ಸ್​ ಶೋನಲ್ಲಿ ಕಾಣಿಸಿಕೊಂಡ ಟಿಮ್ ಡೇವಿಡ್​ಗೆ ನೀವು ಈಗ ಸಿಂಗಾಪೂರ್​ನಲ್ಲಿ ಇಲ್ಲ, ಅಲ್ಲಿನ ಯಾವ ಕೆಲಸವನ್ನು ಬೆಂಗಳೂರಿನಲ್ಲಿ ಮಾಡುತ್ತೀರಾ ಎಂದು ಪ್ರಶ್ನಿಸಲಾಗಿತ್ತು.

ಈ ವೇಳೆ ಮಾತನಾಡಿದ ಟಿಮ್ ಡೇವಿಡ್, ನಾನು ಸಿಂಗಾಪುರ್​ನಲ್ಲಿದ್ದ ಸಾಕಷ್ಟು ವ್ಯಾಯಾಮಗಳನ್ನು ಮಾಡುತ್ತಿದ್ದೆ. ಇಲ್ಲಿ ಬಂದ ಮೇಲೆ ಆರ್​ಸಿಬಿ ತಂಡದ ಕಂಡೀಷನಿಂಗ್ ತರಬೇತುದಾರ ಬಸು ಶಂಕರ್ ಒಂದು ದಿನ ಬೆಳಿಗ್ಗೆ ನನ್ನನ್ನು ಬಿಬಿಎಂಪಿ ಪಾರ್ಕ್‌ಗೆ ಕರೆದೊಯ್ದಿದ್ದರು. ಈ ವೇಳೆ ನಾನು ಅಲ್ಲಿ ವ್ಯಾಯಾಮ, ವಾಕಿಂಗ್, ಶೋಲ್ಡರ್ ವರ್ಕೌಟ್​ಗಳನ್ನು ಮಾಡಿದ್ದೆ.

ಸಿಂಗಾಪೂರ್​ನಲ್ಲಿ ಇರುವಂತೆ ಬೆಂಗಳೂರಿನಲ್ಲಿಯೂ ಬಿಬಿಎಂಪಿ ಪಾರ್ಕ್​ನಲ್ಲಿ ಓಪನ್ ಜಿಮ್​ಗಳಿವೆ ಎಂದು ಟಿಮ್ ಡೇವಿಡ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸೌಲಭ್ಯಗಳ ಬಗ್ಗೆ ಮಾತನಾಡಿದ್ದಾರೆ. ಈ ವಿಡಿಯೋ ಕ್ಲಿಪ್​ ಅನ್ನು ಬಿಬಿಎಂಪಿಯ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಅಂದಹಾಗೆ ಟಿಮ್ ಡೇವಿಡ್ ಮೂಲತಃ ಸಿಂಗಾಪೂರ್​ನವರು. ಆದರೆ ಆಸ್ಟ್ರೇಲಿಯಾ ಪರ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್​ ಕೆರಿಯರ್​ ಮುಂದುವರೆಸಿದ್ದಾರೆ.

 

Published on: May 06, 2025 12:35 PM