AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಗಾಸ್ಟಾರ್ ಕುಟುಂಬದಿಂದ ಗುಡ್ ನ್ಯೂಸ್; ಪಾಲಕರಾಗುತ್ತಿದ್ದಾರೆ ವರುಣ್ ತೇಜ್-ಲಾವಣ್ಯ

ವರುಣ್ ತೇಜ್ ಮತ್ತು ಲಾವಣ್ಯಾ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಘೋಷಿಸಿದ್ದಾರೆ. 2023ರ ನವೆಂಬರ್‌ನಲ್ಲಿ ವಿವಾಹವಾದ ಈ ದಂಪತಿ, ತಮ್ಮ ಸಂತೋಷದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮೆಗಾ ಕುಟುಂಬದ ಈ ಸಂತೋಷದ ಘೋಷಣೆ ಅಭಿಮಾನಿಗಳಿಗೆ ಸಂತಸ ತಂದಿದೆ. ಅವರಿಗೆ ಶುಭಾಶಯ ತಿಳಿಸುತ್ತಿದ್ದಾರೆ.

ಮೆಗಾಸ್ಟಾರ್ ಕುಟುಂಬದಿಂದ ಗುಡ್ ನ್ಯೂಸ್; ಪಾಲಕರಾಗುತ್ತಿದ್ದಾರೆ ವರುಣ್ ತೇಜ್-ಲಾವಣ್ಯ
ವರುಣ್ ತೇಜ್-ಲಾವಣ್ಯಾ
ರಾಜೇಶ್ ದುಗ್ಗುಮನೆ
|

Updated on:May 06, 2025 | 3:03 PM

Share

ವರುಣ್ ತೇಜ್ (Varun Tej) ಹಾಗೂ ಲಾವಣ್ಯ 2023ರ ನವೆಂಬರ್ ತಿಂಗಳಲ್ಲಿ ಹಸೆಮಣೆ ಏರಿದರು. ಮೆಗಾಸ್ಟಾರ್ ಕುಟುಂಬದ ಮದುವೆ ಆಗಿದ್ದರಿಂದ ಅದ್ದೂರಿಯಾಗಿ ವಿವಾಹ ನೆರವೇರಿತು. 2025ರಲ್ಲಿ ದಂಪತಿ ಕಡೆಯಿಂದ ಗುಡ್ ನ್ಯೂಸ್ ಸಿಕ್ಕಿದೆ. ವರುಣ್ ತೇಜ್ ಹಾಗೂ ಲಾವಣ್ಯಾ ಹೊಸ ಜವಾಬ್ದಾರಿ ಪಡೆದುಕೊಳ್ಳಲು ರೆಡಿ ಆಗಿದ್ದಾರೆ. ಅಂದರೆ, ಈ ದಂಪತಿ ತಂದೆ-ತಾಯಿ ಆಗುತ್ತಿದ್ದಾರೆ.  ಈ ವಿಚಾರ ಕೇಳಿ ಮೆಗಾ ಕುಟುಂಬದ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ವರುಣ್ ತೇಜ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ‘ಜೀವನದ ಅತ್ಯಂತ ಸುಂದರವಾದ ಪಾತ್ರ, ಶೀಘ್ರದಲ್ಲೇ ಬರಲಿದೆ’ ಎಂದು ವರುಣ್ ತೇಜ್ ಪೋಸ್ಟ್ ಹಾಕಿದ್ದಾರೆ. ಸಣ್ಣ ಮಗುವಿನ ಶೂನ ವರುಣ್ ಹಾಗೂ ಲಾವಣ್ಯ ಕೈನಲ್ಲಿ ಹಿಡಿದಿರೋ ಫೋಟೋನ ಹಾಕಿದ್ದಾರೆ. ಎಲ್ಲಿಯೂ ಲಾವಣ್ಯಾಗೆ ಎಷ್ಟು ವರ್ಷ ತುಂಬಿದೆ ಎಂಬ ವಿಚಾರವನ್ನು ರಿವೀಲ್ ಮಾಡಿಲ್ಲ.

ಇದನ್ನೂ ಓದಿ
Image
ಜೀವನದಲ್ಲಿ ಇರೋ ಕೊನೆಯ ಆಸೆಯನ್ನು ಈಡೇರಿಸಿಕೊಂಡ ರಶ್ಮಿಕಾ ಮಂದಣ್ಣ
Image
ಮೆಟ್ ಗಾಲಾ ರೆಡ್ ಕಾರ್ಪೆಟ್​ನಲ್ಲಿ ಶಾರುಖ್ ಖಾನ್ ಐಕಾನಿಕ್ ಪೋಸ್
Image
ರಣಬೀರ್-ರಣವೀರ್​ನ ತಂದೆ ತಾಯಿಗೆ ಹೋಲಿಸಿದ್ದ ದೀಪಿಕಾ ಪಡುಕೋಣೆ
Image
ಖ್ಯಾತ ನಿರ್ಮಾಪಕನ ಜೊತೆ ಪೋಸ್ ಕೊಟ್ಟ ಶ್ರೀಲೀಲಾ; ಕೇಳಿಬಂತು ಹೊಸ ಗಾಸಿಪ್

ಈ ಮೊದಲೇ ಲಾವಣ್ಯಾ ಅವರ ಪ್ರೆಗ್ನೆನ್ಸಿ ವಿಚಾರ ಹರಿದಾಡುತ್ತಲೇ ಇತ್ತು. ಇದಕ್ಕೆ ಕಾರಣವೂ ಇದೆ. ಅವರು ಯಾವುದೇ ಹೊಸ ಸಿನಿಮಾ ಘೋಷಣೆ ಮಾಡಿರಲಿಲ್ಲ. ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಂಡಿರಲಿಲ್ಲ. ಇದರಿಂದ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದ್ದವು.

ವರುಣ್ ತೇಜ್ ಹಾಗೂ ಲಾವಣ್ಯ ಅವರು 2023ರ ನವೆಂಬರ್ 1ರಂದು ವಿವಾಹ ಆದರು. ಇಟಲಿಯಲ್ಲಿ ಇವರ ಮದುವೆ ನೆರವೇರಿತು. ಇಬ್ಬರೂ ಬರೋಬ್ಬರಿ 6 ವರ್ಷಗಳ ಕಾಲ ಪ್ರೀತಿಸಿದ್ದರು. ಲಾವಣ್ಯಾ ಅವರು ವಿವಾಹದ ಬಳಿಕವೂ ನಟನೆ ಮುಂದುವರಿಸಿದರು. ಸದ್ಯ ಅವರ ಕೈಯಲ್ಲಿ ಈ ಮೊದಲು ಒಪ್ಪಿಕೊಂಡ ಕೆಲವು ಸಿನಿಮಾಗಳಿವೆ. ಮಗು ಜನಿಸಿದ ಬಳಿಕ ಅವರ ಸಂಪೂರ್ಣ ಗಮನ ಕುಟುಂಬದ ಮೇಲೆ ಇರಲಿದೆ.

ವರುಣ್ ತೇಜ್ ಅವರು ವಿರಿಂಚಿ ವರ್ಮಾ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ವರುಣ್ ಅವರು ಹಾಸ್ಯ ಮಾಡಲಿದ್ದಾರೆ. ಸದ್ಯ ವರುಣ್ ತೇಜ್ ಅವರಿಗೆ ಯಾವುದೇ ದೊಡ್ಡ ಯಶಸ್ಸು ಸಿಕ್ಕಿಲ್ಲ. ಅವರು ಈ ಚಿತ್ರದಿಂದ ಗೆಲ್ಲುವ ಭರವಸೆಯಲ್ಲಿ ಇದ್ದಾರೆ. ಈ ಮೂಲಕ ಬೌನ್ಸ್ ಬ್ಯಾಕ್ ಆಗಬೇಕು ಎಂದುಕೊಂಡಿದ್ದಾರೆ.

ಇದನ್ನೂ ಓದಿ: ಪ್ರೀತಿ ವಿಚಾರ ಹೇಳದ ವರುಣ್ ತೇಜ್ ಮೇಲೆ ಚಿರಂಜೀವಿಗೆ ಇನ್ನೂ ಇದೆ ಕೋಪ

ವರುಣ್ ಹಾಗೂ ಲಾವಣ್ಯಾಗೆ ಪವನ್ ಕಲ್ಯಾಣ್, ಚಿರಂಜೀವಿ, ರಾಮ್ ಚರಣ್ ಮೊದಲಾದವರು ಶುಭಾಶಯ ತಿಳಿಸುತ್ತಿದ್ದಾರೆ. ಇನ್​ಸ್ಟಾಗ್ರಾಮ್ ಕಮೆಂಟ್ ಬಾಕ್ಸ್​ನಲ್ಲಿ ಕಾಜಲ್ ಅಗರ್​ವಾಲ್ ಸೇರಿದಂತೆ ಅನೇಕರು ನಟಿಗೆ ಶುಭಾಶಯ ಕೋರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:02 pm, Tue, 6 May 25

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಪ್ರೀತಿಸಿ ಮದುವೆಯಾದ 3 ತಿಂಗಳಲ್ಲೇ ನವಜೋಡಿಗೆ ಗಂಡಾಂತರ: ಆಗಿದ್ದೇನು?
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
ಬರ ಮಧ್ಯೆ ಸಚಿವರು, ಲೋಕಸಭಾ, ರಾಜ್ಯಸಭಾ ಸದಸ್ಯರ ಕಾರು ಖರೀದಿ ಮೊತ್ತ ಏರಿಕೆ
ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ
ರಾಷ್ಟ್ರಪತಿ ಭವನದತ್ತ ಮೆರವಣಿಗೆಯಲ್ಲಿ ಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಮುಸ್ಲಿಮರಿಗೆ ಇಮಾಮ್ ಉಮರ್ ಇಲ್ಯಾಸಿ ಮನವಿ
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ?
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
ಬರಿದಾಗ್ತಿದೆ KRS: CWMA ಆದೇಶದಿಂದ ಕುಡಿಯುವ ನೀರಿಗೂ ಹಾಹಾಕಾರದ ಭೀತಿ
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!
ಭಾರತೀಯ ಕಂಪನಿಗಳನ್ನ ಅಮೆರಿಕ ಟಾರ್ಗೆಟ್ ಮಾಡಿರೋ ಕಾರಣ ಬಿಚ್ಚಿಟ್ಟ ಪೈ!
ಯಡಿಯೂರಪ್ಪ ಡ್ರೈವರ್ ಗ್ಯಾರಂಟಿ ಯೋಜನೆಗೆ ಮೊದಲು ಅರ್ಜಿ ಹಾಕಿದ್ದು
ಯಡಿಯೂರಪ್ಪ ಡ್ರೈವರ್ ಗ್ಯಾರಂಟಿ ಯೋಜನೆಗೆ ಮೊದಲು ಅರ್ಜಿ ಹಾಕಿದ್ದು
ಮಂಜನ ವಿರುದ್ಧ ಮುಗಿಬಿದ್ದ ಮನೆ ಮಂದಿ, ಮೌನಕ್ಕೆ ಶರಣಾದ ‘ಮಾಡರ್ನ್ ಕವಿ’
ಮಂಜನ ವಿರುದ್ಧ ಮುಗಿಬಿದ್ದ ಮನೆ ಮಂದಿ, ಮೌನಕ್ಕೆ ಶರಣಾದ ‘ಮಾಡರ್ನ್ ಕವಿ’
KPSC ನೇಮಕಾತಿ ಹಗರಣದಲ್ಲಿ ತೇಲಿಬಂದ ದುಗ್ಗಪ್ಪ ಯಾರು?
KPSC ನೇಮಕಾತಿ ಹಗರಣದಲ್ಲಿ ತೇಲಿಬಂದ ದುಗ್ಗಪ್ಪ ಯಾರು?