AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೀತಿ ವಿಚಾರ ಹೇಳದ ವರುಣ್ ತೇಜ್ ಮೇಲೆ ಚಿರಂಜೀವಿಗೆ ಇನ್ನೂ ಇದೆ ಕೋಪ

ವರುಣ್ ತೇಜ್ ಮತ್ತು ಲಾವಣ್ಯ ಎರಡು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ‘ಮಿಸ್ಟರ್’ ಹಾಗೂ ‘ಅಂತರಿಕ್ಷಮ್ 9000 ಕೆಎಂಪಿಎಚ್​’ ಚಿತ್ರಗಳಲ್ಲಿ ಇವರು ಬಣ್ಣ ಹಚ್ಚಿದ್ದಾರೆ. ಇವರು ಮದುವೆ ಆಗಿದ್ದು ಇಟಲಿಯಲ್ಲಿ. ಕಳೆದ ವರ್ಷ ನವೆಂಬರ್​ನಲ್ಲಿ ಇವರ ಮದುವೆ ನಡೆಯಿತು. ವರುಣ್ ತೇಜ್ ಮೇಲೆ ಇರುವ ಸಿಟ್ಟಿನ ಬಗ್ಗೆ ಚಿರಂಜೀವಿ ಮಾತನಾಡಿದ್ದಾರೆ.

ಪ್ರೀತಿ ವಿಚಾರ ಹೇಳದ ವರುಣ್ ತೇಜ್ ಮೇಲೆ ಚಿರಂಜೀವಿಗೆ ಇನ್ನೂ ಇದೆ ಕೋಪ
ಚಿರಂಜೀವಿ, ವರುಣ್​ ತೇಜ್​
 ಶ್ರೀಲಕ್ಷ್ಮೀ ಎಚ್
| Edited By: |

Updated on: Feb 26, 2024 | 10:23 PM

Share

ವರುಣ್ ತೇಜ್ (Varun Tej) ಅವರು ಲಾವಣ್ಯ ತ್ರಿಪಾಠಿ (Lavanya Tripathi) ಅವರನ್ನು ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಇವರು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ಸೆಟ್​ನಲ್ಲಿ ಇವರ ಮಧ್ಯೆ ಪ್ರೀತಿ ಮೂಡಿತು. ಇವರ ಪ್ರೀತಿ ವಿಚಾರವನ್ನು ಗುಟ್ಟಾಗಿಯೇ ಇಡಲಾಗಿತ್ತು. ವರುಣ್ ತೇಜ್ ಪ್ರೀತಿ ವಿಚಾರ ಅವರ ಅಂಕಲ್ ಚಿರಂಜೀವಿಗೆ ಗೊತ್ತಿರಲಿಲ್ಲ. ಹಾಗಂತ ಇದು ಗಾಸಿಪ್ ಅಲ್ಲ. ಚಿರಂಜೀವಿ (Chiranjeevi) ಅವರೇ ಈ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಅವರು ಈವೆಂಟ್ ಒಂದರಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.

ವರುಣ್ ತೇಜ್ ಅವರು ‘ಆಪರೇಷನ್ ವ್ಯಾಲೆಂಟೈನ್’ ಸಿನಿಮಾದಲ್ಲಿ ನಟಿಸಿದ್ದಾರೆ. ಅವರಿಗೆ ಜೊತೆಯಾಗಿ ಮಾನುಷಿ ಚಿಲ್ಲರ್ ನಟಿಸಿದ್ದಾರೆ. ಈ ಸಿನಿಮಾ ಮಾರ್ಚ್ 1ರಂದು ರಿಲೀಸ್ ಆಗಲಿದೆ. ತೆಲುಗಿನ ಜೊತೆ ಹಿಂದಿ ಭಾಷೆಯಲ್ಲೂ ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಇತ್ತೀಚೆಗೆ ನಡೆದಿದೆ. ಈ ಕಾರ್ಯಕ್ರಮಕ್ಕೆ ಚಿರಂಜೀವಿ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಅವರು ವರುಣ್ ತೇಜ್ ಬಗ್ಗೆ ಇರೋ ಸಿಟ್ಟಿನ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ಚಿರಂಜೀವಿ ಚಿತ್ರಕ್ಕೆ ಎಂಟ್ರಿ ಕೊಟ್ಟ ನಟಿ ತ್ರಿಷಾ ಕೃಷ್ಣ

‘ಲಾವಣ್ಯ ಹಾಗೂ ವರುಣ್ ತೇಜ್ ಲವ್ ವಿಚಾರವನ್ನು ನೀವು ಏಕೆ ಲೀಕ್ ಮಾಡಿಲ್ಲ’ ಎಂದು ಚಿರಂಜೀವಿ ಬಳಿ ಕೇಳಿದರು ಆ್ಯಂಕರ್ ಸುಮಾ. ಇದಕ್ಕೆ ಉತ್ತರ ನೀಡಿದ್ದಾರೆ ಚಿರಂಜೀವಿ. ‘ವರುಣ್ ಈವರೆಗೆ ಎಲ್ಲವನ್ನೂ ಹೇಳಿದ್ದಾರೆ. ಆದರೆ, ಈ ವಿಚಾರವನ್ನು ಅವರು ಮುಚ್ಚಿಟ್ಟಿದ್ದರು. ಒಂದು ಹಿಂಟ್ ಕೂಡ ನೀಡಲಿಲ್ಲ. ನನ್ನಿಂದ ಸ್ಫೂರ್ತಿ ಪಡೆದಿದ್ದೇನೆ ಎಂದು ಅವರು ಹೇಳುತ್ತಲೇ ಇರುತ್ತಾರೆ. ಆದರೆ, ಲಾವಣ್ಯ ಜೊತೆ ಡೇಟ್ ಮಾಡುತ್ತಿದ್ದೇನೆ ಎಂಬುದನ್ನು ಹೇಳಿಲ್ಲ. ತಂದೆಗೆ ಹೇಳದೇ ಇರುವ ವಿಚಾರವನ್ನೂ ಅವರು ನನ್ನ ಬಳಿ ಹೇಳಿದ್ದಿದೆ. ಹೀಗಾಗಿ ಈ ವಿಚಾರ ಮುಚ್ಚಿಟ್ಟ ಅವರ ಬಗ್ಗೆ ನನಗೆ ಈಗಲೂ ಸಿಟ್ಟಿದೆ’ ಎಂದಿದ್ದಾರೆ ಚಿರಂಜೀವಿ.

ಇದನ್ನೂ ಓದಿ: ಮೆಗಾಸ್ಟಾರ್ ಚಿರಂಜೀವಿಗೆ ಅಭಿನಂದನೆ ಕೋರಿದ ನಟ ಶಿವಣ್ಣ

ಇದೇ ವೇದಿಕೆ ಮೇಲೆ ವರುಣ್ ತೇಜ್ ಅವರು ಉತ್ತರಿಸಿದ್ದಾರೆ. ‘ಪ್ರೀತಿ ವಿಚಾರವನ್ನು ನಾನು ಹೇಳಿದ ಮೊದಲಿಗ ಎಂದರೆ ಅದು ಚಿರಂಜೀವಿ. ಇದನ್ನು ಮೊದಲು ಹೇಳಿಲ್ಲ. ಇದಕ್ಕೆ ಕಾರಣ ನಾನು ಈ ಬಗ್ಗೆ ಭಯಗೊಂಡಿದ್ದೆ’ ಎಂದಿದ್ದಾರೆ ವರುಣ್ ತೇಜ್. ಅವರ ಮಾತುಕತೆ ಚರ್ಚೆ ಆಗುತ್ತಿದೆ. ‘ಆಪರೇಷನ್ ವ್ಯಾಲೆಂಟೈನ್​’ ಸಿನಿಮಾ ವರುಣ್ ತೇಜ್ ನಟನೆಯ ಮೊದಲ ಹಿಂದಿ ಸಿನಿಮಾ. ಇದು ತೆಲುಗಿನಲ್ಲೂ ರಿಲೀಸ್ ಆಗುತ್ತಿರುವುದರಿಂದ ‘ಮಿಸ್ ವರ್ಲ್ಡ್​’ ಆಗಿರೋ ಮಾನುಷಿ ಚಿಲ್ಲರ್​ಗೆ ಇದು ಮೊದಲ ದಕ್ಷಿಣದ ಸಿನಿಮಾ. ಈ ಚಿತ್ರವನ್ನು ಸೋನಿ ಪಿಕ್ಚರ್ಸ್ ಇಂಟರ್​ನ್ಯಾಷನಲ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.