Prabhas: ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಇರಲಿದೆ ಆರು ಸಾವಿರ ವರ್ಷಗಳ ಕಥೆ
‘ಕಲ್ಕಿ 2898 ಎಡಿ ಸಿನಿಮಾದ ಕಥೆ ಮಹಾಭಾರತದಿಂದ ಆರಂಭ ಆಗಲಿದೆ. ಚಿತ್ರದ ಕಥೆ ಕೊನೆಗೊಳ್ಳೋದು 2898 ಎ.ಡಿ.ಯಲ್ಲಿ. ಸುಮಾರು 6 ಸಾವಿರ ವರ್ಷಗಳ ಕಥೆ ಸಿನಿಮಾದಲ್ಲಿ ಇರಲಿದೆ. ಹೊಸ ಜಗತ್ತುಗಳನ್ನು ಸೃಷ್ಟಿಸಲು ನಾಗ್ ಅಶ್ವಿನ್ ಪ್ರಯತ್ನಿಸಿದ್ದಾರೆ. ಮಹಾಭಾರತದ ಕೃಷ್ಣನಿಂದಲೇ ಕಥೆ ಆರಂಭ ಆಗಲಿದೆಯಂತೆ.

ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾ (Salaar Movie) ಹಿಟ್ ಆಗಿದೆ. ಈ ಬೆನ್ನಲ್ಲೇ ಅವರು ‘ಕಲ್ಕಿ 2898 ಎಡಿ’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದ ನಿರ್ದೇಶಕ ನಾಗ್ ಅಶ್ವಿನ್ ಮೇಲೆ ಪ್ರಭಾಸ್ಗೆ ಸಂಪೂರ್ಣ ಭರವಸೆ ಇದೆ. ಅಮಿತಾಭ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ದಿಶಾ ಪಟಾಣಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವುದರಿಂದ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಈಗ ನಿರ್ದೇಶಕ ನಾಗ್ ಅಶ್ವಿನ್ ಅವರು ಒಂದು ಅಚ್ಚರಿಯ ವಿಚಾರ ಬಿಚ್ಚಿಟ್ಟಿದ್ದಾರೆ. ಈ ಸಿನಿಮಾದಲ್ಲಿ ಆರು ಸಾವಿರ ವರ್ಷಗಳ ಕಥೆ ಇರಲಿದೆಯಂತೆ. ಈ ವಿಚಾರ ಕೇಳಿ ಪ್ರಭಾಸ್ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
ದೆಹಲಿ ಸಮೀಪದ ಗುರುಗ್ರಾಮದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ನಾಗ್ ಅಶ್ವಿನ್ ಭಾಗವಹಿಸಿದ್ದಾರೆ. ಈ ವೇಳೆ ಅವರು ಸಿನಿಮಾ ಟೈಮ್ಲೈನ್ ಬಗ್ಗೆ ಮಾತನಾಡಿದ್ದಾರೆ. ‘ಮಹಾಭಾರತದಿಂದ ಆರಂಭ ಆಗುವ ಸಿನಿಮಾದ ಕಥೆ 2898 ಎಡಿಯಲ್ಲಿ ಕೊನೆಗೊಳ್ಳಲಿದೆ. ಸುಮಾರು ಆರು ಸಾವಿರ ವರ್ಷಗಳ ಕಥೆ ಸಿನಿಮಾದಲ್ಲಿದೆ. ನಾವು ಜಗತ್ತುಗಳನ್ನು ಸೃಷ್ಟಿಸಲು ಪ್ರಯತ್ನಿಸಿದ್ದೇವೆ’ ಎಂದಿದ್ದಾರೆ ಅವರು. ಮಹಾಭಾರತದಲ್ಲಿ ಕೃಷ್ಣ ಇದ್ದಾನೆ. ಅವನಿಂದಲೇ ಕಥೆ ಆರಂಭ ಆಗಲಿದೆಯಂತೆ.
ಇದನ್ನೂ ಓದಿ: ಯಾಕೆ ಹೀಗೆ ಆಗಿದ್ದಾರೆ ಪ್ರಭಾಸ್? ಬಾಡಿದ ಮುಖ ನೋಡಿ ಅಭಿಮಾನಿಗಳಿಗೆ ಚಿಂತೆ
‘ನಾವು ಸಾಕಷ್ಟು ಸೆಟ್ಗಳನ್ನು ಹಾಕಬೇಕಿತ್ತು. ಹೊಸ ರೀತಿಯ ವಾಹನಗಳನ್ನು ಸಿದ್ಧಪಡಿಸಬೇಕಿತ್ತು. ಇವುಗಳ ನಿರ್ಮಾಣಕ್ಕೆ ಸಾಕಷ್ಟು ಸಮಯ ಹಿಡಿಯಿತು’ ಎಂದು ಹೇಳಿದ್ದಾರೆ ನಾಗ್ ಅಶ್ವಿನ್. ಪ್ರಭಾಸ್ ಅಭಿಮಾನಿಗಳು ಈ ಸಿನಿಮಾ ಕಣ್ತುಂಬಿಕೊಳ್ಳಲು ಕಾದಿದ್ದಾರೆ. ಈ ಚಿತ್ರ ದೊಡ್ಡ ಬಜೆಟ್ನಲ್ಲಿ ಸಿದ್ಧವಾಗುತ್ತಿದೆ. ಈ ಸಿನಿಮಾ ಮೇ 9ರಂದು ರಿಲೀಸ್ ಆಗಲಿದೆ.
‘ವೈಜಯಂತಿ ಮೂವೀಸ್’ ಎಕ್ಸ್ (ಟ್ವಿಟರ್) ಪೋಸ್ಟ್:
Just the warm up… #Prabhas #Kalki2898AD on 𝐌𝐀𝐘 𝟗𝐭𝐡, 𝟐𝟎𝟐𝟒. pic.twitter.com/3cH1O3FffV
— Vyjayanthi Movies (@VyjayanthiFilms) February 23, 2024
ಇತ್ತೀಚೆಗೆ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿದೆ ಎನ್ನುವ ಸುದ್ದಿ ಹರಿದಾಡಿತ್ತು. ಇದಕ್ಕೆ ನಿರ್ಮಾಪಕ ಸಿ. ಅಶ್ವಿನಿ ದತ್ ಅವರು ಉತ್ತರ ನೀಡಿದ್ದರು. ನಿರ್ಮಾಣ ಸಂಸ್ಥೆ ‘ವೈಜಯಂತಿ ಮೂವೀಸ್’ ಮೂಲಕ ಸಿನಿಮಾದ ರಿಲೀಸ್ ದಿನಾಂಕದ ಬಗ್ಗೆ ಸ್ಪಷ್ಟನೆ ನೀಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ




