Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾಕೆ ಹೀಗೆ ಆಗಿದ್ದಾರೆ ಪ್ರಭಾಸ್​? ಬಾಡಿದ ಮುಖ ನೋಡಿ ಅಭಿಮಾನಿಗಳಿಗೆ ಚಿಂತೆ

ಲುಕ್​ ಕಾರಣದಿಂದ ಪ್ರಭಾಸ್​ ಅವರನ್ನು ಟ್ರೋಲ್​ ಮಾಡಲಾಗುತ್ತಿದೆ. ದಿನದಿಂದ ದಿನಕ್ಕೆ ಅವರು ಚಾರ್ಮ್​ ಕಳೆದುಕೊಳ್ಳುತ್ತಿದ್ದಾರೆ. ಅವರ ಹೊಸ ಫೋಟೋ ನೋಡಿದ ಅಭಿಮಾನಿಗಳಿಗೆ ಚಿಂತೆ ಶುರುವಾಗಿದೆ. ಪ್ರಭಾಸ್​ ಅವರು ಫಿಟ್ನೆಸ್​ ಬಗ್ಗೆ ಕಾಳಜಿ ವಹಿಸುತ್ತಿಲ್ಲವೇ ಎಂಬ ಅನುಮಾನ ಮೂಡಿದೆ. ಕೈತುಂಬ ಸಿನಿಮಾ ಆಫರ್​ಗಳನ್ನು ಇಟ್ಟುಕೊಂಡಿರುವ ಅವರು ಹೀಗೇಕೆ ಆಗಿದ್ದಾರೆ ಎನ್ನವ ಪ್ರಶ್ನೆ ಕಾಡುತ್ತಿದೆ.

ಯಾಕೆ ಹೀಗೆ ಆಗಿದ್ದಾರೆ ಪ್ರಭಾಸ್​? ಬಾಡಿದ ಮುಖ ನೋಡಿ ಅಭಿಮಾನಿಗಳಿಗೆ ಚಿಂತೆ
ಪ್ರಭಾಸ್​ ಅವರ ವೈರಲ್​ ಫೋಟೋ
Follow us
ಮದನ್​ ಕುಮಾರ್​
|

Updated on: Feb 04, 2024 | 3:06 PM

ಪ್ಯಾನ್​ ಇಂಡಿಯಾ ಹೀರೋ ಪ್ರಭಾಸ್ (Prabhas) ಅವರಿಗೆ ಇರುವ ಸ್ಟಾರ್​ಗಿರಿ ದೊಡ್ಡದು. ಆದರೆ ‘ಬಾಹುಬಲಿ 2’ ಸಿನಿಮಾ ತೆರೆಕಂಡಾಗ ಅವರ ಮುಖದಲ್ಲಿ ಇದ್ದಂತಹ ಚಾರ್ಮ್​ ಈಗ ಉಳಿದಿಲ್ಲ. ಈ ಬಗ್ಗೆ ಸ್ವತಃ ಅವರ ಅಭಿಮಾನಿಗಳು ಅನೇಕ ಬಾರಿ ಬೇಸರ ವ್ಯಕ್ತಪಡಿಸಿದ್ದುಂಟು. ‘ರಾಧೆ ಶ್ಯಾಮ್​’ ಮತ್ತು ‘ಆದಿಪುರುಷ್​’ ಸಿನಿಮಾಗಳಲ್ಲಿ ಅವರ ಲುಕ್​ ನೋಡಿ ಫ್ಯಾನ್ಸ್​ಗೆ ನಿರಾಸೆ ಆಗಿತ್ತು. ಆದರೆ ‘ಸಲಾರ್​’ (Salaar) ಚಿತ್ರದಲ್ಲಿ ಅವರನ್ನು ಕಂಡಾಗ ಸ್ವಲ್ಪ ಸಮಾಧಾನ ಆಗಿತ್ತು. ಈಗ ಮತ್ತೆ ಅಭಿಮಾನಿಗಳು ಚಿಂತೆ ಮಾಡುವಂತಾಗಿದೆ. ಅದಕ್ಕೆ ಕಾರಣ ಆಗಿರುವುದು ಒಂದು ವೈರಲ್​ ಫೋಟೋ. ಈ ಫೋಟೋದಲ್ಲಿ (Prabhas Viral Photo) ಪ್ರಭಾಸ್​ ಅವರು ತುಂಬ ಸೊರಗಿದಂತೆ ಕಾಣುತ್ತಿದ್ದಾರೆ. ಅವರು ಯಾಕೆ ಈ ರೀತಿ ಆಗಿದ್ದಾರೆ ಎಂದು ಅಭಿಮಾನಿಗಳು ಸೋಶಿಯಲ್​ ಮೀಡಿಯಾದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.

ನಿರ್ಮಾಪಕ ದಿಲ್​ ರಾಜು ಅವರು ಇತ್ತೀಚೆಗೆ ಪ್ರಭಾಸ್​ ಅವರನ್ನು ಭೇಟಿ ಆಗಿದ್ದಾರೆ. ಸಂಬಂಧಿ ಅಶೀಶ್​ ರೆಡ್ಡಿಯ ಮದುವೆಗೆ ಅಹ್ವಾನ ನೀಡುವ ಸಲುವಾಗಿ ಈ ಭೇಟಿ ನಡೆದಿದೆ. ಈ ಸಂದರ್ಭದಲ್ಲಿ ಕ್ಲಿಕ್ಕಿಸಿದ ಫೋಟೋದಲ್ಲಿ ಪ್ರಭಾಸ್​ ಅವರು ಕಾಂತಿಹೀನವಾಗಿ ಕಾಣಿಸಿಕೊಂಡಿದ್ದಾರೆ. ಅವರು ಫಿಟ್ನೆಸ್​ ಕಳೆದುಕೊಂಡಂತೆ ಎನಿಸುತ್ತಿದೆ. ಅವರ ಮುಖ ಬಾಡಿದೆ. ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ಈ ಫೋಟೋ ನೋಡಿ ಅಭಿಮಾನಿಗಳಿಗೆ ಬೇಸರ ಆಗಿದೆ.

ಇದನ್ನೂ ಓದಿ: ಮಾರ್ಚ್​ ತನಕ ಕೆಲಸ ಮಾಡಲ್ಲ ಪ್ರಭಾಸ್​; ಈ ನಿರ್ಧಾರಕ್ಕೆ ಇದೆ ಒಂದು ಪ್ರಮುಖ ಕಾರಣ

ಪ್ರಭಾಸ್​ ಅವರ ಕೈಯಲ್ಲಿ ಅನೇಕ ಸಿನಿಮಾಗಳಿವೆ. ‘ಸಲಾರ್​’ ಸಿನಿಮಾ ಹಿಟ್​ ಆದ ಬಳಿಕ ಅವರ ಡಿಮ್ಯಾಂಡ್​ ಹೆಚ್ಚಾಗಿದೆ. ‘ಕಲ್ಕಿ 2898 ಎಡಿ’, ‘ರಾಜಾ ಸಾಬ್​’ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಮೇ 9ರಂದು ‘ಕಲ್ಕಿ 2898 ಎಡಿ’ ಚಿತ್ರ ಬಿಡುಗಡೆ ಆಗಲಿದೆ. ಇತ್ತೀಚೆಗಷ್ಟೇ ‘ರಾಜಾ ಸಾಬ್​​’ ಫಸ್ಟ್​ ಲುಕ್​ ರಿಲೀಸ್​ ಆಗಿದೆ. ಈ ಎಲ್ಲ ಸಿನಿಮಾಗಳ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಜೋರಾಗಿದೆ. ಹೀಗಿರುವಾಗ ಪ್ರಭಾಸ್​ ಅವರು ಲುಕ್​ ಮತ್ತು ಫಿಟ್ನೆಸ್​ ಬಗ್ಗೆ ಗಮನ ಹರಿಸಲೇಬೇಕಾದ ಅನಿವಾರ್ಯತೆ ಇದೆ. ಅವರನ್ನು ಮೊದಲಿನಂತೆ ಫುಲ್​ ಜೋಶ್​ನಲ್ಲಿ ನೋಡಲು ಅಭಿಮಾನಿಗಳು ಕಾದಿದ್ದಾರೆ.

ಇದನ್ನೂ ಓದಿ: ವರ್ಷಾಂತ್ಯಕ್ಕೆ ಸೆಟ್ಟೇರಲಿದೆ ಪ್ರಭಾಸ್-ವಂಗಾ ಕಾಂಬಿನೇಷನ್ ಸಿನಿಮಾ ‘ಸ್ಪಿರಿಟ್’

ಸಂದೀಪ್​ ರೆಡ್ಡಿ ವಂಗ ನಿರ್ದೇಶನದ ‘ಸ್ಪಿರಿಟ್​’ ಸಿನಿಮಾದಲ್ಲಿ ಪ್ರಭಾಸ್​ ನಟಿಸಬೇಕಿದೆ. ಅಲ್ಲದೇ, ‘ಸಲಾರ್​ 2’ ಸಿನಿಮಾಗೂ ಬೇಗ ಚಾಲನೆ ಸಿಗಲಿ ಎಂದು ಫ್ಯಾನ್ಸ್​ ಬಯಸುತ್ತಿದ್ದಾರೆ. ಇಷ್ಟೆಲ್ಲ ಡಿಮ್ಯಾಂಡ್​ ಇರುವ ಪ್ರಭಾಸ್​ ಅವರು ದಿನದಿಂದ ದಿನಕ್ಕೆ ಯಾಕೆ ಡಲ್​ ಆಗುತ್ತಿದ್ದಾರೆ ಎಂಬ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಕಾಡುತ್ತಿದೆ. ಈ ಮೊದಲು ಕೂಡ ಪ್ರಭಾಸ್​ ಅವರ ಲುಕ್​ ನೋಡಿದ ಉತ್ತರ ಭಾರತದ ಮಂದಿ ‘ಅಂಕಲ್​’ ಎಂದು ಟ್ರೋಲ್​ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..
ಅಪ್ಪಾಜಿಯ ಸಮಾಧಿಗೆ ಪೂಜೆ ಮಾಡಿ, ಶಿವಣ್ಣ ಹೇಳಿದ್ದು ಹೀಗೆ..