AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರ್ಷಾಂತ್ಯಕ್ಕೆ ಸೆಟ್ಟೇರಲಿದೆ ಪ್ರಭಾಸ್-ವಂಗಾ ಕಾಂಬಿನೇಷನ್ ಸಿನಿಮಾ ‘ಸ್ಪಿರಿಟ್’

ಸಂದೀಪ್ ವಂಗ ಒಂದರ ನಂತರ ಒಂದು ಯೋಜನೆಗಳನ್ನು ಹೊಂದಿದ್ದಾರೆ. ಅವರು ‘ಅನಿಮಲ್’ ಸಿನಿಮಾ ಸೀಕ್ವೆಲ್ ‘ಅನಿಮಲ್ ಪಾರ್ಕ್’ ಮಾಡಬೇಕಿದೆ. ಅಲ್ಲು ಅರ್ಜುನ್ ಅವರ ಜೊತೆಗೂ ಸಿನಿಮಾ ಮಾಡುತ್ತಿದ್ದಾರೆ. ಇದರ ಜೊತೆ ಹಲವು ನಿರ್ಮಾಪಕರು ಅವರ ಕಾಲ್​ಶೀಟ್ ಪಡೆಯಲು ಉತ್ಸುಕರಾಗಿದ್ದಾರೆ.

ವರ್ಷಾಂತ್ಯಕ್ಕೆ ಸೆಟ್ಟೇರಲಿದೆ ಪ್ರಭಾಸ್-ವಂಗಾ ಕಾಂಬಿನೇಷನ್ ಸಿನಿಮಾ ‘ಸ್ಪಿರಿಟ್’
ಪ್ರಭಾಸ್​
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Jan 20, 2024 | 12:21 PM

Share

ಹಲವು ನಿರ್ದೇಶಕರು ತಮ್ಮದೇ ಆದ ಸ್ಟೈಲ್ ಹೊಂದಿದ್ದಾರೆ. ಕೆಲವು ನಿರ್ದೇಶಕರು ತಮ್ಮ ಪ್ರಾಜೆಕ್ಟ್‌ಗಳನ್ನು ಕಡಿಮೆ ಸಮಯದಲ್ಲಿ ಪ್ರೇಕ್ಷಕರ ಎದುರು ಪ್ರಸ್ತುತಪಡಿಸಿದರೆ, ಕೆಲವರು ಬಹಳ ಸಮಯ ತೆಗೆದುಕೊಳ್ಳುತ್ತಾರೆ. ಮಾಡಿರೋ ಕೆಲಸ ತೃಪ್ತಿ ಕೊಟ್ಟ ಬಳಿಕವೇ ಅದನ್ನು ಪ್ರೇಕ್ಷಕರ ಎದುರು ತರುವ ಅನೇಕರಿದ್ದಾರೆ. ಅದಕ್ಕೆ ಹಲವು ವರ್ಷ ಮುಡಿಪಿಡುತ್ತಾರೆ. ಅಂತಹ ನಿರ್ದೇಶಕರಲ್ಲಿ ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ಕೂಡ ಒಬ್ಬರು. ಅವರು ಮಾಡಿರೋ ಮೂರು ಸಿನಿಮಾಗಳು ಹಿಟ್ ಆಗಿವೆ. ಅವರ ಮುಂದಿನ ಪ್ರಾಜೆಕ್ಟ್ ಯಾವುದು ಎನ್ನುವ ಕುತೂಹಲ ಮೂಡಿದೆ.

ಸಂದೀಪ್ ವಂಗಾ ಅವರ ಈವರೆಗೆ ಮೂರು ಹಿಟ್ ಸಿನಿಮಾ ನೀಡಿದ್ದಾರೆ. ‘ಅರ್ಜುನ್ ರೆಡ್ಡಿ’ ತೆಲುಗಿನಲ್ಲಿ ಸೂಪರ್ ಹಿಟ್ ಆಯಿತು. ಆ ಬಳಿಕ ಅದನ್ನು ‘ಕಬೀರ್ ಸಿಂಗ್’ ಹೆಸರಲ್ಲಿ ಹಿಂದಿಗೆ ರಿಮೇಕ್ ಮಾಡಿದರು. ಈಗ ರಣಬೀರ್ ಕಪೂರ್ ಅವರೊಂದಿಗೆ ‘ಅನಿಮಲ್’ ಮಾಡಿ ಗೆದ್ದಿದ್ದಾರೆ. ಈ ಚಿತ್ರದಲ್ಲಿ ನಟಿಸಿದ ಎಲ್ಲರ ಖ್ಯಾತಿ ಹೆಚ್ಚಾಗಿದೆ. ಸಂದೀಪ್ ವಂಗಾ ಪ್ರಭಾಸ್ ನಟನೆಯ ‘ಸ್ಪಿರಿಟ್’ ಚಿತ್ರದ ಕೆಲಸವನ್ನು ಪ್ರಾರಂಭಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಸಂದೀಪ್ ವಂಗ ಒಂದರ ನಂತರ ಒಂದು ಯೋಜನೆಗಳನ್ನು ಹೊಂದಿದ್ದಾರೆ. ಅವರು ‘ಅನಿಮಲ್’ ಸಿನಿಮಾ ಸೀಕ್ವೆಲ್ ‘ಅನಿಮಲ್ ಪಾರ್ಕ್’ ಮಾಡಬೇಕಿದೆ. ಅಲ್ಲು ಅರ್ಜುನ್ ಅವರ ಜೊತೆಗೂ ಸಿನಿಮಾ ಮಾಡುತ್ತಿದ್ದಾರೆ. ಇದರ ಜೊತೆ ಹಲವು ನಿರ್ಮಾಪಕರು ಅವರ ಕಾಲ್​ಶೀಟ್ ಪಡೆಯಲು ಉತ್ಸುಕರಾಗಿದ್ದಾರೆ. ಅವರು ತಮ್ಮ ಪ್ರತಿ ಸಿನಿಮಾ ಮಾಡಲು ಅಗತ್ಯಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ವರ್ಷಾಂತ್ಯಕ್ಕೆ ‘ಸ್ಪಿರಿಟ್’ ಸಿನಿಮಾ ಆರಂಭ ಆಗಲಿದೆ.

‘ಅರ್ಜುನ್ ರೆಡ್ಡಿ’ ಹಿಟ್ ಆದ ಬಳಿಕ ಆ ಚಿತ್ರವನ್ನು ‘ಕಬೀರ್ ಸಿಂಗ್’ ಹೆಸರಲ್ಲಿ ಹಿಂದಿಗೆ ರಿಮೇಕ್ ಮಾಡಲು ಸಂದೀಪ್ ಎರಡು ವರ್ಷ ತೆಗೆದುಕೊಂಡರು. ‘ಅನಿಮಲ್‌’ ಚಿತ್ರಕ್ಕಾಗಿ ನಾಲ್ಕು ವರ್ಷಗಳ ಸುದೀರ್ಘ ಸಮಯ ತೆಗೆದುಕೊಂಡಿದ್ದರು. ಈಗ ‘ಸ್ಪಿರಿಟ್’ ಸಿನಿಮಾ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ. ‘ಪ್ರಭಾಸ್ ಚಿತ್ರವನ್ನು ಆದಷ್ಟು ಬೇಗ ಮುಗಿಸುವ ಆಲೋಚನೆ ನನಗೆ ಇದೆ. ಈ ವರ್ಷಾಂತ್ಯದೊಳಗೆ ಸ್ಪಿರಿಟ್ ಸಿನಿಮಾ ಕಾರ್ಯ ಆರಂಭಿಸುತ್ತೇನೆ’ ಎಂದು ಅವರು ಹೇಳಿದ್ದಾರೆ ಎಂದು ವರದಿ ಆಗಿದೆ.

ಇದನ್ನೂ ಓದಿ: ‘ಸಲಾರ್’ ಒಟಿಟಿ ರಿಲೀಸ್ ದಿನಾಂಕ ಘೋಷಣೆ; ಸರ್​ಪ್ರೈಸ್ ಕೊಟ್ಟ ನೆಟ್​ಫ್ಲಿಕ್ಸ್

‘ಸಲಾರ್’ ಸಿನಿಮಾ ಮೂಲಕ ಪ್ರಭಾಸ್ ದೊಡ್ಡ ಗೆಲುವು ಕಂಡಿದ್ದಾರೆ. ಈ ಚಿತ್ರ ಥಿಯೇಟರ್​ನಲ್ಲಿ ಹಿಟ್ ಆಗಿ ಒಟಿಟಿಯಲ್ಲಿ ರಿಲೀಸ್ ಆಗಿದೆ. ಅದೇ ರೀತಿ ಸಂದೀಪ್ ನಿರ್ದೇಶನದ ‘ಅನಿಮಲ್’ ಸಿನಿಮಾ ಕೂಡ ಭರ್ಜರಿ ಗಳಿಕೆ ಮಾಡಿದೆ. ಎರಡು ಹಿಟ್ ಕಾಂಬಿನೇಷನ್ ಒಂದಾಗುತ್ತಿರುವದರಿಂದ ಸಹಜವಾಗಿಯೇ ನಿರೀಕ್ಷೆ ಹೆಚ್ಚಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?