AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾರ್ಚ್​ ತನಕ ಕೆಲಸ ಮಾಡಲ್ಲ ಪ್ರಭಾಸ್​; ಈ ನಿರ್ಧಾರಕ್ಕೆ ಇದೆ ಒಂದು ಪ್ರಮುಖ ಕಾರಣ

ಟಾಲಿವುಡ್​ ಸ್ಟಾರ್​ ನಟ ಪ್ರಭಾಸ್​ ಅವರು ಈಗ ಹಲವು ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಆಗಿದ್ದಾರೆ. ಬಹುನಿರೀಕ್ಷಿತ ‘ರಾಜಾ ಸಾಬ್​​’, ‘ಕಲ್ಕಿ 2898 ಎಡಿ’ ಮುಂತಾದ ಚಿತ್ರಗಳಲ್ಲಿ ಅವರು ಅಭಿನಯಿಸುತ್ತಿದ್ದಾರೆ. ನಂತರ ‘ಸ್ಪಿರಿಟ್​’ ಚಿತ್ರ ಸೆಟ್ಟೇರಲಿದೆ. ಈ ಎಲ್ಲ ಕೆಲಸಗಳು ಇದ್ದರೂ ಸಹ ಅವರು ವೇಗವಾಗಿ ಸಿನಿಮಾ ಮಾಡಲು ರೆಡಿ ಇಲ್ಲ. ಅವರ ಈ ನಿರ್ಧಾರದ ಹಿಂದೆ ಒಂದು ಕಾರಣವಿದೆ.

ಮಾರ್ಚ್​ ತನಕ ಕೆಲಸ ಮಾಡಲ್ಲ ಪ್ರಭಾಸ್​; ಈ ನಿರ್ಧಾರಕ್ಕೆ ಇದೆ ಒಂದು ಪ್ರಮುಖ ಕಾರಣ
ಪ್ರಭಾಸ್​
ಮದನ್​ ಕುಮಾರ್​
|

Updated on: Jan 31, 2024 | 12:19 PM

Share

ನಟ ಪ್ರಭಾಸ್​ ಅವರು ‘ಸಲಾರ್​’ (Salaar) ಸಿನಿಮಾದ ಯಶಸ್ಸಿನಿಂದ ಖುಷಿ ಆಗಿದ್ದಾರೆ. 2023ರ ಡಿಸೆಂಬರ್​ 22ರಂದು ‘ಸಲಾರ್​’ ಬಿಡುಗಡೆ ಆಗಿ ಉತ್ತಮ ಕಲೆಕ್ಷನ್​ ಮಾಡಿತು. ಅದಕ್ಕೂ ಮುನ್ನ ತೆರೆಕಂಡಿದ್ದ ‘ಆದಿಪುರುಷ್​’ ಸಿನಿಮಾದಿಂದ ಪ್ರಭಾಸ್​ (Prabhas) ಅವರು ಸೋಲುಂಡಿದ್ದರು. ಹಾಗಾಗಿ ‘ಸಲಾರ್​’ ಚಿತ್ರದ ಗೆಲುವು ಅವರಿಗೆ ಹೊಸ ಚೈತನ್ಯ ನೀಡಿತು. ಹಾಗಂತ ಮುಂದಿನ ಸಿನಿಮಾಗಳ ಕೆಲಸಗಳನ್ನು ಅವರು ಅವಸರದಲ್ಲಿ ಮುಗಿಸುತ್ತಿಲ್ಲ. ಬದಲಿಗೆ ಕೆಲವು ವಾರಗಳ ಕಾಲ ಬ್ರೇಕ್​ ತೆಗೆದುಕೊಳ್ಳಲು ಪ್ರಭಾಸ್​ ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮಾರ್ಚ್​ ತನಕ ಪ್ರಭಾಸ್​ ವಿಶ್ರಾಂತಿ ಪಡೆಯಲಿದ್ದಾರೆ.

ಪ್ರಭಾಸ್​ ಅವರ ಕೈಯಲ್ಲಿ ಈಗ ಹಲವು ಪ್ರಾಜೆಕ್ಟ್​ಗಳಿವೆ. ‘ಕಲ್ಕಿ 2898 ಎಡಿ’, ‘ರಾಜಾ ಸಾಬ್​​’ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಬಳಿಕ ‘ಸ್ಪಿರಿಟ್​’ ಸಿನಿಮಾ ಸೆಟ್ಟೇರಲಿದೆ. ಇಷ್ಟೆಲ್ಲ ಕೆಲಸಗಳು ಇದ್ದರೂ ಕೂಡ ಪ್ರಭಾಸ್​ ಅವರು ವೇಗವಾಗಿ ಸಿನಿಮಾ ಮಾಡಲು ಸಿದ್ಧರಿಲ್ಲ. ಅವರ ಈ ನಿರ್ಧಾರಕ್ಕೆ ಒಂದು ಪ್ರಮುಖ ಕಾರಣ ಇದೆ. ಅದೇನೆಂದರೆ, ಆರೋಗ್ಯದ ಕಡೆಗೆ ಗಮನ ನೀಡಬೇಕು ಎಂದು ಅವರು ನಿರ್ಧರಿಸಿದ್ದಾರೆ.

ಇದನ್ನೂ ಓದಿ: ಗೆಲುವಿಗಾಗಿ ಹೆಸರು ಬದಲಿಸಿಕೊಂಡ್ರಾ ಪ್ರಭಾಸ್​? ಹೊಸ ಪೋಸ್ಟರ್​ನಿಂದ ಹುಟ್ಟಿತು ಅನುಮಾನ

ಪ್ರಭಾಸ್​ ಅವರಿಗೆ ಕೆಲವು ಆರೋಗ್ಯ ಸಮಸ್ಯೆಗಳಿವೆ. ಈಗಾಗಲೇ ಸರ್ಜರಿ ಮಾಡಿದ್ದರೂ ಕೂಡ ಅದರಿಂದ ಅವರು ಸಂಪೂರ್ಣವಾಗಿ ಚೇರಿಸಿಕೊಂಡಿಲ್ಲ. ಹಾಗಾಗಿ ಇನ್ನೊಂದು ಸರ್ಜರಿಗಾಗಿ ಅವರು ಯೂರೋಪ್​ಗೆ ತೆರಳಲಿದ್ದಾರೆ ಎಂದು ಕೆಲವೆಡೆ ವರದಿ ಆಗಿದೆ. ಪ್ರಭಾಸ್​ ಅವರನ್ನು ಬ್ಯಾಕ್​ ಟು ಬ್ಯಾಕ್​ ಹಿರಿತೆರೆಯಲ್ಲಿ ನೋಡಬೇಕು ಎಂಬುದು ಫ್ಯಾನ್ಸ್​ ಆಸೆ. ಆದರೆ ಅವರು ವಿಶ್ರಾಂತಿಗೆ ಹೆಚ್ಚು ಸಮಯ ತೆಗೆದುಕೊಂಡರೆ ಸಿನಿಮಾ ಬಿಡುಗಡೆ ವಿಳಂಬ ಆಗುವುದು ಗ್ಯಾರಂಟಿ.

ಇದನ್ನೂ ಓದಿ: ವರ್ಷಾಂತ್ಯಕ್ಕೆ ಸೆಟ್ಟೇರಲಿದೆ ಪ್ರಭಾಸ್-ವಂಗಾ ಕಾಂಬಿನೇಷನ್ ಸಿನಿಮಾ ‘ಸ್ಪಿರಿಟ್’

ಈಗ ಪ್ರಭಾಸ್​ ಅವರಿಗೆ 44 ವರ್ಷ ವಯಸ್ಸು. ಸದ್ಯಕ್ಕಂತೂ ಅವರು ಮದುವೆ ಬಗ್ಗೆ ಆಲೋಚನೆ ಮಾಡಿಲ್ಲ. ಆದಷ್ಟ ಬೇಗ ಅವರು ವೈವಾಹಿಕ ಜೀವನಕ್ಕೆ ಕಾಲಿಡಲಿ ಎಂದು ಕೂಡ ಅಭಿಮಾನಿಗಳು ಬಯಸುತ್ತಿದ್ದಾರೆ. ಆ ಬಗ್ಗೆ ಪ್ರಭಾಸ್​ ಅವರು ಯಾವಾಗ ನಿರ್ಧಾರ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ. ‘ಕಲ್ಕಿ 2898 ಎಡಿ’, ‘ರಾಜಾ ಸಾಬ್​​’ ಸಿನಿಮಾಗಳ ಮೇಲೆ ಹೆಚ್ಚು ನಿರೀಕ್ಷೆ ಇದೆ. ಅದ್ದೂರಿ ಬಜೆಟ್​ನಲ್ಲಿ ‘ಕಲ್ಕಿ 2898 ಎಡಿ’ ಸಿನಿಮಾ ಸಿದ್ಧವಾಗುತ್ತಿದ್ದು ಈ ಚಿತ್ರದಲ್ಲಿ ಅಮಿತಾಭ್​ ಬಚ್ಚನ್​, ಕಮಲ್​ ಹಾಸನ್​ ಮುಂತಾದವರು ನಟಿಸುತ್ತಿದ್ದಾರೆ. ಮೇ 9ರಂದು ಈ ಚಿತ್ರ ತೆರೆಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್
ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ
ಸನ್​ರೂಫ್ ಬಳಿ ನಿಂತು ಕೈ ಬೀಸುತ್ತಿದ್ದಾಗ ಬ್ರೇಕ್ ಹಾಕಿದ ಕಾರು
ಸನ್​ರೂಫ್ ಬಳಿ ನಿಂತು ಕೈ ಬೀಸುತ್ತಿದ್ದಾಗ ಬ್ರೇಕ್ ಹಾಕಿದ ಕಾರು
ಡ್ರಗ್ಸ್​ ದಂಧೆಕೋರರಿಗೆ ಶಾಕ್​: 3 ಕೆ.ಜಿ. MDMA ಸೀಜ್​, ಇಬ್ಬರು ಅರೆಸ್ಟ್​
ಡ್ರಗ್ಸ್​ ದಂಧೆಕೋರರಿಗೆ ಶಾಕ್​: 3 ಕೆ.ಜಿ. MDMA ಸೀಜ್​, ಇಬ್ಬರು ಅರೆಸ್ಟ್​