ಗೆಲುವಿಗಾಗಿ ಹೆಸರು ಬದಲಿಸಿಕೊಂಡ್ರಾ ಪ್ರಭಾಸ್​? ಹೊಸ ಪೋಸ್ಟರ್​ನಿಂದ ಹುಟ್ಟಿತು ಅನುಮಾನ

ಪ್ರಭಾಸ್​ ಮತ್ತು ನಿರ್ದೇಶಕ ಮಾರುತಿ ಅವರ ಕಾಂಬಿನೇಷನ್​ನಲ್ಲಿ ‘ದಿ ರಾಜಾ ಸಾಬ್​’ ಸಿನಿಮಾ ಮೂಡಿಬರುತ್ತಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಈ ಸಿನಿಮಾದ ಹೊಸ ಪೋಸ್ಟರ್​ ಬಿಡುಗಡೆ ಆಗಿದೆ. ಇದನ್ನು ನೋಡಿದ ಅಭಿಮಾನಿಗಳ ಕಣ್ಣು ಕುಕ್ಕಿರುವುದು ಪೋಸ್ಟರ್​ ಮೇಲೆ ಇರುವ ಪ್ರಭಾಸ್​ ಹೆಸರು!

ಗೆಲುವಿಗಾಗಿ ಹೆಸರು ಬದಲಿಸಿಕೊಂಡ್ರಾ ಪ್ರಭಾಸ್​? ಹೊಸ ಪೋಸ್ಟರ್​ನಿಂದ ಹುಟ್ಟಿತು ಅನುಮಾನ
ಪ್ರಭಾಸ್​
Follow us
ಮದನ್​ ಕುಮಾರ್​
|

Updated on: Jan 15, 2024 | 11:20 AM

ನಟ ಪ್ರಭಾಸ್​ (Prabhas) ಅವರು ಚಿತ್ರರಂಗದಲ್ಲಿ ಅನೇಕ ಏಳು-ಬೀಳುಗಳನ್ನು ಕಂಡಿದ್ದಾರೆ. ಅವರ ಕೆಲವು ಸಿನಿಮಾಗಳು ಬ್ಲಾಕ್​ ಬಸ್ಟರ್​ ಹಿಟ್​​ ಆಗಿವೆ. ಇನ್ನೂ ಕೆಲವು ಸಿನಿಮಾಗಳು ಹೀನಾಯವಾಗಿ ಸೋಲು ಕಂಡಿವೆ. ‘ಬಾಹುಬಲಿ 2’ ತೆರೆಕಂಡ ಬಳಿಕ ಅವರು ಗೆದ್ದಿದ್ದಕ್ಕಿಂತ ಸೋತಿದ್ದೇ ಹೆಚ್ಚು. ಇತ್ತೀಚೆಗೆ ತೆರೆಕಂಡ ‘ಸಲಾರ್​’ (Salaar) ಸಿನಿಮಾದಿಂದ ಅವರು ಮತ್ತೆ ಗೆಲುವಿನ ಟ್ರ್ಯಾಕ್​ಗೆ ಮರಳಿದ್ದಾರೆ. ಅದೇ ರೀತಿ ಮುಂಬರುವ ಸಿನಿಮಾಗಳು ಕೂಡ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಅದಕ್ಕಾಗಿ ಪ್ರಭಾಸ್​ ಅವರು ಹೆಸರು ಬದಲಾಯಿಸಿಕೊಂಡಿದ್ದಾರಾ ಎಂಬ ಅನುಮಾನ ಮೂಡಿದೆ. ಅದಕ್ಕೆಲ್ಲ ಕಾರಣ ಆಗಿರುವುದು ‘ದಿ ರಾಜಾ ಸಾಬ್​’ (The Raja Saab) ಸಿನಿಮಾದ ಹೊಸ ಪೋಸ್ಟರ್​.

ಪ್ರಭಾಸ್​ ಮತ್ತು ನಿರ್ದೇಶಕ ಮಾರುತಿ ಅವರ ಕಾಂಬಿನೇಷನ್​ನಲ್ಲಿ ‘ದಿ ರಾಜಾ ಸಾಬ್​’ ಸಿನಿಮಾ ಮೂಡಿಬರುತ್ತಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಈ ಸಿನಿಮಾದ ಹೊಸ ಪೋಸ್ಟರ್​ ಬಿಡುಗಡೆ ಆಗಿದೆ. ಇದರಲ್ಲಿ ಪ್ರಭಾಸ್ ಅವರು ಲುಂಗಿ ಧರಿಸಿ ಪೋಸ್​ ನೀಡಿದ್ದಾರೆ. ಯಾವುದೋ ಸೆಲೆಬ್ರೇಷನ್​ನಲ್ಲಿ ಅವರು ನಡೆದುಬರುತ್ತಿರುವ ರೀತಿಯಲ್ಲಿ ಈ ಪೋಸ್ಟರ್​ ಮೂಡಿಬಂದಿದೆ. ಅದರ ನಡುವೆ ಅಭಿಮಾನಿಗಳ ಕಣ್ಣು ಕುಕ್ಕಿರುವುದು ಪೋಸ್ಟರ್​ ಮೇಲೆ ಇರುವ ಪ್ರಭಾಸ್​ ಹೆಸರು.

ಇದನ್ನೂ ಓದಿ: Prabhas: ಪ್ರಭಾಸ್ ಈಗ ‘ದಿ ರಾಜಾ ಸಾಬ್’; ಹೇಗಿದೆ ನೋಡಿ ಫಸ್ಟ್ ಲುಕ್

ಇಷ್ಟು ದಿನ ಪ್ರಭಾಸ್​ ಅವರ ಹೆಸರನ್ನು ಇಂಗ್ಲಿಷ್​ನಲ್ಲಿ Prabhas ಎಂದು ಬರೆಯಲಾಗುತ್ತಿತ್ತು. ಆದರೆ ‘ದಿ ರಾಜಾ ಸಾಬ್​’ ಸಿನಿಮಾದ ಪೋಸ್ಟರ್​ನಲ್ಲಿ ‘Prabhass’ ಎಂದು ಬರೆಯಲಾಗಿದೆ. ಅಂದರೆ, ಹೆಸರಿನ ಕೊನೆಯಲ್ಲಿ ಹೆಚ್ಚುವರಿಯಾಗಿ ಒಂದು ‘s’ ಸೇರಿಸಲಾಗಿದೆ. ಸಂಖ್ಯಾಶಾಸ್ತ್ರವನ್ನು ನಂಬಿಕೊಂಡು ಪ್ರಭಾಸ್​ ಅವರು ಈ ಬದಲಾವಣೆ ಮಾಡಿಕೊಂಡಿದ್ದಾರಾ ಅಥವಾ ಪೋಸ್ಟರ್​ ವಿನ್ಯಾಸ ಮಾಡುವವರ ಕಣ್ತಪ್ಪಿನಿಂದ ಈ ರೀತಿ ಆಗಿದೆಯಾ ಎಂಬ ಪ್ರಶ್ನೆಗೆ ಚಿತ್ರತಂಡವೇ ಉತ್ತರ ನೀಡಬೇಕು.

View this post on Instagram

A post shared by Prabhas (@actorprabhas)

‘ಸಲಾರ್​’ ಗೆಲುವಿನ ನಂತರ ಪ್ರಭಾಸ್​ ಅವರ ಮುಂಬರುವ ಸಿನಿಮಾಗಳ ಮೇಲೆ ನಿರೀಕ್ಷೆ ಮೂಡಿದೆ. ಹಲವು ಸಿನಿಮಾಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಆ ಪೈಕಿ ‘ಕಲ್ಕಿ 2898 ಎಡಿ’ ಸಿನಿಮಾ ನಿರೀಕ್ಷೆ ಮೂಡಿಸಿದೆ. ಆ ಸಿನಿಮಾದಲ್ಲಿ ಅಮಿತಾಭ್​ ಬಚ್ಚನ್​, ದಿಶಾ ಪಟಾನಿ, ಕಮಲ್​ ಹಾಸನ್​, ದೀಪಿಕಾ ಪಡುಕೋಣೆ ಮುಂತಾದವರು ನಟಿಸುತ್ತಿದ್ದಾರೆ. ಅದರಲ್ಲಿ ಸೈನ್ಸ್​ ಫಿಕ್ಷನ್​ ಕಥಾಹಂದರ ಇರಲಿದ್ದು, ನಾಗ್​ ಅಶ್ವಿನ್​ ಅವರು ನಿರ್ದೇಶನ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್