ಇವರು ಸಿನಿಮಾ ಸೋತ ಬಳಿಕ ಎಲ್ಲರ ಮುಂದೆ ಬಹಿರಂಗವಾಗಿ ಕ್ಷಮೆ ಕೇಳಿದ್ದರು 

ಸಿನಿಮಾ ಮಾಡುವ ಪ್ರತಿ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಚಿತ್ರವನ್ನು ಹಿಟ್ ಮಾಡುವ ಉದ್ದೇಶವೇ ಇರುತ್ತದೆ. ಆದರೆ, ತಪ್ಪು ಲೆಕ್ಕಾಚಾರದಿಂದ ಸಿನಿಮಾ ಸೋಲುತ್ತದೆ.

ಇವರು ಸಿನಿಮಾ ಸೋತ ಬಳಿಕ ಎಲ್ಲರ ಮುಂದೆ ಬಹಿರಂಗವಾಗಿ ಕ್ಷಮೆ ಕೇಳಿದ್ದರು 
ಇವರು ಸಿನಿಮಾ ಸೋತ ಬಳಿಕ ಮುಂದೆ ಬಂದು ಬಹಿರಂಗವಾಗಿ ಕ್ಷಮೆ ಕೇಳಿದ್ದರು 
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jan 15, 2024 | 12:31 PM

ಬಾಲಿವುಡ್‌ನಲ್ಲಿ ಪ್ರತಿ ವರ್ಷ ಅನೇಕ ಚಿತ್ರಗಳು ತಯಾರಾಗುತ್ತವೆ. 2022ರಲ್ಲಿ ಬಾಲಿವುಡ್ (Bollywood) ಚಾರ್ಮ್​ ಕಳೆದುಕೊಂಡಿತ್ತು. ಆದರೆ, 2023ರಲ್ಲಿ ಅನೇಕ ಸೂಪರ್ ಹಿಟ್ ಚಿತ್ರಗಳು ಬಂದವು. ಕೆಲವು ಚಿತ್ರಗಳು ಎಷ್ಟೇ ದೊಡ್ಡ ಬಜೆಟ್​ನಲ್ಲಿ ರೆಡಿ ಆದರೂ ಪ್ರೇಕ್ಷಕರನ್ನು ಆಕರ್ಷಿಸಲು ಸಾಧ್ಯವಾಗುವುದಿಲ್ಲ. ಆದಗ್ಯೂ ಸಿನಿಮಾನ ಕೆಲವು ನಿರ್ದೇಶಕರು ಸಮರ್ಥಿಸಿಕೊಳ್ಳುತ್ತಾರೆ. ಸಿನಿಮಾ ಹಿಟ್ ಆಗದೇ ಇರಲು ಕಾರಣ ನೀಡುತ್ತಾರೆ. ಇನ್ನೂ ಕೆಲವರು ಸುಳ್ಳು ಬಾಕ್ಸ್ ಆಫೀಸ್ ಲೆಕ್ಕಾಚಾರ ನೀಡಿ ತಮ್ಮ ಸಿನಿಮಾ ಗೆದ್ದಿದೆ ಎಂದು ಘೋಷಣೆ ಮಾಡುತ್ತಾರೆ. ಇನ್ನೂ ಕೆಲವರು ತಮ್ಮ ವೈಫಲ್ಯವನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ ಮತ್ತು ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ.

ಸಿನಿಮಾ ಮಾಡುವ ಪ್ರತಿ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಚಿತ್ರವನ್ನು ಹಿಟ್ ಮಾಡುವ ಉದ್ದೇಶವೇ ಇರುತ್ತದೆ. ಆದರೆ, ತಪ್ಪು ಲೆಕ್ಕಾಚಾರದಿಂದ ಸಿನಿಮಾ ಸೋಲುತ್ತದೆ. ತಮ್ಮ ತಪ್ಪುಗಳನ್ನು ಸಂಪೂರ್ಣ ಜವಾಬ್ದಾರಿಯಿಂದ ಒಪ್ಪಿಕೊಳ್ಳುವ ಮತ್ತು ಅಭಿಮಾನಿಗಳಿಗೆ ಕ್ಷಮಿಸಿ ಎಂದು ಕೇಳುವ ನಿರ್ದೇಶಕರು ಇನ್ನೂ ಇದ್ದಾರೆ.

ಕರಣ್ ಜೋಹರ್- ‘ಕಳಂಕ್’

ಕರಣ್ ಜೋಹರ್ ‘ಕಳಂಕ್’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಚಿತ್ರ ಹೀನಾಯವಾಗಿ ಸೋಲು ಕಂಡಿದೆ. ‘ಕಳಂಕ್ ಚಿತ್ರದ ವೈಫಲ್ಯಕ್ಕೆ ನಾನೇ ಕಾರಣ ಎಂದು ಭಾವಿಸುತ್ತೇನೆ. ನಾನು ತಂಡದಲ್ಲಿದ್ದ ಹಿರಿಯ ವ್ಯಕ್ತಿ. ನಾನು ಅದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕಾಗಿತ್ತು. ನಾನು 15 ವರ್ಷಗಳ ಹಿಂದೆ ಈ ಚಿತ್ರವನ್ನು ಮಾಡಬೇಕೆಂದು ಬಯಸಿದ್ದೆ. ಅದು ನನ್ನ ತಂದೆಗೂ ಇಷ್ಟವಾಗಿತ್ತು. ಇದಕ್ಕಾಗಿ ಅವರು ಸಾಕಷ್ಟು ಸಂಶೋಧನೆ ನಡೆಸಿದ್ದರು’ ಎಂದಿದ್ದರು ಕರಣ್ ಜೋಹರ್.

ಇಮ್ತಿಯಾಜ್ ಅಲಿ- ‘ಲವ್ ಆಜ್ ಕಲ್ 2’

ಇಮ್ತಿಯಾಜ್ ಅಲಿ ಅವರ ‘ಲವ್ ಆಜ್ ಕಲ್’ ಚಿತ್ರ ಹಿಟ್ ಆಗಿತ್ತು. ಆದರೆ ಚಿತ್ರದ ಎರಡನೇ ಭಾಗಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿಲ್ಲ. ತಮ್ಮ ಚಿತ್ರದ ಬಗ್ಗೆ ಮಾತನಾಡುವಾಗ, ‘ಚಿತ್ರದ ಕಥೆ ಚೆನ್ನಾಗಿತ್ತು. ಆದರೆ, ಅದನ್ನು ಸರಿಯಾಗಿ ವ್ಯಕ್ತಪಡಿಸಲು ಸಾಧ್ಯವಾಗಲಿಲ್ಲ’ ಎಂದು ಅವರು ಹೇಳಿದ್ದರು.

ಇದನ್ನೂ ಓದಿ: ಸೆಟ್​ನಲ್ಲಿ ಬಸ್ಸು, ಕಾರು ಉಡೀಸ್ ಮಾಡಿದ ರೋಹಿತ್ ಶೆಟ್ಟಿ; ಇಲ್ಲಿದೆ ಝಲಕ್

ರೋಹಿತ್ ಶೆಟ್ಟಿ- ‘ಸರ್ಕಸ್’

ರೋಹಿತ್ ಶೆಟ್ಟಿ ನಿರ್ದೇಶನದ, ರಣವೀರ್ ಸಿಂಗ್ ನಟನೆಯ ‘ಸರ್ಕಸ್’ ಸಿನಿಮಾ ಹೀನಾಯ ಸೋಲು ಕಂಡಿತು. ‘ಕಾಫಿ ವಿಥ್ ಕರಣ್‌’ ಶೋನಲ್ಲಿ ನಡೆದ ಸಂಭಾಷಣೆಯಲ್ಲಿ ರೋಹಿತ್ ಶೆಟ್ಟಿ ತಮ್ಮ ‘ಸರ್ಕಸ್’ ಚಿತ್ರದ ಬಗ್ಗೆ ಮಾತನಾಡಿದ್ದರು. ‘ಹೌದು, ನಾವು ತಪ್ಪು ಮಾಡಿದ್ದೇವೆ. ಕೊವಿಡ್ ಸಮಯದಲ್ಲಿ ನಾವು ಈ ಚಿತ್ರವನ್ನು ಮಾಡಿದ್ದೆವು. ನಾವು ಇದನ್ನು ಸೂರ್ಯವಂಶಿ ಚಿತ್ರಕ್ಕಿಂತ ಮೊದಲು ರಿಲೀಸ್ ಮಾಡಬೇಕಿತ್ತು. ನಿರ್ದೇಶಕನಾಗಿ ತಪ್ಪು ಮಾಡಿದ್ದೇನೆ ಎಂದು ಒಪ್ಪಿಕೊಳ್ಳುತ್ತೇನೆ. ಇದು ಕಡಿಮೆ ಬಜೆಟ್‌ನ ಚಿತ್ರವಾಗಿರುವುದು ನಮ್ಮ ಅದೃಷ್ಟ. ದೊಡ್ಡ ಬಜೆಟ್ ಸಿನಿಮಾ ಇದಾಗಿದ್ದರೆ ಸಮಸ್ಯೆ ಆಗುತ್ತಿತ್ತು’ ಎಂದು ಅವರು ಹೇಳಿದ್ದರು.

‘ಆದಿಪುರುಷ್’ – ಮನೋಜ್ ಮುಂತಶಿರ್

ಪ್ರಭಾಸ್ ನಟನೆಯ ‘ಆದಿಪುರುಷ್’ ಚಿತ್ರದ ಬಗ್ಗೆ ಆದ ಟ್ರೋಲ್ ಒಂದೆರಡಲ್ಲ. ಈ ಚಿತ್ರದಿಂದಾಗಿ ಅಭಿಮಾನಿಗಳು ತುಂಬಾ ಕೋಪಗೊಂಡಿದ್ದರು. ಚಿತ್ರಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಚಿತ್ರಕ್ಕೆ ಕಥೆ ಹಾಗೂ ಸಂಭಾಷಣೆ ಬರೆದ ಮನೋಜ್ ಮುಂತಶಿರ್ ಎಲ್ಲರ ಬಳಿ ಕ್ಷಮೆ ಕೇಳಿದ್ದರು. ‘ನಾನು ನನ್ನ ಚಿತ್ರದ ವೈಫಲ್ಯವನ್ನು ಸಮರ್ಥಿಸಿಕೊಳ್ಳುವ ಮತ್ತು ನಾನು ಅದನ್ನು ಚೆನ್ನಾಗಿ ಬರೆದಿದ್ದೇನೆ ಎಂದು ನನ್ನ ಬರವಣಿಗೆಯ ಕೌಶಲ್ಯದ ಮೇಲೆ ಹೇಳುವ ವ್ಯಕ್ತಿ ನಾನು ಅಲ್ಲ. ಇದು ನೂರಕ್ಕೆ ನೂರು ನನ್ನ ತಪ್ಪು. ನಾನು ದೊಡ್ಡ ತಪ್ಪು ಮಾಡಿದೆ. ಆದರೆ ಈ ತಪ್ಪಿನ ಹಿಂದೆ ಯಾವುದೇ ದುರುದ್ದೇಶ ಇರಲಿಲ್ಲ’ ಎಂದಿದ್ದರು ಅವರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ