‘ಫೈಟರ್​’ ಸಿನಿಮಾದಲ್ಲಿ ಯುದ್ಧ ವಿಮಾನಗಳ ಸೆಣೆಸಾಟ; ಹೇಗಿದೆ ನೋಡಿ ಟ್ರೇಲರ್​..

ದೊಡ್ಡ ಬಜೆಟ್​ನಲ್ಲಿ ‘ಫೈಟರ್​’ ಸಿನಿಮಾ ನಿರ್ಮಾಣ ಆಗಿದೆ. ಐಮ್ಯಾಕ್ಸ್​ 3ಡಿ ವರ್ಷನ್​ನಲ್ಲೂ ಈ ಚಿತ್ರ ಬಿಡುಗಡೆ ಆಗಲಿದೆ. ಆ ಮೂಲಕ ಪ್ರೇಕ್ಷಕರಿಗೆ ಮಸ್ತ್​ ಮನರಂಜನೆಯ ಅನುಭವ ಸಿಗಲಿದೆ. ಯುದ್ಧ ವಿಮಾನಗಳ ಪೈಲೆಟ್​ ಆಗಿ ದೀಪಿಕಾ ಪಡುಕೋಣೆ, ಹೃತಿಕ್ ರೋಷನ್​ ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್​ ಬಿಡುಗಡೆಯಾಗಿ ಧೂಳೆಬ್ಬಿಸುತ್ತಿದೆ.

‘ಫೈಟರ್​’ ಸಿನಿಮಾದಲ್ಲಿ ಯುದ್ಧ ವಿಮಾನಗಳ ಸೆಣೆಸಾಟ; ಹೇಗಿದೆ ನೋಡಿ ಟ್ರೇಲರ್​..
ಹೃತಿಕ್​ ರೋಷನ್​, ದೀಪಿಕಾ ಪಡುಕೋಣೆ
Follow us
ಮದನ್​ ಕುಮಾರ್​
|

Updated on: Jan 15, 2024 | 1:16 PM

ಈ ವರ್ಷ ಗಣರಾಜ್ಯೋತ್ಸವದ ಪ್ರಯುಕ್ತ ಜನವರಿ 25ರಂದು ‘ಫೈಟರ್​’ ಸಿನಿಮಾ (Fighter Movie) ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಹೃತಿಕ್​ ರೋಷನ್​, ದೀಪಿಕಾ ಪಡುಕೋಣೆ, ಅನಿಲ್​ ಕಪೂರ್​ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಇಂದು (ಜನವರಿ 15) ಈ ಚಿತ್ರದ ಟ್ರೇಲರ್ (Fighter Trailer) ರಿಲೀಸ್​ ಆಗಿದೆ. ಭಯೋತ್ಪಾದನೆ ವಿರುದ್ಧ ಯುದ್ಧ ಸಾರುವ ಭಾರತೀಯ ವಾಯುಸೇನೆಯ ವೀರರ ಕಥೆ ಈ ಸಿನಿಮಾದಲ್ಲಿ ಇರಲಿದೆ. ಯುದ್ಧ ವಿಮಾನಗಳ ಪೈಲೆಟ್​ ಆಗಿ ದೀಪಿಕಾ ಪಡುಕೋಣೆ, ಹೃತಿಕ್ ರೋಷನ್ (Hrithik Roshan)​ ನಟಿಸಿದ್ದಾರೆ. ಈ ಸಿನಿಮಾ ನೋಡಲು ಅಭಿಮಾನಿಗಳು ಕಾದಿದ್ದಾರೆ.

‘ಫೈಟರ್​’ ಸಿನಿಮಾಗೆ ಸಿದ್ದಾರ್ಥ್​ ಆನಂದ್​ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇದೆ. ಗಣರಾಜ್ಯೋತ್ಸವದ ಸಂದರ್ಭದಲ್ಲಿ ದೇಶಭಕ್ತಿಯ ಕಹಾನಿ ಇರುವ ಸಿನಿಮಾ ಬಿಡುಗಡೆ ಆದರೆ ಪ್ರೇಕ್ಷಕರ ಪ್ರತಿಕ್ರಿಯೆ ಉತ್ತಮವಾಗಿರುತ್ತದೆ. ‘ಫೈಟರ್​’ ಚಿತ್ರವನ್ನು ಸಿನಿಪ್ರಿಯರು ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಕರಣ್​ ಸಿಂಗ್​ ಗ್ರೋವರ್​, ಅಕ್ಷಯ್​ ಒಬೆರಾಯ್​ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.

2023ರ ಜನವರಿಯಲ್ಲಿ ನಿರ್ದೇಶಕ ಸಿದ್ದಾರ್ಥ್​ ಆನಂದ್​ ಅವರು ‘ಪಠಾಣ್​’ ಸಿನಿಮಾ ಮೂಲಕ ಭಾರಿ ಯಶಸ್ಸು ಕಂಡಿದ್ದರು. ಅದು ಕೂಡ ಆ್ಯಕ್ಷನ್​ ಸಿನಿಮಾ ಆಗಿತ್ತು. ಈಗ ‘ಫೈಟರ್​’ ಸಿನಿಮಾದಲ್ಲೂ ಮೈನವಿರೇಳಿಸುವಂತಹ ಸಾಹಸ ದೃಶ್ಯಗಳು ಇರಲಿವೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸಾಕ್ಷಿ ಸಿಕ್ಕಿದೆ. ಎಲ್ಲಕ್ಕಿಂತ ಮುಖ್ಯವಾಗಿ ಯುದ್ಧ ವಿಮಾನಗಳ ನಡುವಿನ ಸೆಣೆಸಾಟದ ದೃಶ್ಯಗಳು ಗಮನ ಸೆಳೆಯುತ್ತಿವೆ.

ಇದನ್ನೂ ಓದಿ: ಮಿತಿ ಮೀರಿತೇ ದೀಪಿಕಾ ಪಡುಕೋಣೆ ಗ್ಲಾಮರ್​? ‘ಫೈಟರ್​’ ಟೀಸರ್​ನಲ್ಲಿ ಹೃತಿಕ್​ ಜತೆಗಿನ ದೃಶ್ಯ ವೈರಲ್​

‘ಫೈಟರ್​’ ಸಿನಿಮಾ ಐಮ್ಯಾಕ್ಸ್​ 3ಡಿ ವರ್ಷನ್​ನಲ್ಲೂ ಬಿಡುಗಡೆ ಆಗಲಿದೆ. ಆ ಮೂಲಕ ಪ್ರೇಕ್ಷಕರಿಗೆ ಮಸ್ತ್​ ಮನರಂಜನೆಯ ಅನುಭವ ಸಿಗಲಿದೆ. ಹೃತಿಕ್​ ರೋಷನ್​ ಅವರನ್ನು ಆ್ಯಕ್ಷನ್​ ದೃಶ್ಯಗಳಲ್ಲಿ ನೋಡಲು ಅಭಿಮಾನಿಗಳು ಇಷ್ಟಪಡುತ್ತಾರೆ. ಅಂಥ ಫ್ಯಾನ್ಸ್​ಗೆ ‘ಫೈಟರ್​’ ಸಿನಿಮಾ ನಿರಾಸೆ ಮಾಡುವುದಿಲ್ಲ ಎಂಬ ಭರವಸೆ ಮೂಡಿದೆ. ಟ್ರೇಲರ್​ ನೋಡಿದ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದು ಈ ವರ್ಷದ ಬ್ಲಾಕ್​ ಬಸ್ಟರ್​ ಸಿನಿಮಾ ಆಗಲಿದೆ ಎಂದು ಸಿನಿಪ್ರಿಯರು ಭವಿಷ್ಯ ನುಡಿಯುತ್ತಿದ್ದಾರೆ. ದೊಡ್ಡ ಬಜೆಟ್​ನಲ್ಲಿ ‘ಫೈಟರ್​’ ಸಿನಿಮಾ ನಿರ್ಮಾಣ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ