AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಭಿಮಾನಿಗಳಿಗೆ ನೀಡಿದ ಪ್ರಾಮಿಸ್ ಉಳಿಸಿಕೊಳ್ಳಲು ಹಗಲಿರುಳು ಶ್ರಮಿಸುತ್ತಿದ್ದಾರೆ ಪ್ರಭಾಸ್

‘ದಿ ರಾಜಾ ಸಾಬ್’ ಸಿನಿಮಾ ಶೂಟಿಂಗ್ ಕೂಡ ಸಾಗುತ್ತಿದೆ. ಈ ಚಿತ್ರದ ಶೂಟಿಂಗ್ ಬೇಗ ಪೂರ್ಣಗೊಳಿಸಿ ಈ ವರ್ಷವೇ ಚಿತ್ರವನ್ನು ತೆರೆಗೆ ತರಬೇಕು ಎನ್ನುವ ಆಲೋಚನೆ ಪ್ರಭಾಸ್​ ಅವರಿಗಿದೆ.

ಅಭಿಮಾನಿಗಳಿಗೆ ನೀಡಿದ ಪ್ರಾಮಿಸ್ ಉಳಿಸಿಕೊಳ್ಳಲು ಹಗಲಿರುಳು ಶ್ರಮಿಸುತ್ತಿದ್ದಾರೆ ಪ್ರಭಾಸ್
ಪ್ರಭಾಸ್
ರಾಜೇಶ್ ದುಗ್ಗುಮನೆ
|

Updated on: Jan 18, 2024 | 6:53 AM

Share

ನಟ ಪ್ರಭಾಸ್ (Prabhas) ಅವರು ‘ಬಾಹುಬಲಿ’ ಸಿನಿಮಾ ಬಳಿಕ ಸಿನಿಮಾ ಮಾಡೋ ವಿಚಾರದಲ್ಲಿ ಸ್ವಲ್ಪ ಸ್ಲೋ ಆದರು. ಈ ಕಾರಣಕ್ಕೆ ‘ಆದಿಪುರುಷ್’ ಸಿನಿಮಾ ಟ್ರೇಲರ್ ಲಾಂಚ್ ಸಂದರ್ಭದಲ್ಲಿ ಅವರು ಅಭಿಮಾನಿಗಳಿಗೆ ಒಂದು ಪ್ರಾಮಿಸ್ ಮಾಡಿದ್ದರು. ಪ್ರತಿ ವರ್ಷ ಎರಡರಿಂದ ಮೂರು ಸಿನಿಮಾ ರಿಲೀಸ್ ಮಾಡೋ ಭರವಸೆ ನೀಡಿದ್ದರು. ಕಳೆದ ವರ್ಷ ಅವರ ನಟನೆಯ ‘ಆದಿಪುರುಷ್’ ಹಾಗೂ ‘ಸಲಾರ್’ ಸಿನಿಮಾಗಳು ರಿಲೀಸ್ ಆದವು. ಈ ಪೈಕಿ ಒಂದು ಫ್ಲಾಪ್ ಹಾಗೂ ಒಂದು ಹಿಟ್. ಈ ವರ್ಷ ಹಾಗೂ ಮುಂದಿನ ವರ್ಷ ಎರಡು ಸಿನಿಮಾ ರಿಲೀಸ್ ಮಾಡುವ ಗುರಿಯನ್ನು ಪ್ರಭಾಸ್ ಹೊಂದಿದ್ದಾರೆ.

ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಚಿತ್ರ ಈ ವರ್ಷ ಮೇ 9ರಂದು ರಿಲೀಸ್ ಆಗಲಿದೆ. ಇತ್ತೀಚೆಗೆ ಚಿತ್ರತಂಡ ಈ ಬಗ್ಗೆ ಮಾಹಿತಿ ನೀಡಿತ್ತು. ದೇಶದ ಪ್ರಮುಖ ನಗರಗಳಲ್ಲಿ ರೈಡರ್ಸ್​ಗಳು ಕಾಣಿಸಿಕೊಂಡು ‘ಕಲ್ಕಿ 2898 ಎಡಿ’ ಚಿತ್ರದ ರಿಲೀಸ್ ದಿನಾಂಕ ರಿವೀಲ್ ಮಾಡಿದರು. ಈ ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಳ್ಳುವ ಹಂತದಲ್ಲಿವೆ.

ಇದಲ್ಲದೆ, ‘ದಿ ರಾಜಾ ಸಾಬ್’ ಸಿನಿಮಾ ಶೂಟಿಂಗ್ ಕೂಡ ಪ್ರಗತಿಯಲ್ಲಿದೆ. ಈ ಚಿತ್ರದ ಶೂಟಿಂಗ್ ಬೇಗ ಪೂರ್ಣಗೊಳಿಸಿ ಈ ವರ್ಷವೇ ಚಿತ್ರವನ್ನು ತೆರೆಗೆ ತರಬೇಕು ಎನ್ನುವ ಆಲೋಚನೆ ಪ್ರಭಾಸ್​ ಅವರಲ್ಲಿದೆ. ನಿರ್ದೇಶಕರು ಹಾಗೂ ನಿರ್ಮಾಪಕರ ಬಳಿ ಈ ವಿಚಾರವನ್ನು ಅವರು ಪ್ರಸ್ತಾಪ ಮಾಡಿದ್ದಾರೆ. ಅದಕ್ಕೆ ತಕ್ಕಂತೆ ಸಿನಿಮಾ ಕೆಲಸಗಳನ್ನು ಮಾಡಲಾಗುತ್ತಿದೆ.

ಇದನ್ನೂ ಓದಿ: ‘ಸಲಾರ್’ ಒಟಿಟಿ ರಿಲೀಸ್ ದಿನಾಂಕ ಫೈನಲ್? ಪ್ರಭಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್..

ಮುಂದಿನ ವರ್ಷಕ್ಕೂ ಪ್ರಭಾಸ್ ಈಗಲೇ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಹನು ರಾಘವಪುಡಿ ಜೊತೆ ಪ್ರಭಾಸ್ ಸಿನಿಮಾ ಮಾಡುತ್ತಿದ್ದಾರೆ. ಇದು ವಾರ್ ಡ್ರಾಮಾ ಆಗಿರಲಿದೆ. ನಂತರ ಸಂದೀಪ್ ರೆಡ್ಡಿ ನಿರ್ದೇಶನದ ‘ಸ್ಪಿರಿಟ್’ ಚಿತ್ರದಲ್ಲೂ ಪ್ರಭಾಸ್ ನಟಿಸುತ್ತಿದ್ದಾರೆ. ಇದೆರಡೂ ಸಿನಿಮಾಗಳು ಮುಂದಿನ ವರ್ಷ ರಿಲೀಸ್ ಆಗಲಿವೆ. ಇದರ ಜೊತೆ ‘ಸಲಾರ್ 2’ ಸಿನಿಮಾ ಕೆಲಸಗಳು ಆರಂಭ ಆಗಲಿವೆ. ಹೀಗಾಗಿ ಪ್ರಭಾಸ್ ಅವರು ತಮ್ಮ ಪ್ರಾಮಿಸ್ ಉಳಿಸಿಕೊಳ್ಳಲು ಹಗಲಿರುಳು ಶ್ರಮಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ