AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಲಾರ್ 2’ ಸಿನಿಮಾದಲ್ಲಿ ಅಖಿಲ್​ ಅಕ್ಕಿನೇನಿ? ಅನುಮಾನ ಮೂಡಿಸಿದ ವಿಡಿಯೋ

ಪ್ರಶಾಂತ್​ ನೀಲ್​ ನಿರ್ದೇಶನ ಮಾಡಿದ ‘ಸಲಾರ್​’ ಸಿನಿಮಾಗೆ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ. ಹಾಗಿದ್ದರೂ ಕೂಡ ಬಾಕ್ಸ್​ ಆಫೀಸ್​ನಲ್ಲಿ ಈ ಚಿತ್ರ ದೊಡ್ಡ ಮಟ್ಟದ ಕಲೆಕ್ಷನ್​ ಮಾಡಿದೆ. ಆ ಖುಷಿಯನ್ನು ಸಂಭ್ರಮಿಸಲು ಚಿತ್ರತಂಡದವರು ಸಕ್ಸಸ್​ ಪಾರ್ಟಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಈ ಪಾರ್ಟಿಗೆ ಅಖಿಲ್​ ಅಕ್ಕಿನೇನಿ ಕೂಡ ಹಾಜರಿ ಹಾಕಿದ್ದಾರೆ.

‘ಸಲಾರ್ 2’ ಸಿನಿಮಾದಲ್ಲಿ ಅಖಿಲ್​ ಅಕ್ಕಿನೇನಿ? ಅನುಮಾನ ಮೂಡಿಸಿದ ವಿಡಿಯೋ
ಅಖಿಲ್​ ಅಕ್ಕಿನೇನಿ
ಮದನ್​ ಕುಮಾರ್​
|

Updated on: Jan 17, 2024 | 7:00 PM

Share

ನಟ ಅಖಿಲ್​ ಅಕ್ಕಿನೇನಿ (Akhil Akkineni) ಅವರಿಗೆ ಈವರೆಗೂ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ. ಅವರು ನಟಿಸಿದ ‘ಏಜೆಂಟ್​’ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ ಆ ಸಿನಿಮಾ ಗೆಲ್ಲಲಿಲ್ಲ. ಸ್ಟಾರ್​ ಕುಟುಂಬದ ಕುಡಿ ಆಗಿದ್ದರೂ ಕೂಡ ಅಖಿಲ್​ ಅವರು ಪ್ರೇಕ್ಷಕರ ಮನ ಗೆಲ್ಲಲು ಕಷ್ಟಪಡುತ್ತಿದ್ದಾರೆ. ಈ ನಡುವೆ ಅವರ ಬಗ್ಗೆ ಹೊಸ ಗಾಸಿಪ್​ ಕೇಳಿಬರಲು ಆರಂಭಿಸಿದೆ. ‘ಸಲಾರ್​ 2’ (Salaar 2) ಸಿನಿಮಾದಲ್ಲಿ ಅಖಿಲ್​ ನಟಿಸುತ್ತಾರಾ ಎಂಬ ಪ್ರಶ್ನೆ ಮೂಡಿದೆ. ಅದಕ್ಕೆಲ್ಲ ಕಾರಣ ಆಗಿರುವುದು ಒಂದು ವಿಡಿಯೋ. ಯಾವುದು ಆ ವಿಡಿಯೋ? ಇಲ್ಲಿದೆ ಉತ್ತರ..

ಪ್ರಶಾಂತ್​ ನೀಲ್​ ನಿರ್ದೇಶನ ಮಾಡಿದ ‘ಸಲಾರ್​’ ಸಿನಿಮಾಗೆ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ. ಹಾಗಿದ್ದರೂ ಕೂಡ ಬಾಕ್ಸ್​ ಆಫೀಸ್​ನಲ್ಲಿ ಈ ಚಿತ್ರ ದೊಡ್ಡ ಮಟ್ಟದ ಕಲೆಕ್ಷನ್​ ಮಾಡಿದೆ. ಆ ಖುಷಿಯನ್ನು ಸಂಭ್ರಮಿಸಲು ಚಿತ್ರತಂಡದವರು ಸಕ್ಸಸ್​ ಪಾರ್ಟಿ ಮಾಡಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಈ ಪಾರ್ಟಿಯಲ್ಲಿ ಅಖಿಲ್​ ಅಕ್ಕಿನೇನಿ ಕೂಡ ಕಾಣಿಸಿಕೊಂಡಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

‘ಸಲಾರ್​’ ನಟಿ ಶ್ರುತಿ ಹಾಸನ್​ ಗುಟ್ಟಾಗಿ ಮದುವೆ ಆಗಿದ್ದಾರಾ? ಸ್ಪಷ್ಟನೆ ನೀಡಿದ ಕಮಲ್​ ಪುತ್ರಿ

ಬೆಂಗಳೂರಿನ ಸ್ಟಾರ್​ ಹೋಟೆಲ್​ನಲ್ಲಿ ನಡೆದ ಪಾರ್ಟಿಯಲ್ಲಿ ಹೀರೋ ಪ್ರಭಾಸ್​, ನಿರ್ಮಾಪಕ ವಿಜಯ್​ ಕಿರಗಂದೂರು, ನಾಯಕಿ ಶ್ರುತಿ ಹಾಸನ್​, ನಿರ್ದೇಶಕ ಪ್ರಶಾಂತ್​ ನೀಲ್​, ನಟ ಜಗಪತಿ ಬಾಬು, ಸಂಗೀತ ನಿರ್ದೇಶಕ ರವಿ ಬಸ್ರೂರು, ನಟ ನವೀನ್​ ಶಂಕರ್​ ಮುಂತಾದವರು ಭಾಗಿ ಆಗಿದ್ದಾರೆ. ಈ ಸಂದರ್ಭದ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ‘ಹೊಂಬಾಳೆ ಫಿಲ್ಮ್ಸ್​’ ಹಂಚಿಕೊಂಡಿದೆ. ಇದೇ ವಿಡಿಯೋದಲ್ಲಿ ಅಖಿಲ್​ ಅಕ್ಕಿನೇನಿ ಕೂಡ ಕಾಣಿಸಿಕೊಂಡಿದ್ದಾರೆ.

‘ಸಲಾರ್​’ ಸಿನಿಮಾಗೂ ಅಖಿಲ್​ ಅಕ್ಕಿನೇನಿ ಅವರಿಗೂ ಯಾವುದೇ ಸಂಬಂಧ ಇಲ್ಲ. ಹಾಗಿದ್ದರೂ ಕೂಡ ಅವರು ಸಕ್ಸಸ್​ ಪಾರ್ಟಿಯಲ್ಲಿ ಭಾಗಿ ಆಗಿರುವುದು ಸಿನಿಪ್ರಿಯರ ಕೌತುಕ ಕೆರಳಿಸಿದೆ. ‘ಸಲಾರ್ 2’ ಸಿನಿಮಾದಲ್ಲಿ ಅವರು ನಟಿಸಬಹುದು ಎಂಬ ಗಾಸಿಪ್​ ಹರಿದಾಡುತ್ತಿದೆ. ಒಂದು ವೇಳೆ ಅವರಿಗೆ ಚಾನ್ಸ್​ ಸಿಕ್ಕಿದ್ದೇ ಹೌದಾದರೆ ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವು ಸಿಕ್ಕಂತೆ ಆಗಲಿದೆ. ಚಿತ್ರತಂಡದಿಂದಲೇ ಅಧಿಕೃತ ಮಾಹಿತಿ ಹೊರಬೀಳಲಿ ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ಸ್ಕ್ಯಾಮ್ ಹಣದಲ್ಲಿ ಪ್ರಿಯತಮೆಗೆ ಚಿನ್ನ ಗಿಫ್ಟ್ ನೀಡಿದ್ದ ಜ್ಞಾನೇಂದ್ರ
ಸ್ಕ್ಯಾಮ್ ಹಣದಲ್ಲಿ ಪ್ರಿಯತಮೆಗೆ ಚಿನ್ನ ಗಿಫ್ಟ್ ನೀಡಿದ್ದ ಜ್ಞಾನೇಂದ್ರ
ಭಿಕ್ಷಾಟನೆ ಮುಕ್ತ ಕರ್ನಾಟಕಕ್ಕೆ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ
ಭಿಕ್ಷಾಟನೆ ಮುಕ್ತ ಕರ್ನಾಟಕಕ್ಕೆ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ
ಧಾರವಾಡ: ಎಪಿಎಂಸಿಯಲ್ಲಿ ಅಕ್ರಮ ಮರದ ದಿಮ್ಮಿಗಳ ಸಂಗ್ರಹ
ಧಾರವಾಡ: ಎಪಿಎಂಸಿಯಲ್ಲಿ ಅಕ್ರಮ ಮರದ ದಿಮ್ಮಿಗಳ ಸಂಗ್ರಹ
ಗಣೇಶ ಪ್ರತಿಷ್ಠಾಪನೆಯಿಂದ ವಿಸರ್ಜನೆ ವರೆಗೆ ಖಡಕ್ ರೂಲ್ಸ್
ಗಣೇಶ ಪ್ರತಿಷ್ಠಾಪನೆಯಿಂದ ವಿಸರ್ಜನೆ ವರೆಗೆ ಖಡಕ್ ರೂಲ್ಸ್
ಕೆಂಪೇಗೌಡ ಏರ್‌ಪೋರ್ಟ್ ಟೋಲ್‌ನಲ್ಲಿ ಆ್ಯಂಬುಲೆನ್ಸ್ ಸುಗಮ ಸಂಚಾರಕ್ಕೆ ಸಮಸ್ಯೆ
ಕೆಂಪೇಗೌಡ ಏರ್‌ಪೋರ್ಟ್ ಟೋಲ್‌ನಲ್ಲಿ ಆ್ಯಂಬುಲೆನ್ಸ್ ಸುಗಮ ಸಂಚಾರಕ್ಕೆ ಸಮಸ್ಯೆ
ಇನ್ಸ್​ಸ್ಟಾ ಚೆಲುವೆಯ ಸಾವಿನ ಸುತ್ತ-ಅನುಮಾನದ ಹುತ್ತ!
ಇನ್ಸ್​ಸ್ಟಾ ಚೆಲುವೆಯ ಸಾವಿನ ಸುತ್ತ-ಅನುಮಾನದ ಹುತ್ತ!
ಬಿಜೆಪಿ ನಾಯಕರಿಗೆ ಓಪನ್​​ ಚಾಲೆಂಜ್​​ ಹಾಕಿದ ಗೃಹ ಸಚಿವ ಪ್ರಿಯಾಂಕ್​​ ಖರ್ಗೆ
ಬಿಜೆಪಿ ನಾಯಕರಿಗೆ ಓಪನ್​​ ಚಾಲೆಂಜ್​​ ಹಾಕಿದ ಗೃಹ ಸಚಿವ ಪ್ರಿಯಾಂಕ್​​ ಖರ್ಗೆ
ಕೋಲಾರಮ್ಮನಿಗೆ 10,108 ತಾವರೆ ಹೂವಿನ ಅಲಂಕಾರ
ಕೋಲಾರಮ್ಮನಿಗೆ 10,108 ತಾವರೆ ಹೂವಿನ ಅಲಂಕಾರ
ಪರಪ್ಪನ ಅಗ್ರಹಾರ ಜೈಲಲ್ಲೇ ಮಾರಾಟವಾಗುತ್ತಿತ್ತು ಫೋನ್! 1 ಲಕ್ಷ ರೂ.ಗೆ ಸೇಲ್
ಪರಪ್ಪನ ಅಗ್ರಹಾರ ಜೈಲಲ್ಲೇ ಮಾರಾಟವಾಗುತ್ತಿತ್ತು ಫೋನ್! 1 ಲಕ್ಷ ರೂ.ಗೆ ಸೇಲ್
ಕೆಪಿಎಸ್​ಸಿಯಲ್ಲಿ ಮತ್ತೊಂದು ಅಕ್ರಮ: ಅವ್ಯವಹಾರ ಗೊತ್ತಾದ್ಮೇಲೂ ಪೋಸ್ಟಿಂಗ್!
ಕೆಪಿಎಸ್​ಸಿಯಲ್ಲಿ ಮತ್ತೊಂದು ಅಕ್ರಮ: ಅವ್ಯವಹಾರ ಗೊತ್ತಾದ್ಮೇಲೂ ಪೋಸ್ಟಿಂಗ್!