‘ಕಾರ್ತಿಕ್ಗೆ ಹೊರಗೆ ಹುಡುಗಿ ಇದ್ದಾಳೆ’; ಸೀಕ್ರೆಟ್ ರಿವೀಲ್ ಮಾಡಿದ ನಮ್ರತಾ
ಕಾರ್ತಿಕ್ ಜೊತೆ ಮಾಡಿರೋದೆಲ್ಲ ಟೈಮ್ಪಾಸ್ಗೆ ಎಂದು ನೇರವಾಗಿ ಹೇಳಿಕೊಂಡಿದ್ದಾರೆ. ಇದರ ಜೊತೆಗೆ ಕಾರ್ತಿಕ್ ಅವರಿಗೆ ಹೊರಗೆ ಹುಡುಗಿ ಇದ್ದಾಳೆ ಎಂದು ನಮ್ರತಾ ರಿವೀಲ್ ಮಾಡಿದ್ದಾರೆ. ಇದು ಅನೇಕರಿಗೆ ಅಚ್ಚರಿ ತಂದಿದೆ.
ನಮ್ರತಾ ಗೌಡ (Namratha Gowda) ಬಿಗ್ ಬಾಸ್ ಮನೆಯಲ್ಲಿ ಸಖತ್ ಡೌನ್ ಆಗಿದ್ದಾರೆ. ಕಾರ್ತಿಕ್ ಜೊತೆ ಅವರು ಫ್ಲರ್ಟ್ ಮಾಡಿದ್ದು ಹೊರಗೆ ಕೆಟ್ಟದಾಗಿ ಕಾಣುತ್ತಿದೆ ಎಂದು ಅನೇಕರು ಹೇಳಿದ್ದರು. ಇದನ್ನು ಅರಗಿಸಿಕೊಳ್ಳೋಕೆ ಅವರಿಗೆ ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ಅವರು ಕಣ್ಣೀರು ಹಾಕುತ್ತಿದ್ದಾರೆ. ಕಾರ್ತಿಕ್ ಜೊತೆ ಮಾಡಿರೋದೆಲ್ಲ ಟೈಮ್ಪಾಸ್ಗೆ ಎಂದು ನೇರವಾಗಿ ಹೇಳಿದ್ದಾರೆ. ಇದರ ಜೊತೆಗೆ ಕಾರ್ತಿಕ್ ಅವರಿಗೆ ಹೊರಗೆ ಹುಡುಗಿ ಇದ್ದಾಳೆ ಎಂದು ನಮ್ರತಾ ನೇರವಾಗಿ ಹೇಳಿದ್ದಾರೆ. ಇದನ್ನು ಕೇಳಿ ಅನೇಕರಿಗೆ ಶಾಕ್ ಆಗಿದೆ.
ಬಿಗ್ ಬಾಸ್ ಮನೆಯಿಂದ ಸ್ನೇಹಿತ್ ಔಟ್ ಆದ ಬಳಿಕ ಕಾರ್ತಿಕ್ ಹಾಗೂ ನಮ್ರತಾ ಗೌಡ ಕ್ಲೋಸ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇತ್ತೀಚೆಗೆ ನಡೆದ ರೀಯೂನಿಯನ್ ಸಂದರ್ಭದಲ್ಲಿ ಸ್ನೇಹಿತ್ ದೊಡ್ಮನೆಗೆ ಮರಳಿದ್ದಾರೆ. ಈ ವೇಳೆ ಅವರು ಪರೋಕ್ಷವಾಗಿ ನಮ್ರತಾಗೆ ಕಿವಿಮಾತು ಹೇಳಿದ್ದಾರೆ. ‘ನೀವು ಮಾಡೋದೆಲ್ಲ ಹೊರಗೆ ಕೆಟ್ಟದಾಗಿ ಕಾಣುತ್ತಿದೆ. ನಿಮ್ಮ ಪರವಾಗಿ ನಾನು ಫೈಟ್ ಮಾಡುತ್ತಾ ಇದ್ದೀನಿ’ ಎಂದಿದ್ದಾರೆ ಸ್ನೇಹಿತ್.
ಇದನ್ನು ಕೇಳಿ ನಮ್ರತಾ ಸಾಕಷ್ಟು ಬೇಸರ ಮಾಡಿಕೊಂಡರು. ಹೊರ ಜಗತ್ತಿನಲ್ಲಿ ಯಾವ ರೀತಿಯಲ್ಲಿ ತಮ್ಮ ಬಗ್ಗೆ ಮಾತುಗಳು ಹುಟ್ಟಿಕೊಂಡಿರಬಹುದು ಎಂಬುದನ್ನು ಕಲ್ಪಿಸಿಕೊಂಡು ಅವರು ಮತ್ತಷ್ಟು ಶಾಕ್ಗೆ ಒಳಗಾದರು. ಈ ಕಾರಣಕ್ಕೆ ನಮ್ರತಾ ಕಣ್ಣೀರು ಹಾಕಿದರು. ಬಂದ ಅತಿಥಿಗಳೆಲ್ಲ ಹೊರ ಹೋಗಲಿ ಎಂದು ಅಳುತ್ತಲೇ ಹೇಳಿದರು. ನಮ್ರತಾ ಅವರು ಈ ವೇಳೆ ಒಂದು ವಿಚಾರ ರಿವೀಲ್ ಮಾಡಿದ್ದಾರೆ.
ಇದನ್ನೂ ಓದಿ: ಕಾರ್ತಿಕ್ ಮಹೇಶ್-ಸಂಗೀತಾ ಶೃಂಗೇರಿ ಒಟ್ಟಾಗಿ ತನಿಷಾ ಕುಪ್ಪಂಡ ವಿರುದ್ಧ ತಿರುಗಿ ಬಿದ್ದಿದ್ದು ಯಾಕೆ?
‘ಕಾರ್ತಿಕ್ ಜೊತೆ ಇರೋದು ಫ್ರೆಂಡ್ಶಿಪ್ ಮಾತ್ರ. ಆತನ ಬಗ್ಗೆ ಯಾವುದೇ ಫೀಲಿಂಗ್ಸ್ ಇಲ್ಲ. ಅವನಿಗೆ ಹೊರಗೆ ಹುಡುಗಿ ಇದ್ದಾಳೆ. ಇದು ಗೊತ್ತಿದ್ದೂ ಬೀಳೋಕೆ ನಾನು ಮೂರ್ಖನಲ್ಲ. ಅದೇಕೆ ಹಾಗೆ ಅಂದುಕೊಂಡರೋ ಗೊತ್ತಿಲ್ಲ’ ಎಂದು ನಮ್ರತಾ ನೇರವಾಗಿ ಹೇಳಿಕೊಂಡಿದ್ದಾರೆ. ಸ್ನೇಹಿತ್ ಮಾತ್ರ ಅಲ್ಲದೆ ಮೈಕಲ್ ಕೂಡ ನಮ್ರತಾಗೆ ಈ ವಿಚಾರದಲ್ಲಿ ಬುದ್ಧಿವಾದ ಹೇಳಿದ್ದಾರೆ. ಇದರಿಂದ ಅವರು ಮತ್ತಷ್ಟು ಟೆನ್ಷನ್ ಆದರು. ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಎಪಿಸೋಡ್ ಹಾಗೂ ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡೋ ಅವಕಾಶ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ