ವಿರೋಧದ ಬಳಿಕ ಸುದೀಪ್ ಹಾಗೂ ಅವರ ಅಭಿಮಾನಿಗಳ ಬಳಿ ಕ್ಷಮೆ ಕೇಳಿದ ರಕ್ಷಕ್
ಪ್ರತಿ ವೀಕೆಂಡ್ ಎಪಿಸೋಡ್ನಲ್ಲಿ ಸುದೀಪ್ ಅವರು ಬಂದ ತಕ್ಷಣ ಎಲ್ಲಾ ಸ್ಪರ್ಧಿಗಳು ಎದ್ದು ನಿಂತು ವೆಲ್ಕಮ್ ಮಾಡುವ ಪದ್ಧತಿ ಇದೆ. ಇದನ್ನು ರಕ್ಷಕ್ ಟೀಕಿಸಿದ್ದರು. ‘ಸುದೀಪ್ ಅವರನ್ನು ಎಲ್ಲರೂ ದೇವರ ರೀತಿ ನೋಡುತ್ತಾರೆ’ ಎಂಬರ್ಥದಲ್ಲಿ ರಕ್ಷಕ್ ಮಾತನಾಡಿದ್ದರು.

ರಕ್ಷಕ್ ಅವರು ಬಿಗ್ ಬಾಸ್ನಿಂದ (Bigg Boss) ಹೊರಗೆ ಬಂದ ಬಳಿಕ ಸಾಕಷ್ಟು ಕಡೆಗಳಿಗೆ ಸಂದರ್ಶನ ನೀಡಿದ್ದರು. ಈ ವೇಳೆ ಅವರು ನಾನಾ ರೀತಿಯ ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ ಅವರು ನೀಡಿದ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಸುದೀಪ್ ಬಗ್ಗೆ ಅವರು ನಾಲಿಗೆ ಹರಿಬಿಟ್ಟಿದ್ದರು. ಇದನ್ನು ಅನೇಕರು ವಿರೋಧಿಸಿದ್ದರು. ರಕ್ಷಕ್ ಕ್ಷಮೆ ಕೇಳಬೇಕು ಎಂದು ಸುದೀಪ್ ಅಭಿಮಾನಿಗಳು ಪಟ್ಟು ಹಿಡಿದಿದ್ದರು. ಕೊನೆಗೂ ರಕ್ಷಕ್ ಅವರು ಕ್ಷಮೆ ಕೇಳಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ.
ಇತ್ತೀಚೆಗೆ ಖಾಸಗಿ ವಾಹಿನಿಯೊಂದಕ್ಕೆ ರಕ್ಷಕ್ ಸಂದರ್ಶನ ನೀಡಿದ್ದರು. ಈ ವೇಳೆ ಅವರು ಸುದೀಪ್ ಬಗ್ಗೆ ಒಂದು ಹೇಳಿಕೆ ನೀಡಿದ್ದರು. ಪ್ರತಿ ವೀಕೆಂಡ್ ಎಪಿಸೋಡ್ನಲ್ಲಿ ಸುದೀಪ್ ಅವರು ಬಂದ ತಕ್ಷಣ ಎಲ್ಲಾ ಸ್ಪರ್ಧಿಗಳು ಎದ್ದು ನಿಂತು ವೆಲ್ಕಮ್ ಮಾಡುತ್ತಾರೆ. ಇದನ್ನು ರಕ್ಷಕ್ ಖಂಡಿಸಿದ್ದರು. ‘ಸುದೀಪ್ ಅವರನ್ನು ಎಲ್ಲರೂ ದೇವರ ರೀತಿ ನೋಡುತ್ತಾರೆ’ ಎಂಬರ್ಥದಲ್ಲಿ ಮಾತನಾಡಿದ್ದರು. ಇದಕ್ಕೆ ಸಾಕಷ್ಟು ಟೀಕೆ ವ್ಯಕ್ತವಾಯಿತು.
‘ರಕ್ಷಕ್ ಅವರ ವಯಸ್ಸೇನು? ಸುದೀಪ್ ಅವರ ವಯಸ್ಸೇನು? ರಕ್ಷಕ್ಗೆ ಈ ರೀತಿ ಮಾತನಾಡೋಕೆ ಹಕ್ಕು ಕೊಟ್ಟವರು ಯಾರು? ನಾಲಿಗೆ ಇದೆ ಎಂದು ಬಾಯಿಗೆ ಬಂದಂತೆ ಮಾತನಾಡೋದು ಸರಿ ಅಲ್ಲ. ಅವರು ಬಹಿರಂಗ ಕ್ಷಮೆ ಕೇಳಬೇಕು’ ಎಂದು ಸುದೀಪ್ ಅಭಿಮಾನಿಗಳು ಆಗ್ರಹಿಸಿದ್ದರು. ಈ ಕಾರಣಕ್ಕೆ ರಕ್ಷಕ್ ಅವರು ಕ್ಷಮೆ ಕೇಳಿದ್ದಾರೆ. ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಅವರು ಹೇಳಿದ್ದಾರೆ.
‘ಸುದೀಪಣ್ಣನ ಬಗ್ಗೆ ನೆಗೆಟಿವ್ ಆಗಿ ಮಾತಾಡಿದೆ ಎನ್ನುವ ವಿಡಿಯೋ ವೈರಲ್ ಆಗುತ್ತಿದೆ. ಸಂದರ್ಶನವನ್ನು ಸಂಪೂರ್ಣವಾಗಿ ನೋಡಿದಾಗ ಆ ಮಾತು ಏಕೆ ಹೇಳಿದೆ ಎಂಬುದು ಗೊತ್ತಾಗುತ್ತಿತ್ತು. ಯಾರಿಗಾದರೂ ಬೇಸರವಾಗಿದ್ದರೆ ಕ್ಷಮೆ ಇರಲಿ. ಸುದೀಪ್ ಹಾಗೂ ಸುದೀಪ್ ಅಭಿಮಾನಿಗಳಿಗೆ ಕ್ಷಮೆ ಕೇಳುತ್ತೇನೆ. ಸುದೀಪಣ್ಣನಿಗೆ ನಮ್ಮ ತಂದೆ ಮೇಲೆ ಅಪಾರ ಪ್ರೀತಿ ಇತ್ತು. ಅವರ ಮೇಲೆ ನನಗೆ ಅಪಾರ ಗೌರವ ಇದೆ’ ಎಂದು ರಕ್ಷಕ್ ಹೇಳಿದ್ದಾರೆ. ಈ ವಿಡಿಯೋಗೆ ಕಮೆಂಟ್ ಮಾಡೋಕೆ ರಕ್ಷಕ್ ಆಯ್ಕೆ ನೀಡಿಲ್ಲ.
View this post on Instagram
ಇದನ್ನೂ ಓದಿ: ‘ಮಕ್ಕಳ ಥರ ಆಡಬಾರದು’; ಕ್ಯಾತೆ ತೆಗೆದು ಟಾರ್ಚರ್ ಕೊಡೋಕೆ ಬಂದ ರಕ್ಷಕ್ಗೆ ಪ್ರತಾಪ್ ಮಾತಿನ ಚಾಟಿ
ರಕ್ಷಕ್ ಅವರು ‘ಆರ್ ಬಾಸ್’ ಎಂದು ತಮಗೆ ತಾವೇ ಬಿರುದು ಕೊಟ್ಟುಕೊಂಡಿದ್ದಾರೆ. ಅವರು ‘ಗುರು ಶಿಷ್ಯರು’ ಸಿನಿಮಾದಲ್ಲಿ ನಟಿಸಿದ್ದರು. ಒಂದೇ ಸಿನಿಮಾದಲ್ಲಿ ನಟಿಸಿ ಸಾಕಷ್ಟು ಜನಪ್ರಿಯತೆ ಪಡೆದಿದ್ದೇನೆ ಎಂದು ಅವರು ಹೇಳಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಅವರನ್ನು ಅನೇಕರು ಟೀಕೆ ಮಾಡಿದ್ದಿದೆ. ರಕ್ಷಕ್ ಅವರು ಎಲಿಮಿನೇಟ್ ಆದ ಬಳಿಕ ಇದರ ಹಿಂದೆ ಬೇರೆ ಹುನ್ನಾರ ಇದೆ ಎಂದಿದ್ದರು. ಎಲಿಮಿನೇಟ್ ಆದ ಸ್ಪರ್ಧಿಗಳ ರೀಯೂನಿಯನ್ ಇತ್ತೀಚೆಗೆ ಆಯಿತು. ಈ ವೇಳೆ ರಕ್ಷಕ್ ಅವರು ದೊಡ್ಮನೆಗೆ ಆಗಮಿಸಿದ್ದರು. ಆಗ ಅವರು ಪ್ರತಾಪ್ ಜೊತೆ ಕಿರಿಕ್ ಮಾಡಿಕೊಳ್ಳೋಕೆ ಹೋಗಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ



