ಜೀವನದಲ್ಲಿ ಇರೋ ಕೊನೆಯ ಆಸೆಯನ್ನು ಈಡೇರಿಸಿಕೊಂಡ ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ ಅವರು ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ಮೈತ್ರಿ ಮೂವೀ ಮೇಕರ್ಸ್ ನಿರ್ಮಾಣ ಮಾಡುತ್ತಿರುವ ಹೊಸ ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸುವ ಸಾಧ್ಯತೆ ಹೆಚ್ಚಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದಲ್ಲಿ ರಶ್ಮಿಕಾ ಮತ್ತು ಜೂನಿಯರ್ ಎನ್ಟಿಆರ್ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ರಶ್ಮಿಕಾ ಮಂದಣ್ಣ (Rashmika Mnadanna) ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ನಟಿಸಿದ ಬಹುತೇಕ ಎಲ್ಲರೂ ಸ್ಟಾರ್ ಹೀರೋಗಳೇ. ಅವರು ಟಾಲಿವುಡ್ನಲ್ಲಿ ಇಂಥ ಸ್ಟಾರ್ ಹೀರೋ ಜೊತೆ ನಟಿಸಿಲ್ಲ ಎಂದು ಹೇಳೋಕೆ ಸಾಧ್ಯವಿಲ್ಲ. ಅಂದರೆ ಅವರು ಬಹುತೇಕ ಪ್ರಮುಖ ಕಲಾವಿದರ ಜೊತೆ ನಟಿಸಿದ್ದಾರೆ ಎಂದರ್ಥ. ಆದರೆ, ಜೂನಿಯರ್ ಎನ್ಟಿಆರ್ ಜೊತೆ ರಶ್ಮಿಕಾ ಅವರು ಬಣ್ಣ ಹಚ್ಚಿರಲಿಲ್ಲ. ಈಗ ಆ ಆಸೆ ಈಡೇರುವ ಸೂಚನೆ ಸಿಕ್ಕಿದೆ. ಆ ಬಗ್ಗೆ ಇಲ್ಲಿದೆ ವಿವರ.
ರಶ್ಮಿಕಾ ಮಂದಣ್ಣ ಅವರು ಈ ಮೊದಲೇ ‘ಮೈತ್ರಿ ಮೂವೀ ಮೇಕರ್ಸ್’ ಜೊತೆ ಕೆಲಸ ಮಾಡಿದ್ದಾರೆ. ‘ಪುಷ್ಪ’ ಹಾಗೂ ‘ಪುಷ್ಪ 2’ ಚಿತ್ರವನ್ನು ಮೈತ್ರಿ ಅವರೇ ನಿರ್ಮಾಣ ಮಾಡಿದ್ದರು. ಈ ವೇಳೆ ರಶ್ಮಿಕಾ ಹಾಗೂ ಈ ಸಂಸ್ಥೆ ನಡುವೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಈಗ ಅದನ್ನು ಮೈತ್ರಿ ಮೂವೀ ಮೇಕರ್ಸ್ ಅವರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಮೈತ್ರಿ ನಿರ್ಮಾಣ ಮಾಡುತ್ತಿರುವ ಈ ಚಿತ್ರದಲ್ಲಿ ಹೀರೋ ಯಾರು ಎಂಬುದು ಸದ್ಯದ ಪ್ರಶ್ನೆ. ಕೆಲವು ವರದಿಗಳ ಪ್ರಕಾರ ಈ ಚಿತ್ರಕ್ಕೆ ಜೂನಿಯರ್ ಎನ್ಟಿಆರ್ ನಾಯಕ ಎಂದು ಹೇಳಲಾಗುತ್ತಿದೆ. ಮೈತ್ರಿಗೆ ನೀಡಿದ್ದ ಒಂದು ಕಾಲ್ಶಿಟ್ ಜೂನಿಯರ್ ಎನ್ಟಿಆರ್ ಬಳಿ ಇದೆ. ಪ್ರಶಾಂತ್ ನೀಲ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಈಗಾಗಲೇ ಸಿನಿಮಾದ ಕೆಲಸ ಶುರುವಾಗಿದೆ ಎನ್ನಲಾಗಿದೆ. ಈ ಚಿತ್ರಕ್ಕೆ ರಶ್ಮಿಕಾ ನಾಯಕಿ ಎಂದು ಹೇಳಲಾಗುತ್ತಿದೆ.
ಜೂನಿಯರ್ ಎನ್ಟಿಆರ್ ಜೊತೆ ರಶ್ಮಿಕಾ ನಟಿಸಿಲ್ಲ. ಹೀಗಾಗಿ, ಇಬ್ಬರೂ ಇದೇ ಮೊದಲ ಬಾರಿಗೆ ಒಂದಾಗುತ್ತಿದ್ದಾರೆ. ಈ ಮೂಲಕ ಇವರ ಜೊತೆ ನಟಿಸಬೇಕು ಎಂಬ ರಶ್ಮಿಕಾ ಕನಸು ಈಡೇರಿದಂತೆ ಆಗಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಅಭಿಮಾನಿಗಳಿಗೆ ಎಚ್ಚರಿಕೆ ಕಿವಿಮಾತು ಹೇಳಿದ ರಶ್ಮಿಕಾ ಮಂದಣ್ಣ
ಇನ್ನು ಮತ್ತೊಂದು ವರದಿಯೂ ಇದೆ. ವಿಜಯ್ ದೇವರಕೊಂಡ ಜೊತೆ ಮೈತ್ರಿ ಸಿನಿಮಾ ಮಾಡಬೇಕಿದೆ. ಈ ಚಿತ್ರಕ್ಕೆ ರಶ್ಮಿಕಾ ನಾಯಕಿ ಆದರೇ ಎಂದು ಪ್ರಶ್ನೆ ಮೂಡಿದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೇಕು. ಅಂದಹಾಗೆ, ರಶ್ಮಿಕಾ ಹಾಗೂ ವಿಜಯ್ ಅವರದ್ದು ಹಿಟ್ ಕಾಂಬಿನೇಷನ್. ಈ ಜೋಡಿ ಮತ್ತೆ ಒಂದಾದರೆ ಅಭಿಮಾನಿಗಳಿಗೆ ಖುಷಿ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







