AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮ್ ಚರಣ್ ನಟನೆಯ ‘ಪೆದ್ದಿ’ ಚಿತ್ರದ ಐಕಾನಿಕ್ ಸ್ಟೈಲ್​ನ ಅನುಕರಿಸಿದ ಅಶುತೋಷ್ ಶರ್ಮಾ

ರಾಮ್ ಚರಣ್ ನಟನೆಯ 'ಪೆದ್ದಿ' ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಚಿತ್ರದ ಟೀಸರ್‌ನಲ್ಲಿ ರಾಮ್ ಚರಣ್ ಮಾಡಿದ ಬ್ಯಾಟ್‌ನ ಸ್ಟೈಲಿಶ್ ಪೋಸ್ ವೈರಲ್ ಆಗಿತ್ತು. ಈಗ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ ಅಶುತೋಷ್ ಶರ್ಮಾ ಈ ಪೋಸ್ ಅನ್ನು ಅನುಕರಿಸಿದ್ದಾರೆ. 'ಪೆದ್ದಿ' ಒಂದು ಕ್ರೀಡಾ ಚಿತ್ರವಾಗಿದ್ದು, ರಾಮ್ ಚರಣ್ ಮುಖ್ಯ ಪಾತ್ರದಲ್ಲಿದ್ದಾರೆ.

ರಾಮ್ ಚರಣ್ ನಟನೆಯ ‘ಪೆದ್ದಿ’ ಚಿತ್ರದ ಐಕಾನಿಕ್ ಸ್ಟೈಲ್​ನ ಅನುಕರಿಸಿದ ಅಶುತೋಷ್ ಶರ್ಮಾ
ರಾಮ್ ಚರಣ್ ನಟನೆಯ ‘ಪೆದ್ದಿ’ ಚಿತ್ರದ ಐಕಾನಿಕ್ ಸ್ಟೈಲ್​ನ ಅನುಕರಿಸಿದ ಅಶುತೋಷ್ ಶರ್ಮಾ
ರಾಜೇಶ್ ದುಗ್ಗುಮನೆ
|

Updated on:May 06, 2025 | 7:33 AM

Share

ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾದ ಶೂಟ್ ಭರದಿಂದ ಸಾಗಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಬುಚಿ ಬಾಬು ಅವರು ನಿರ್ದೇಶನ ಮಾಡುತ್ತಾ ಇದ್ದಾರೆ. ಈ ಚಿತ್ರದ ಟೀಸರ್ ಈ ಮೊದಲು ರಿಲೀಸ್ ಆಗಿತ್ತು. ಇದರಲ್ಲಿ ರಾಮ್ ಚರಣ್ ಅವರು ಬ್ಯಾಟ್ ಬೀಸುವುದಕ್ಕೂ ಮೊದಲು ಒಂದು ಸ್ಟೈಲ್​ನ ಮಾಡುತ್ತಾರೆ. ಈ ಸ್ಟೈಲ್​ನ ಡೆಲ್ಲಿ ಕ್ಯಾಪಿಟಲ್ಸ್​ನ ಬ್ಯಾಟರ್ ಅಶುತೋಷ್ ಶರ್ಮಾ ಅನುಕರಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

‘ಪೆದ್ದಿ’ ಸಿನಿಮಾ ಹಳ್ಳಿಯಲ್ಲಿ ನಡೆಯೋ ಕಥೆ. ಇದೊಂದು ಸ್ಪೋರ್ಟ್ಸ್ ಡ್ರಾಮಾ ಎನ್ನಲಾಗುತ್ತಿದೆ. ಇದರಲ್ಲಿ ರಾಮ್ ಚರಣ್ ಅವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಟೀಸರ್ ಈ ಮೊದಲು ರಿಲೀಸ್ ಆಗಿತ್ತು. ಇದರಲ್ಲಿ ರಾಮ್ ಚರಣ್ ಅವರು ಬ್ಯಾಟ್ ಹಿಡಿದು ಎರಡು ಬಾರಿ ನೆಲಕ್ಕೆ ಕುಟ್ಟಿ ಮುಂದಕ್ಕೆ ನುಗ್ಗುತ್ತಾರೆ, ಮತ್ತು ಸಿಕ್ಸ್ ಹೊಡೆಯುತ್ತಾರೆ. ಇದೇ ಸ್ಟೈಲ್​ನ ಅಶುತೋಷ್ ಶರ್ಮಾ ಮಾಡಿದ್ದಾರೆ.

ಇದನ್ನೂ ಓದಿ
Image
ಮೆಟ್ ಗಾಲಾ ರೆಡ್ ಕಾರ್ಪೆಟ್​ನಲ್ಲಿ ಶಾರುಖ್ ಖಾನ್ ಐಕಾನಿಕ್ ಪೋಸ್
Image
ರಣಬೀರ್-ರಣವೀರ್​ನ ತಂದೆ ತಾಯಿಗೆ ಹೋಲಿಸಿದ್ದ ದೀಪಿಕಾ ಪಡುಕೋಣೆ
Image
ಅಪಘಾತದ ಬಳಿಕ ಬದಲಾಯಿತು ನಾನಿ ಬದುಕು; ಅಂದು ಆಗಿದ್ದೇನು?
Image
ಖ್ಯಾತ ನಿರ್ಮಾಪಕನ ಜೊತೆ ಪೋಸ್ ಕೊಟ್ಟ ಶ್ರೀಲೀಲಾ; ಕೇಳಿಬಂತು ಹೊಸ ಗಾಸಿಪ್

ಮೇ 5ರಂದು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ಮಧ್ಯೆ ಪಂದ್ಯ ನಡೆದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಇತ್ತು. ಆ ಸಂದರ್ಭದಲ್ಲಿ ಫೀಲ್ಡ್​​ಗೆ ಇಳಿದ ಅಶುತೋಷ್ ಶರ್ಮಾ ಅವರು 26 ಬಾಲ್​ಗಳಲ್ಲಿ 41 ರನ್​ ಕಲೆ ಹಾಕಿದರು. ಈ ಮೂಲಕ 20 ಓವರ್​ಗಳಲ್ಲಿ 131 ರನ್ ಕಲೆ ಹಾಕಲು ಸಹಾಯ ಮಾಡಿದರು. ಆದರೆ, ಮಳೆಯ ಕಾರಣದಿಂದ ಹೈದರಾಬಾದ್ ಬ್ಯಾಟ್ ಮಾಡಲು ಸಾಧ್ಯವಾಗಿಲ್ಲ. ಈ ಕಾರಣದಿಂದ ಎರಡೂ ತಂಡಕ್ಕೆ ತಲಾ ಒಂದು ಪಾಯಿಂಟ್ ನೀಡಲಾಗಿದೆ.

ಇದನ್ನೂ ಓದಿ: IPL 2025: ರಿವ್ಯೂ ತೆಗೆದುಕೊಳ್ಳದೇ ಪಂದ್ಯ ಸೋತ ಡೆಲ್ಲಿ ಕ್ಯಾಪಿಟಲ್ಸ್

ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ಅಶುತೋಷ್ ಶರ್ಮಾ ಮಾಡಿರೋ ಐಕಾನಿಕ್ ಪೋಸ್​ನ ಪೋಸ್ಟ್ ಮಾಡಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಹೈದರಾಬಾದ್ ಅಂಗಳದಲ್ಲಿ ಪಂದ್ಯ ನಡೆದಿದ್ದರಿಂದ ಅಲ್ಲಿನ ಫ್ಯಾನ್ಸ್​ನ ಸೆಳೆಯಲು ಈ ತಂತ್ರ ಮಾಡಲಾಗಿದೆ ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:33 am, Tue, 6 May 25

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್