AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಸಿಲಿನ ಝಳಕ್ಕೆ ಬೆಳೆಗಳು ಹಾನಿ: ಬೆಂಗಳೂರಿನಲ್ಲಿ ತರಕಾರಿಗಳ ಬೆಲೆ ಏರಿಕೆ

ಬೆಂಗಳೂರಿನಲ್ಲಿ ತರಕಾರಿ ಬೆಲೆಗಳು ಏರಿಕೆಯಾಗಿವೆ. ಕೆಲವು ಕಡೆ ಮಳೆಯ ಅಭಾವ ಮತ್ತು ಬಿಸಿಲಿನ ತೀವ್ರತೆಯಿಂದ ಬೆಳೆಗಳಿಗೆ ಹಾನಿಯಾಗಿದೆ. ಇದರಿಂದಾಗಿ ಬೀನ್ಸ್, ಬಟಾಣಿ, ನಿಂಬೆ, ಮತ್ತು ಇತರ ತರಕಾರಿಗಳ ದರಗಳು ಗಗನಕ್ಕೇರಿವೆ. ಮಳೆಯಿಂದಾಗಿ ಹಸಿಮೆಣಸು, ಹಾಗಲಕಾಯಿ ಮುಂತಾದ ತರಕಾರಿಗಳ ಇಳುವರಿ ಕೂಡ ಕಡಿಮೆಯಾಗಿದೆ. ಇದರಿಂದಾಗಿ ಬಡ ಮತ್ತು ಮಧ್ಯಮ ವರ್ಗದ ಜನರು ತೊಂದರೆ ಅನುಭವಿಸುತ್ತಿದ್ದಾರೆ.

ಬಿಸಿಲಿನ ಝಳಕ್ಕೆ ಬೆಳೆಗಳು ಹಾನಿ: ಬೆಂಗಳೂರಿನಲ್ಲಿ ತರಕಾರಿಗಳ ಬೆಲೆ ಏರಿಕೆ
ಸಾಂದರ್ಭಿಕ ಚಿತ್ರ
ವಿವೇಕ ಬಿರಾದಾರ
|

Updated on:May 06, 2025 | 3:05 PM

Share

ಬೆಂಗಳೂರು, ಮೇ 06: ಕೆಲವಡೆ ಮಳೆಯ ಅಭಾವ ಹಾಗೂ ಬಿಸಿಲಿನ ಝಳದಿಂದ ಬೆಳೆಗಳು ಹಾನಿಗೀಡಾಗಿವೆ. ಹೀಗಾಗಿ ಕೆಲ ತರಕಾರಿಗಳ (Vegetables) ದರ ಏರಿಕೆಯಾಗಿದೆ. ಇದರಿಂದ ಬೆಂಗಳೂರಿನ (Bengaluru) ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಮೇಲಿಂದ ಮೇಲೆ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ. ತರಕಾರಿ ಕೊಳ್ಳಲು ಯೋಚಿಸಬೇಕಾದ ಪರಿಸ್ಥಿತಿ ಉದ್ಭವವಾಗಿದೆ. ಬೀನ್ಸ್, ಬಟಾಣಿ, ನೌಕಲ್, ಖಾಲಿ ಫ್ಲವರ್, ನಿಂಬೆ, ಕ್ಯಾಪ್ಸಿಕಂ, ತೆಂಗಿನಕಾಯಿ ದರಗಳು ಗಗನಕ್ಕೆ ಏರಿಕೆಯಾಗಿವೆ. ಹೇಗಪ್ಪ ಖರೀದಿ ಮಾಡುವುದು ಅಂತ ಗ್ರಾಹಕರು ಯೋಚಿಸುತ್ತಿದ್ದಾರೆ. ಇನ್ನು, ಬಾಳೆ ಹಣ್ಣಿನ ದರ ಕೂಡ ದಿಢೀರ್ ಹೆಚ್ಚಾಗಿದ್ದು, ಕೇಜಿಗೆ 80 ರಿಂದ 100 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.

ತರಕಾರಿಗಳ ಬೆಲೆ

ತರಕಾರಿ ಬೆಲೆ (ರೂ.ಗಳಲ್ಲಿ)
ತರಕಾರಿ ಪ್ರಸ್ತುತ ದರ
ಸೌತೆ ಕಾಯಿ 40
ಬೀನ್ಸ್ 80
ಬಟಾಣಿ 140
ನೌಕಲ್ 60
ದಪ್ಪ ಮೆಣಸಿನಕಾಯಿ 60
ನಿಂಬೆ 7
ತೆಂಗಿನಕಾಯಿ 70
ಬಿಳಿ ಬದನೆಕಾಯಿ 36
ಗುಂಡು ಬದನೆಕಾಯಿ 28
ದಪ್ಪ ಮೆಣಸಿನಕಾಯಿ 56
ಗೋರಿಕಾಯಿ 64
ಡಬ್ಬಲ್‌ ಬೀನ್ಸ್‌ 115
ಬೆಳ್ಳುಳ್ಳಿ 174
ಎಲೆಕೋಸು 22
ಟೊಮೇಟೊ 21
ಹೀರೇಕಾಯಿ 46
ಸಬ್ಬಕ್ಕಿ ಸೊಪ್ಪು 80
ಮೆಂತ್ಯ ಸೊಪ್ಪು 85
ಬೆಂಡೆಕಾಯಿ 44

ಇದನ್ನೂ ಓದಿ: ಚಿನ್ನದ ಬೆಲೆ ಭರ್ಜರಿ ಏರಿಕೆ; ಮತ್ತೆ 9,000 ರೂ ಗಡಿದಾಟಿದ ಬೆಲೆ

ಮಳೆಯಿಂದ ಇಳುವರಿ ಕುಸಿತ

ಮೋಡ ಕವಿದ ವಾತಾವರಣದೊಂದಿಗೆ ಮಳೆ ಬರುತ್ತಿದ್ದರೆ ಕೆಲವು ತರಕಾರಿಗಳು ಬೇಗ ಕೊಯ್ಲಿಗೆ ಬರುವುದಿಲ್ಲ. ಈ ಹಿನ್ನೆಲೆಯಲ್ಲಿ ಹಸಿಮೆಣಸಿಕಾಯಿ, ಚಪ್ಪರದವರೆಕಾಯಿ, ಹಾಗಲಕಾಯಿ, ಗೋರಿಕಾಯಿ ಮತ್ತಿತರ ತರಕಾರಿಗಳ ಇಳುವರಿ ಕಡಿಮೆಯಾಗಿದೆ. ಜೊತೆಗೆ ಮೆಂತ್ಯ ಸೊಪ್ಪು, ಸಬ್ಬಕ್ಕಿ ಸೊಪ್ಪು, ಹರಿವೆ ಸೊಪ್ಪು, ದಂಟಿನ ಸೊಪ್ಪು, ಪಾಲಕ್​ ಸೊಪ್ಪುಗಳು ಕೂಡ ಮಳೆಯಿಂದ ಹಾಳಾಗಿದ್ದು, ದರಗಳು ದಿಢೀರ್ ಏರಿಕೆಯಾಗಿದೆ. ಆದರೆ, ಈ ನಡುವೆ ಗುಣಮಟ್ಟದ ಈರುಳ್ಳಿ-ಟೊಮೆಟೊ 5 ಕೆಜಿಗೆ 100 ರೂ. ನಂತೆ ಮಾರಾಟವಾಗುತ್ತಿದೆ.

ವರದಿ- ಲಕ್ಷ್ಮೀ ನರಸಿಂಹ್

ಕರ್ನಾಟಕದ ಇನ್ನಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:03 pm, Tue, 6 May 25