ಆಕ್ಸ್​​ಫರ್ಡ್​ ವಿಜ್ಞಾನಿಗಳು ಸಂಶೋಧಿಸಿರುವ ಕೊರೊನಾ ಔಷಧ ಮಾನವ ಬಳಕೆಗೆ ಸಿದ್ಧ!

ಇಂಗ್ಲೆಂಡ್​ನ ರಾಷ್ಟ್ರೀಯ ಆರೋಗ್ಯ ಸೇವಾ ವಿಭಾಗವು ಈಗಾಗಲೇ ಸಾವಿರಾರು ವೈದ್ಯರು ಹಾಗೂ ಸ್ವಯಂಸೇವಕರನ್ನು ನೇಮಕ ಮಾಡಿದೆ. ಈ ಮೂಲಕ ಔಷಧ ದೇಶದ ಪ್ರತಿ ಮೂಲೆಗೂ ತಲುಪುವ ಕೆಲಸ ಮಾಡಲು ಸಿದ್ಧತೆ ಮಾಡಿಕೊಂಡಿದೆ.

ಆಕ್ಸ್​​ಫರ್ಡ್​ ವಿಜ್ಞಾನಿಗಳು ಸಂಶೋಧಿಸಿರುವ ಕೊರೊನಾ ಔಷಧ ಮಾನವ ಬಳಕೆಗೆ ಸಿದ್ಧ!
ಸಾಂದರ್ಭಿಕ ಚಿತ್ರ
Rajesh Duggumane

| Edited By: sadhu srinath

Dec 30, 2020 | 2:21 PM

ಲಂಡನ್: ಇಡೀ ಮಾನವ ಕುಲವೇ ಈ ಒಂದು ಕ್ಷಣಕ್ಕಾಗಿ ಆತುರ/ಕಾತುರದಿಂದ ಕಾದುಕುಳಿತಿದೆ.. ಏನೆಂದ್ರೆ ಆಕ್ಸ್​​ಫರ್ಡ್ ವಿಶ್ವವಿದ್ಯಾಲಯದ​ ವಿಜ್ಞಾನಿಗಳು ಸಂಶೋಧಿಸಿರುವ ಹಾಗೂ ಅಸ್ಟ್ರಾಜೆನೆಕಾ ಕಂಪನಿ ಉತ್ಪಾದನೆ ಮಾಡಲಿರುವ ಕೊರೊನಾ ಔಷಧವನ್ನು ಮಾನವ ಬಳಕೆಗೆ ಇಂಗ್ಲೆಂಡ್​ನ ಔಷಧ ಮತ್ತು ಆರೋಗ್ಯ ಉತ್ಪನ್ನಗಳ ನಿಯಂತ್ರಣ ಸಂಸ್ಥೆ ಸಮ್ಮತಿಸಿದೆ. ವಿಶ್ವಾದ್ಯಂತ ಕೊರೊನಾ ಎರಡನೇ ಅಲೆ ಭೀತಿ ಶುರುವಾಗುತ್ತಿರುವಾಗಲೇ ಈ ಔಷಧ ಬಳಕೆಗೆ ಸಿಗುತ್ತಿರುವುದು ಜನರಲ್ಲಿನ ಆತಂಕ ದೂರವಾಗಿದೆ.

ಇಂಗ್ಲೆಂಡ್​ನ ರಾಷ್ಟ್ರೀಯ ಆರೋಗ್ಯ ಸೇವಾ ವಿಭಾಗವು ಈಗಾಗಲೇ ಸಾವಿರಾರು ವೈದ್ಯರು ಹಾಗೂ ಸ್ವಯಂಸೇವಕರನ್ನು ಲಸಿಕೆಗಾಗಿ ನೇಮಕ ಮಾಡಿದೆ. ಈ ಮೂಲಕ ಔಷಧವು ದೇಶದ ಪ್ರತಿ ಮೂಲೆಗೂ ತಲುಪುವ ಕೆಲಸ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಈ ಔಷಧ ಸೀರಮ್ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ಜೊತೆಗೂ ಒಡಂಬಡಿಕೆ ಮಾಡಿಕೊಂಡಿದೆ. ​

ರೂಪಾಂತರ ಕೊರೊನಾಗೂ ಪರಿಣಾಮಕಾರಿ ಈ ಔಷಧ ಗೇಮ್​ ಚೇಂಜರ್​ ಆಗಲಿದೆ ಎಂದು ಇಂಗ್ಲೆಡ್​ನ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ, ಈ ಔಷಧ ಪಡೆದುಕೊಂಡ ಕೆಲವೇ ವಾರಗಳಲ್ಲಿ ವ್ಯಕ್ತಿಯಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚಲಿದ್ದು, ಮಾರಕ ಕೊರೊನಾ ವೈರಸ್​ನಿಂದ ರಕ್ಷಣೆ ಮಾಡಲಿದೆ. ಮಾರ್ಚ್​ ಕೊನೆ ವೇಳೆಗೆ 4 ಕೋಟಿ ಕೊರೊನಾ ಡೋಸ್​ ಸಿಗುವ ಸಾಧ್ಯತೆ ಇದೆ.

ಈಗಾಗಲೇ ಕೊರೊನಾ ವೈರಸ್​ ರೂಪಾಂತರಗೊಂಡಿರುವ ವಿಚಾರ ಸಾಕಷ್ಟು ಆತಂಕ ಸೃಷ್ಟಿಸಿದೆ. ಈ ವೈರಸ್​ ಭಾರತಕ್ಕೂ ಕಾಲಿಟ್ಟಿದೆ. ಈಗ ಸಿದ್ಧಪಡಿಸಿರುವ ಔಷಧ ರೂಪಾಂತರಗೊಂಡಿರುವ ಕೊರೊನಾಗೂ ಪರಿಣಾಮಕಾರಿಯಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮತ್ತೆ ಶುರುವಾಯ್ತು ಲಾಕ್​ಡೌನ್​: ರೂಪಾಂತರಿ ಕೊರೊನಾ ತಡೆಯಲು ಲಾಕ್​ಡೌನ್ ಘೋಷಿಸಿದ ಮಹಾರಾಷ್ಟ್ರ ಸರ್ಕಾರ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada