Corona Vaccine: ಆಕ್ಸ್ಫರ್ಡ್-ಆಸ್ಟ್ರಾಜೆನೆಕಾ ಲಸಿಕೆಗೆ ಇಂಗ್ಲೆಂಡ್ ಸರ್ಕಾರದ ಅನುಮತಿ.. ರೂಪಾಂತರ ಕೊರೊನಾ ವಿರುದ್ಧವೂ ಈ ವ್ಯಾಕ್ಸಿನ್ ಪರಿಣಾಮಕಾರಿ
ಒಂದೆಡೆ ಚೀನಾ ವೈರಸ್.. ಮತ್ತೊಂದೆಡೆ ಬ್ರಿಟನ್ ವೈರಸ್.. ಎರಡು ವೈರಸ್ಗಳು ವಿಶ್ವದ ಜನರ ಜೀವ ತೆಗೆಯಲು ನಾ ಮುಂದು.. ತಾ ಮುಂದು ಅಂತಾ ಶರವೇಗದಲ್ಲಿ ಜನರ ಮೇಲೆ ದಾಳಿ ಮಾಡ್ತಿವೆ. ಇದರ ನಡುವೆ ಕೊರೊನಾಗೆ ವ್ಯಾಕ್ಸಿನ್ ಕಂಡು ಹಿಡಿಯಲು ಹಲವು ಕಂಪನಿಗಳು ಪ್ರಯತ್ನಿಸುತ್ತಿವೆ. ಇದರಲ್ಲಿ ಫೈಜರ್ ಲಸಿಕೆ ಲಭ್ಯವಾಗಿದ್ದು, ಆಕ್ಸ್ಫರ್ಡ್-ಆಸ್ಟ್ರಾಜೆನೆಕಾ ವ್ಯಾಕ್ಸಿನ್ಗೆ ಇಂಗ್ಲೆಂಡ್ ಅನುಮತಿಸಿದೆ. ಅದ್ರ ಡಿಟೇಲ್ಸ್ ಇಲ್ಲಿದೆ.
ಕಣ್ಣಿಗೆ ಕಾಣದ ಒಂದೇ ಒಂದು ವೈರಸ್ ಇಡೀ ವಿಶ್ವವನ್ನೇ ಕಂಗಾಲು ಮಾಡಿ ಬಿಟ್ಟಿದೆ. ಕೊರೊನಾ ಅನ್ನೋ ಸೂಕ್ಷ್ಮಾತಿ ಸೂಕ್ಷ್ಮ ಜೀವಿ ಕೋಟ್ಯಂತರ ಜನರ ದೇಹ ಹೊಕ್ಕು.. ಲಕ್ಷಾಂತರ ಜನರನ್ನ ಬಲಿ ಪಡೆದಿದೆ. ಜೊತೆಗೆ ತನ್ನ ವೇಷ ಬದಲಿಸಿಕೊಂಡು ರೀ ಎಂಟ್ರಿ ಕೊಟ್ಟಿರೋ ಕೊರೊನಾ ಇನ್ನೂ ಹಲವರನ್ನ ಬಲಿ ಪಡೆಯಲು ತಾನು ಸಿದ್ಧ ಅಂತಾ ಎಚ್ಚರಿಕೆ ಕೊಟ್ಟಿದೆ.
ಇದರ ನಡುವೆ ಇಂಗ್ಲೆಂಡ್ನ ಆಕ್ಸ್ಫರ್ಡ್ ವಿವಿ ಮತ್ತು ಆಸ್ಟ್ರಾಜೆನೆಕಾ ಕೊರೊನಾಗೆ ವ್ಯಾಕ್ಸಿನ್ ಕಂಡು ಹಿಡಿದಿವೆ. ಇದಕ್ಕೆ ಇಂಗ್ಲೆಂಡ್ ಸರ್ಕಾರ ಅನುಮತಿ ನೀಡಿದ್ದು, ಬ್ರಿಟನ್ನಲ್ಲಿ ವೇಷ ಬದಲಿಸಿ ಅಬ್ಬರಿಸ್ತಿರೋ ಮಹಾಮಾರಿ ವಿರುದ್ಧ ಹೋರಾಟಕ್ಕೆ ಸಿದ್ಧವಾಗಿದೆ.
ವೇಷ ಬದಲಿಸಿರೋ ಕೊರೊನಾ ವಿರುದ್ಧವೂ ವ್ಯಾಕ್ಸಿನ್ ಪರಿಣಾಮಕಾರಿ! ಬ್ರಿಟನ್ನಲ್ಲಿ ರೂಪಾಂತರಿ ತಳಿ ಆರ್ಭಟ ಹೆಚ್ಚಾದ ಕಾರಣ, ಇಂಗ್ಲೆಂಡ್ ಸರ್ಕಾರ ಫೈಜರ್ ಕಂಪನಿ ಕಂಡು ಹಿಡಿದಿದ್ದ ಲಸಿಕೆ ಬಳಕೆಗೆ ಅನುಮತಿ ನೀಡಿತ್ತು. ಈಗ ಆಕ್ಸ್ಫರ್ಡ್ ವಿವಿ ಮತ್ತು ಆಸ್ಟ್ರಾಜೆನೆಕಾದ ಲಸಿಕೆಗೂ ಗ್ರೀನ್ ಸಿಗ್ನಲ್ ನೀಡಿದೆ. ಈಗಾಗಲೇ ಇಂಗ್ಲೆಂಡ್ನಲ್ಲಿನ 6 ಲಕ್ಷ ಜನರಿಗೆ ಫೈಜರ್ ಲಸಿಕೆಯನ್ನ ನೀಡಲಾಗಿದೆ.
ಆದ್ರೆ, ಇದು ದುಬಾರಿ ಲಸಿಕೆಯಾಗಿದ್ದು, ಇದರ ಸಂಗ್ರಹ ಮತ್ತು ಸಾಗಣೆ ಕೂಡ ಬಡ ರಾಷ್ಟ್ರಗಳಿಗೆ ಹೊರೆಯಾಗಲಿದೆ. ಆದ್ರೆ, ಆಕ್ಸ್ಫರ್ಡ್ ವಿವಿಯ ಲಸಿಕೆ ಕಡಿಮೆ ವೆಚ್ಚದ್ದಾಗಿದ್ದು, ಸಂಗ್ರಹ ಮತ್ತು ಸಾಗಣೆ ಬಹಳ ಸುಲಭವಾಗಿದೆ. ಇದೇ ಕಾರಣಕ್ಕೆ ಭಾರತಕ್ಕೆ ಫೈಜರ್ಗಿಂತಾ ಆಕ್ಸ್ಫರ್ಡ್ ವಿವಿ ಲಸಿಕೆ ಉತ್ತಮ ಅಂತಾ ಲಂಡನ್ ಹಾಸ್ಪಿಟಲ್ಸ್ನ ತಜ್ಞ ವೈದ್ಯ ಡಾ.ಅನಿಲ್ ಜೋಶಿ ಹೇಳಿದ್ದಾರೆ.
ಫೈಜರ್ ಕಂಪನಿಯ ಲಸಿಕೆಯನ್ನ ಮೂರು ವಾರದಲ್ಲಿ ಎರಡು ಬಾರಿ ನೀಡಬೇಕು. ಆಕ್ಸ್ಫರ್ಡ್ ಲಸಿಕೆಯನ್ನ ಮೂರು ತಿಂಗಳಲ್ಲಿ ಎರಡು ಬಾರಿ ನೀಡಬೇಕು ಅಂತಾ ಅನಿಲ್ ಜೋಶಿ ಹೇಳಿದ್ದಾರೆ.
ವೇಷ ಬದಲಿಸಿ ಹೆಮ್ಮಾರಿ ಅಬ್ಬರ ಮೆರೀತಿರೋ ಸಂದರ್ಭದಲ್ಲಿ ಇಂಗ್ಲೆಂಡ್ನಿಂದ ಶುಭ ಸುದ್ದಿ ಬಂದಿದ್ದು, ಹೊಸ ವರ್ಷದ ಸಂದರ್ಭದಲ್ಲಿ ಮನುಕುಲಕ್ಕೆ ಗುಡ್ ನ್ಯೂಸ್ ಸಿಕ್ಕಿರೋದು ಸುಳ್ಳಲ್ಲ. ಇದರ ಜೊತೆಗೆ ಭಾರತಕ್ಕೆ ಆಕ್ಸ್ಫರ್ಡ್ ಲಸಿಕೆ ಉತ್ತಮ ಅನ್ನೋದು ತಜ್ಞರ ಅಭಿಪ್ರಾಯವಾಗಿದ್ದು ಶೀಘ್ರದಲ್ಲಿ ಭಾರತದಲ್ಲಿ ಲಸಿಕೆ ಬಳಕೆ ಬರೋದ್ರಲ್ಲಿ ಯಾವುದೇ ಅನುಮಾನವಿಲ್ಲ.