ಕೊರೊನಾ ಕಾಟದ ನಡುವೆಯೂ ನೋಡಿ ಜೋಗಾದ್ ಗುಂಡಿ!
ಶಿವಮೊಗ್ಗ: ಕೊರೊನಾ ಲಾಕ್ಡೌನ್ ಬೆನ್ನಲ್ಲೇ ಇದೀಗ ವರುಣನ ಆರ್ಭಟ ಜೋರಾಗಿದ್ದು ಎಲ್ಲೆಡೆ ಸಾವು ನೋವಿನ ಸುದ್ದಿಯೇ ಕೇಳಿಬರುತ್ತಿದೆ. ಆದರೆ, ಇತ್ತ ಜಿಲ್ಲೆಯ ಸಾಗರ ತಾಲೂಕಿನ ವಿಶ್ವವಿಖ್ಯಾತ ಜೋಗದ ಜಲಪಾತದ ವೈಭವ ಮರುಕಳಿಸಿದೆ. ಧಾರಾಕಾರ ಮಳೆಯಿಂದ ಶರಾವತಿಯ ಒಡಲು ತುಂಬಿದೆ. ಇದರ ಪರಿಣಾಮ ಧುಮ್ಮಿ ಹರಿಯುತ್ತಿರುವ ಜೋಗದ ಜಲಪಾತವು ಎಲ್ಲರ ಕಣ್ಣಿಗೆ ಮುದ ನೀಡುತ್ತಿದೆ. ಕೊರೊನಾದ ಭೀತಿಯ ನಡುವೆಯೂ ಪ್ರಕೃತಿಯ ಸುಂದರ ಸೊಬಗನ್ನು ಆಹ್ಲಾದಿಸಲು ಹಾಗೂ ಗೇರುಸೊಪ್ಪದ ಮನಮೋಹಕ ದೃಶ್ಯಕಾವ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಇತ್ತ ಬರುತ್ತಿದ್ದಾರೆ.
ಶಿವಮೊಗ್ಗ: ಕೊರೊನಾ ಲಾಕ್ಡೌನ್ ಬೆನ್ನಲ್ಲೇ ಇದೀಗ ವರುಣನ ಆರ್ಭಟ ಜೋರಾಗಿದ್ದು ಎಲ್ಲೆಡೆ ಸಾವು ನೋವಿನ ಸುದ್ದಿಯೇ ಕೇಳಿಬರುತ್ತಿದೆ. ಆದರೆ, ಇತ್ತ ಜಿಲ್ಲೆಯ ಸಾಗರ ತಾಲೂಕಿನ ವಿಶ್ವವಿಖ್ಯಾತ ಜೋಗದ ಜಲಪಾತದ ವೈಭವ ಮರುಕಳಿಸಿದೆ. ಧಾರಾಕಾರ ಮಳೆಯಿಂದ ಶರಾವತಿಯ ಒಡಲು ತುಂಬಿದೆ. ಇದರ ಪರಿಣಾಮ ಧುಮ್ಮಿ ಹರಿಯುತ್ತಿರುವ ಜೋಗದ ಜಲಪಾತವು ಎಲ್ಲರ ಕಣ್ಣಿಗೆ ಮುದ ನೀಡುತ್ತಿದೆ.
ಕೊರೊನಾದ ಭೀತಿಯ ನಡುವೆಯೂ ಪ್ರಕೃತಿಯ ಸುಂದರ ಸೊಬಗನ್ನು ಆಹ್ಲಾದಿಸಲು ಹಾಗೂ ಗೇರುಸೊಪ್ಪದ ಮನಮೋಹಕ ದೃಶ್ಯಕಾವ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಇತ್ತ ಬರುತ್ತಿದ್ದಾರೆ.