AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದು ವಠಾರ ಶಾಲೆ.. ಕೊರೊನಾಗೆ ಸವಾಲೆಸೆದ ಓಕಳಿ ಶಿಕ್ಷಕರ ಸಾಧನೆಯ ಕೇರಿ!

ಕೊರೊನಾ ಇಡೀ ಜಗತ್ತಿನ ಶೈಕ್ಷಣಿಕ ವ್ಯವಸ್ಥೆ ಮೇಲೆ ಭಾರಿ ದುಷ್ಪರಿಣಾಮ ಬೀರಿದೆ. ಈಗಾಗಲೇ ಖಾಸಗಿ ಶಾಲೆಗಳು ಆನಲೈನ್ ತರಗತಿಗಳನ್ನು ಪ್ರಾರಂಭ ಮಾಡಿವೆ. ಆದ್ರೆ ಸರ್ಕಾರಿ ಶಾಲೆಯ ಮಕ್ಕಳ ಭವಿಷ್ಯ ಮಾತ್ರ ಡೋಲಾಯಮಾನವಾಗಿದೆ. ಗ್ರಾಮೀಣ ಮಟ್ಟದಲ್ಲಿ ಆನಲೈನ್ ತರಗತಿ ನಡೆಸೋಕೆ ಆಗಲ್ಲಾ. ಮಕ್ಕಳನ್ನು ಶಾಲೆಗೆ ಕಳುಹಿಸಲಿಕ್ಕೆ ತೊಂದರೆ ಪಡುವ ಪಾಲಕರಿಗೆ ಸ್ಮಾರ್ಟ್ ಮೊಬೈಲ್, ಡಾಟಾ ಹಾಕಿಸುವದು ದುಸ್ತರವೇ ಸರಿ. ಆದ್ರೆ ಇಲ್ಲೊಂದು ಶಾಲೆಯಿಂದ. ಈ ಶಾಲೆಯ ಶಿಕ್ಷಕರು ತಮ್ಮ ಕೆಲಸದಿಂದ ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ. ವಠಾರ ಶಾಲೆಯ ಮೂಲಕ […]

ಇದು ವಠಾರ ಶಾಲೆ.. ಕೊರೊನಾಗೆ ಸವಾಲೆಸೆದ ಓಕಳಿ ಶಿಕ್ಷಕರ ಸಾಧನೆಯ ಕೇರಿ!
ಸಾಧು ಶ್ರೀನಾಥ್​
|

Updated on:Dec 29, 2020 | 12:27 PM

Share

ಕೊರೊನಾ ಇಡೀ ಜಗತ್ತಿನ ಶೈಕ್ಷಣಿಕ ವ್ಯವಸ್ಥೆ ಮೇಲೆ ಭಾರಿ ದುಷ್ಪರಿಣಾಮ ಬೀರಿದೆ. ಈಗಾಗಲೇ ಖಾಸಗಿ ಶಾಲೆಗಳು ಆನಲೈನ್ ತರಗತಿಗಳನ್ನು ಪ್ರಾರಂಭ ಮಾಡಿವೆ. ಆದ್ರೆ ಸರ್ಕಾರಿ ಶಾಲೆಯ ಮಕ್ಕಳ ಭವಿಷ್ಯ ಮಾತ್ರ ಡೋಲಾಯಮಾನವಾಗಿದೆ. ಗ್ರಾಮೀಣ ಮಟ್ಟದಲ್ಲಿ ಆನಲೈನ್ ತರಗತಿ ನಡೆಸೋಕೆ ಆಗಲ್ಲಾ. ಮಕ್ಕಳನ್ನು ಶಾಲೆಗೆ ಕಳುಹಿಸಲಿಕ್ಕೆ ತೊಂದರೆ ಪಡುವ ಪಾಲಕರಿಗೆ ಸ್ಮಾರ್ಟ್ ಮೊಬೈಲ್, ಡಾಟಾ ಹಾಕಿಸುವದು ದುಸ್ತರವೇ ಸರಿ.

ಆದ್ರೆ ಇಲ್ಲೊಂದು ಶಾಲೆಯಿಂದ. ಈ ಶಾಲೆಯ ಶಿಕ್ಷಕರು ತಮ್ಮ ಕೆಲಸದಿಂದ ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ. ವಠಾರ ಶಾಲೆಯ ಮೂಲಕ ಮಕ್ಕಳಿಗೆ ಪಾಠ ಮಾಡುವ ಮೂಲಕ ವಿನೂತನ ಕಾರ್ಯಕ್ಕೆ ಸರ್ಕಾರಿ ಶಾಲೆಯ ಶಿಕ್ಷಕರು ಮುಂದಾಗಿದ್ದಾರೆ. ಸ್ವತಃ ಆ ಶಿಕ್ಷಕರ ವಿನೂತನ ಕೆಲಸಕ್ಕೆ ಶಿಕ್ಷಣ ಸಚಿವರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವಠಾರ ಶಾಲೆ.. ಸರ್ಕಾರಿ ಶಾಲೆಯ ಶಿಕ್ಷಕರು, ತಮ್ಮ ಶಾಲೆಯ ಮಕ್ಕಳು ಶೈಕ್ಷಣಿಕ ಚಟುವಟಿಕೆಯಿಂದ ವಂಚಿತವಾಗಬಾರದು. ಆನಲೈನ್ ತರಗತಿಯಿಲ್ಲದಿದ್ದರು ಅವರು ಯಾವುದೇ ಕಾರಣದಿಂದ ಖಾಸಗಿ ಶಾಲೆಯ ಮಕ್ಕಳಿಗಿಂತ ಹಿಂದುಳಿಯಬಾರದು ಅಂತ ಶಿಕ್ಷಕರು ವಿನೂತನವಾಗಿ ಪಾಠ ಮಾಡುವ ಯೋಜನೆ ಪ್ರಾರಂಭಿಸಿದ್ದಾರೆ. ಅದೇ Okali Vatara Shale

ಹೀಗೆ ವಿನೂತನವಾಗಿ ಪಾಠ ಮಾಡ್ತಿರೋದು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಓಕಳಿ ಅನ್ನೋ ಗ್ರಾಮದಲ್ಲಿ. ಹೌದು ಓಕಳಿ ಗ್ರಾಮದಲ್ಲಿ ಒಂದರಿಂದ ಎಂಟನೇ ತರಗತಿವರೆಗೆ ಸರ್ಕಾರಿ ಶಾಲೆಯಿದೆ. ಶಾಲೆಯಲ್ಲಿ 235 ಮಕ್ಕಳ ಹಾಜರಾತಿಯಿದೆ. ಇನ್ನು ಓಕಳಿ ಗ್ರಾಮದಲ್ಲಿ 4,500 ಜನಸಂಖ್ಯೆಯಿದ್ದು, ಬಹುತೇಕ ಜನರು ಕೃಷಿಯನ್ನೆ ಮಾಡ್ತಾರೆ.

ಬಹುತೇಕರ ಮಕ್ಕಳು ಸರ್ಕಾರಿ ಶಾಲೆಯಲ್ಲಿಯೇ ಓದುತ್ತಾರೆ. ಆದ್ರೆ ಕೊರೊನಾ ಬಂದ ಮೇಲೆ ಕಳೆದ ಮೂರ್ನಾಲ್ಕು ತಿಂಗಳಿಂದ ಶಾಲೆ ಬಂದ್ ಆಗಿದೆ. ಇದೀಗ ಖಾಸಗಿ ಶಾಲೆಗಳು ಆನಲೈನ್ ತರಗತಿಗಳನ್ನು ಪ್ರಾರಂಭಿಸಿವೆ. ಆದ್ರೆ ರಾಜ್ಯದ ಯಾವುದೇ ಸರ್ಕಾರಿ ಶಾಲೆಯಲ್ಲಿ ಕೂಡಾ ಮಕ್ಕಳಿಗೆ ಇಲ್ಲಿವರಗೆ ಪಾಠ ಪ್ರಾರಂಭವಾಗಿಲ್ಲಾ. ಆದ್ರೆ ಓಕಳಿ ಗ್ರಾಮದ ಶಾಲೆಯ ಮಕ್ಕಳಿಗೆ ಮಾತ್ರ ಕಳೆದ ಒಂದು ತಿಂಗಳಿಂದ ಶಿಕ್ಷಕರು ಪಾಠ ಮಾಡ್ತಿದ್ದಾರೆ.

ಬಹುತೇಕರದು ಕೃಷಿ ಜೀವನ, ಸ್ಮಾರ್ಟ್ ಪೋನ್ ಎಲ್ಲಿಂದ ಬರಬೇಕು? ಹೌದು ಗ್ರಾಮದಲ್ಲಿ ಮಕ್ಕಳು ಶಾಲೆಯಿಲ್ಲದೇ ಇದ್ದಿದ್ದರಿಂದ ಕೇವಲ ಆಟವಾಡಿಕೊಂಡು ಸಮಯ ಕಳೆಯುತ್ತಿದ್ದರು. ಹೀಗಾಗಿ ಅನೇಕ ಪಾಲಕರು, ಮಕ್ಕಳಿಗೆ ಹೇಗಾದ್ರು ಮಾಡಿ ಪಾಠ ಮಾಡಿ, ಇಲ್ಲದಿದ್ದರೆ ಅವರು ಈ ಹಿಂದೆ ಕಲಿತಿರುವದನ್ನೆಲ್ಲಾ ಕೂಡಾ ಮರೆತು ಬಿಡ್ತಾರೆ ಅಂತ ಶಿಕ್ಷಕರಿಗೆ ಹೇಳಿದ್ರು. ಆದ್ರೆ ಮಕ್ಕಳಿಗೆ ಆನಲೈನ್ ಪಾಠ ಮಾಡಲು ಸಾಧ್ಯವಿರಲಿಲ್ಲಾ. ಯಾಕಂದ್ರೆ ಗ್ರಾಮೀಣ ಭಾಗದಲ್ಲಿರುವ ಓಕಳಿ ಗ್ರಾಮದಲ್ಲಿನ ಬಹುತೇಕರು ಕೃಷಿ ಮಾಡಿಕೊಂಡು ಜೀವನ ನಡೆಸುತ್ತಾರೆ. ಅವರು ಮಕ್ಕಳಿಗಾಗಿಯೇ ಸ್ಮಾರ್ಟ್ ಪೋನ್ ಸೇರಿದಂತೆ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಿ ಕೊಡುವ ಶಕ್ತಿಯನ್ನು ಹೊಂದಿಲ್ಲಾ.

ಶಾಲೆಯ 8 ಶಿಕ್ಷಕರು ತೆಗೆದುಕೊಂಡರು ಆ ಮಹತ್ವದ ನಿರ್ಧಾರ ಹೀಗಾಗಿ ಖಾಸಗಿ ಶಾಲೆಗಳಂತೆ ಆನಲೈನ್ ಪಾಠ ಮಾಡಲಿಕ್ಕೆ ಆಗೋದಿಲ್ಲಾ. ಆದರೂ ಕೂಡಾ ಮಕ್ಕಳಿಗೆ ಪಾಠ ಮಾಡಬೇಕು. ನಾವು ಪ್ರತಿನಿತ್ಯ ಶಾಲೆಗೆ ಬರ್ತಾಯಿದ್ದೇವೆ. ಸರ್ಕಾರ ಸಂಬಳ ಕೂಡಾ ನೀಡ್ತಾಯಿದೆ. ಹೀಗಾಗಿ ನಾವು ಹೇಗಾದ್ರು ಮಾಡಿ ಮಕ್ಕಳಿಗೆ ಪಾಠ ಮಾಡಬೇಕು ಅಂತ ನಿರ್ಧರಿಸಿದ ಶಾಲೆಯ ಎಂಟು ಶಿಕ್ಷಕರು, ಶಾಲೆಯಲ್ಲಿ ಸಭೆಯನ್ನು ಮಾಡಿದ್ರು.

ನಂತರ ಮಕ್ಕಳನ್ನು ಶಾಲೆಗೆ ಕರೆಸುವ ಬದಲಾಗಿ ಮಕ್ಕಳಿದ್ದಲ್ಲಿಯೇ ಹೋಗಿ ನಾವು ಪಾಠ ಮಾಡೋಣಾ ಅಂತ ನಿರ್ಧಾರ ಮಾಡಿದ್ರು. ಅದರಂತೆ ಗ್ರಾಮದಲ್ಲಿ ಎಂಟು ಕಡೆ ಜಾಗವನ್ನು ಗುರುತಿಸಿದ್ರು. ಕೆಲವರ ಮನೆ ಮುಂದಿರುವ ಜಾಗ, ಸಮುದಾಯ ಭವನ, ದೇವಸ್ಥಾನದ ಆವರಣಗಳನ್ನು ಗುರುತಿಸಿದ್ರು. ಆ ಜಾಗದ ಸಮೀಪವಿರುವ ಮಕ್ಕಳನ್ನು ಶಾಲೆಗೆ ಬರಲು ಹೇಳಿದ್ರು. ಬರದೇ ಇದ್ದ ಕಡೆ ತಾವೇ ಮಕ್ಕಳ ಮನೆಗೆ ಹೋಗಿ, ಪಾಲಕರಿಗೆ ತಾವು ಯಾವ ರೀತಿ ಪಾಠ ಮಾಡ್ತಿದ್ದೇವೆ ಅನ್ನೋದನ್ನು ಹೇಳಿ ಮಕ್ಕಳನ್ನು ಕಲಿಕಾ ಕೇಂದ್ರಗಳ ಸ್ಥಾನಕ್ಕೆ ಕರೆತಂದರು. ಅಲ್ಲಿ ದೈಹಿಕ ಅಂತರವನ್ನು ಕಾಪಾಡಿ ಮಕ್ಕಳನ್ನು ಕೂಡಿಸಿ ಪಾಠ ಪ್ರಾರಂಭಿಸಿದರು.

ಕೊರೊನಾ ಜಾಗೃತಿಯೂ ನಡೆದಿದೆ! ಮಕ್ಕಳಿಗೆ ತಾವೇ ಮಾಸ್ಕ್, ಸ್ಯಾನಿಟೈಸರ್​ಗಳನ್ನು ನೀಡಿದ್ದಾರೆ. ಮಕ್ಕಳಿಗೆ ಹಾಡು ಹೇಳಿಸುವ ಮೂಲಕ ಮಕ್ಕಳ ಕಲಿಯುವಂತೆ ಹುರಿದುಂಬಿಸುತ್ತಿದ್ದಾರೆ. ಇದೀಗ ಮಕ್ಕಳಿಗೆ ಅವಶ್ಯವಿರುವ ಮಗ್ಗಿ, ಅಕ್ಷರಾಭ್ಯಾಸ, ಪಾಠದಲ್ಲಿ ಬರುವ ಕಥೆಗಳು, ಹಾಡುಗಳನ್ನು ಹೇಳಿಸುತ್ತಿದ್ದಾರೆ.

ಯಾವ ಮಕ್ಕಳು ಯಾವುದರಲ್ಲಿ ವೀಕ್ ಇದ್ದಾರೋ ಅವರಿಗೆ ಅದನ್ನು ಹೇಳಿಕೊಡುವ ಕೆಲಸವನ್ನು ಮಾಡ್ತಿದ್ದಾರೆ. ಹೀಗಾಗಿ ಮನೆಯಲ್ಲಿ ಕೇವಲ ಆಟ ಆಡಿಕೊಂಡು ಇದ್ದ ಮಕ್ಕಳು ಇದೀಗ ಕಲಿಕಾ ಕೇಂದ್ರಕ್ಕೆ ಬರ್ತಿವೆ. ಇಲ್ಲಿ ಸಂತೋಷದಿಂದ ಶಿಕ್ಷಕರು ಹೇಳುವ ಪಾಠವನ್ನು ಮಕ್ಕಳು ಕೇಳ್ತಾಯಿದ್ದಾರೆ. ಇನ್ನು ಪ್ರತಿನಿತ್ಯ 10 ರಿಂದ 12.30 ರವರೆಗೆ ಅಂದ್ರೆ ಎರಡೂವರೆ ಗಂಟೆ ಕಾಲ ಮಕ್ಕಳಿಗೆ ಬೋಧನೆಯನ್ನು ಮಾಡಲಾಗುತ್ತಿದೆ.

ಆನಲೈನ್ ತರಗತಿಗಳಿಗೆ ಸೆಡ್ಡು ಹೊಡೆದ ಶಿಕ್ಷಕರು ಇದೀಗ ಗ್ರಾಮದಲ್ಲಿ ಎಂಟು ಕಡೆ ಕಲಿಕಾ ಕೇಂದ್ರಗಳನ್ನು ಮಾಡಿ, ಒಂದೊಂದು ಕಡೆ 15-20 ಮಕ್ಕಳನ್ನು ಸೇರಿಸಿ ಅವರಿಗೆ ಪಾಠ ಹೇಳುವ ಮೂಲಕ ಖಾಸಗಿ ಶಾಲೆಗಳಿಗೆ ಕೂಡಾ ಮಾದರಿಯಾಗಿದ್ದಾರೆ.

ಇನ್ನು ಕೊರೊನಾ ಸೋಂಕಿನ ಭೀತಿ ಜಿಲ್ಲೆಯಲ್ಲಿ ಹೆಚ್ಚಾಗಿರುವುದರಿಂದ ಕೊರೊನಾದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಕೂಡಾ ಮಾಡಿದ್ದಾರೆ. ಮಕ್ಕಳಿಗೆ ಜಾಗೃತಿ ಬಂದ್ರೆ ಅವರು ಮನೆಯಲ್ಲಿನ ಎಲ್ಲರಿಗೂ ಕೂಡಾ ಜಾಗೃತಿ ಮೂಡಿಸುತ್ತಾರೆ. ಹೀಗಾಗಿ ಮಕ್ಕಳಿಗೆ ಮೊದಲು ಕೊರೊನಾದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಕೂಡಾ ಕಲಿಕಾ ಕೇಂದ್ರದ ಮೂಲಕ ಮಾಡ್ತಿದ್ದಾರೆ. ಇನ್ನು ಶಿಕ್ಷಕರ ಕೆಲಸಕ್ಕೆ ಗ್ರಾಮದ ಜನರು ಕೂಡಾ ಬೆಂಬಲವಾಗಿ ನಿಂತಿದ್ದಾರೆ. ಶಿಕ್ಷಕರು ಕೈಗೊಳ್ಳುವ ಪ್ರತಿ ನಿರ್ಧಾರಕ್ಕೆ ಪ್ರೋತ್ಸಾಹಿಸುತ್ತಿದ್ದಾರೆ.

ಶಿಕ್ಷಣ ಸಚಿವ ಸುರೇಶಕುಮಾರ್ ಕೂಡಾ ಮುಖ್ಯೋಪಾಧ್ಯಾಯರಿಗೆ ಕರೆ ಮಾಡಿದ್ದಾರೆ! ಇನ್ನು ಗ್ರಾಮದ ಶಿಕ್ಷಕರ ಕೆಲಸಕ್ಕೆ ಗ್ರಾಮದ ಜನರು ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲಾ ಸ್ವತ: ರಾಜ್ಯದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೂಡಾ ಶಾಲೆಯ ಮುಖ್ಯೋಪಾಧ್ಯಾಯರಿಗೆ ಕರೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊರೊನಾದ ಸಂಕಷ್ಟದ ಸಮಯದಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಹೇಗಪ್ಪಾ ಪಾಠ ಮಾಡಿಸೋದು ಅನ್ನೋ ಚಿಂತೆಯಲ್ಲಿ ರಾಜ್ಯ ಸರ್ಕಾರವಿದ್ದಾಗ, ಇಡೀ ರಾಜ್ಯವಲ್ಲಾ ದೇಶಕ್ಕೆ ಮಾದರಿಯಾಗುವ ಕೆಲಸವನ್ನು ಓಕಳಿ ಗ್ರಾಮದ ಶಿಕ್ಷಕರು ಮಾಡಿ ತೋರಿಸುತ್ತಿದ್ದಾರೆ. -ಸಂಜಯ್

Published On - 4:05 pm, Thu, 6 August 20

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ