ಮರಳುಗಾಡಿನಲ್ಲಿ ಕನ್ನಡದ ಕಂಪು.. ದುಬೈನಲ್ಲಿ ತೆರೆದಿದೆ ಕನ್ನಡ ಪಾಠ ಶಾಲೆ!
ಮಂಡ್ಯ: ನಡುನಾಡೆ ಇರಲಿ ಗಡಿನಾಡೆ ಇರಲಿ ಕನ್ನಡದ ಕಳೆಯ ಕೆಚ್ಚೇವು ಎಂಬಂತೆ ಇಲ್ಲಿಂದ ಉದ್ಯೋಗ ಅರಸಿ ದುಬೈ ಸೇರಿರುವ ಕನ್ನಡಿಗರು ಕನ್ನಡ ಪಾಠ ಶಾಲೆಯನ್ನು ನಡೆಸುತ್ತಿದ್ದಾರೆ. ತಮ್ಮ ಭಾಷಾ ಪ್ರೇಮವನ್ನು ಮರಳುಗಾಡಿನಲ್ಲೂ ಪಸರಿಸಿದ್ದಾರೆ. ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಅಂತ ಊರು ಬಿಟ್ಟ ಬಂದ ಕನ್ನಡಿಗರು ದುಬೈನಲ್ಲಿ ಕನ್ನಡ ಡಿಂಡಿಮವ ಬಾರಿಸಿದ್ದಾರೆ. 6 ವರ್ಷದ ಹಿಂದೆ ಕನ್ನಡ ಮಿತ್ರರು ಅನ್ನೋ ಸಂಘಟನೆ ಹೆಸರಿನಲ್ಲಿ ಕೆಲ ಕನ್ನಡಿಗರು ಸೇರಿಕೊಂಡು ಶಾಲೆ ಆರಂಭಿಸಿದ್ದಾರೆ. 20 ಮಕ್ಕಳಿಂದ […]

ಮಂಡ್ಯ: ನಡುನಾಡೆ ಇರಲಿ ಗಡಿನಾಡೆ ಇರಲಿ ಕನ್ನಡದ ಕಳೆಯ ಕೆಚ್ಚೇವು ಎಂಬಂತೆ ಇಲ್ಲಿಂದ ಉದ್ಯೋಗ ಅರಸಿ ದುಬೈ ಸೇರಿರುವ ಕನ್ನಡಿಗರು ಕನ್ನಡ ಪಾಠ ಶಾಲೆಯನ್ನು ನಡೆಸುತ್ತಿದ್ದಾರೆ. ತಮ್ಮ ಭಾಷಾ ಪ್ರೇಮವನ್ನು ಮರಳುಗಾಡಿನಲ್ಲೂ ಪಸರಿಸಿದ್ದಾರೆ.
ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಅಂತ ಊರು ಬಿಟ್ಟ ಬಂದ ಕನ್ನಡಿಗರು ದುಬೈನಲ್ಲಿ ಕನ್ನಡ ಡಿಂಡಿಮವ ಬಾರಿಸಿದ್ದಾರೆ. 6 ವರ್ಷದ ಹಿಂದೆ ಕನ್ನಡ ಮಿತ್ರರು ಅನ್ನೋ ಸಂಘಟನೆ ಹೆಸರಿನಲ್ಲಿ ಕೆಲ ಕನ್ನಡಿಗರು ಸೇರಿಕೊಂಡು ಶಾಲೆ ಆರಂಭಿಸಿದ್ದಾರೆ. 20 ಮಕ್ಕಳಿಂದ ಆರಂಭವಾದ ಈ ಶಾಲೆಯಲ್ಲಿ ಈಗ 310 ಮಕ್ಕಳು ಓದುತ್ತಿದ್ದಾರೆ. ದುಬೈನಲ್ಲೇ ಹುಟ್ಟಿ ಬೆಳೆದ ಮಕ್ಕಳಿಗೆ ಕನ್ನಡ ಕಲಿಸೊ ಉದ್ದೇಶದಿಂದ ಈ ಶಾಲೆಯನ್ನು ಆರಂಭಿಸಲಾಗಿದೆ. ಈ ಶಾಲೆಯಲ್ಲಿನ ಮಕ್ಕಳು ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢ ಹಂತದಲ್ಲಿ ಕನ್ನಡ ಕಲಿಯುತ್ತಾರೆ.
ಕೋವಿಡ್ ಹಿನ್ನೆಲೆಯಲ್ಲಿ ಈ ವರ್ಷ ಆನ್ಲೈನ್ನಲ್ಲಿ ತರಗತಿಯನ್ನು ನಡೆಸಲಾಗುತ್ತಿದೆ. ಇದೇ ತಿಂಗಳ 6 ರಂದು ಸಾಹಿತಿ ಡಾ ಚಂದ್ರಶೇಖರ ಕಂಬಾರ್, ಕನ್ನಡ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಸೇರಿದಂತೆ ಹಲವು ಗಣ್ಯರು ಆನ್ಲೈನ್ ಮೂಲಕ ಆನ್ಲೈನ್ ತರಗತಿಗೆ ಚಾಲನೆ ನೀಡಿದ್ರು. ಈ ಬಗ್ಗೆ ದುಬೈನಿಂದ ಕನ್ನಡ ಮಿತ್ರ ಸಂಘಟನೆಯ ಮಾಧ್ಯಮ ಸಂಚಾಲಕ ಭಾನುಕುಮಾರ್ ಮಾಹಿತಿ ನೀಡಿದ್ದಾರೆ.






Published On - 3:12 pm, Sun, 1 November 20




