ಪಂಪ ಮಹಾಕವಿ ರಸ್ತೆಯ ಹೆಸರನ್ನು ಬದಲಾಯಿಸಲು ಮುಂದಾಯ್ತಾ ? ಕಸಾಪ; ಜೈನ್ ಅಸೋಷಿಯೇಷನ್ನಿಂದ ವಿರೋಧ
ನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) (Kannada Sahitya Parishat KSP) ಕವಿ ಪಂಪನ ಹೆಸರಿನ ರಸ್ತೆಯ ಹೆಸರನ್ನು ಬದಲಾಯಿಸಲು ಮುಂದಾಯ್ತಾ ? ಎಂಬ ಪ್ರಶ್ನೆ ಉದ್ಭವವಾಗಿದೆ.
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) (Kannada Sahitya Parishat KSP) ಕವಿ ಪಂಪನ ಹೆಸರಿನ ರಸ್ತೆಯ ಹೆಸರನ್ನು ಬದಲಾಯಿಸಲು ಮುಂದಾಯ್ತಾ ? ಎಂಬ ಪ್ರಶ್ನೆ ಉದ್ಭವವಾಗಿದೆ. ಪರಿಷತ್ನ ನಿರ್ಧಾರಕ್ಕೆ ಕರ್ನಾಟಕ ಜೈನ್ ಅಸೋಷಿಯೇಷನ್ ತೀರ್ವ ವಿರೋಧ ವ್ಯಕ್ತಪಡಿಸಿದೆ. ಮಿಂಟೋ ಆಸ್ಪತ್ರೆಯ ಮುಂಬಾಗದಿಂದ ಸಾಗುವ ಪಂಪ ಮಹಾಕವಿ ರಸ್ತೆಯನ್ನು ಕನ್ನಡ ಸಾಹಿತ್ಯ ಪರಿಷತ್ ರಸ್ತೆ ಅಂತಾ ತಿದ್ದುಪಡಿ ಮಾಡಲು ಕಸಪಾ ಅಧ್ಯಕ್ಷ ಮಹೇಶ್ ಜೋಶಿ ಮುಂದಾಗಿದ್ದಾರೆ.
ಪರಿಷತ್ನ ನಿರ್ಧಾರಕ್ಕೆ ಕರ್ನಾಟಕ ಜೈನ್ ಅಸೋಷಿಯೇಷನ್ ತೀರ್ವ ವಿರೋಧ ವ್ಯಕ್ತಪಡಿಸಿದೆ. ಈ ನಿರ್ಧಾರ ಜೈನ್ ಕವಿಗೆ ಮಾಡುವ ಅವಮಾನ ಅಂತಾ ವಿರೋಧ ವ್ಯಕ್ತಪಡಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಹೆಸರಿಗೆ ಸಾಹಿತಿಗಳಿಂದಲೂ ವಿರೋಧ ವ್ಯಕ್ತವಾಗುತ್ತಿದೆ.
ಕನ್ನಡ ಸಾಹಿತ್ಯದಲ್ಲಿ ಆದಿ ಕವಿ ಪಂಪಾ ಅವರಿಗೆ ವಿಶೇಷ ಅಸ್ಮಿತೆ ಇದೆ. ಜೈನ್ ಕವಿ ಪಂಪನ ಹೆಸರು ಬದಲಾಯಿಸುವ ಚಿಂತನೆ ಕೈಬಿಡಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ಜೈನ ಸಮುದಾಯ ಕಸಪಾ ಅಧ್ಯಕ್ಷರ ಜೊತೆ ವಾಗ್ವದಕ್ಕೆ ಮುಂದಾಗಿದೆ.
ಪಂಪನ ಹೆಸರ ಬದಲಾಯಿಸದಂತೆ ಅಧ್ಯಕ್ಷರ ಜೊತೆ ಮಾತಿನ ಚಕುಮಕಿ ನಡೆದಿದ್ದು, ಬೇರೆ ಬೇರೆ ಜಿಲ್ಲಗಳಿಂದ ಬಂದಿರುವ ಜೈನ್ ಸಮುದಾಯದ ಜಿಲ್ಲಾ ಅಧ್ಯಕ್ಷರುಗಳಿಂದ ಯಾವುದೇ ಕಾರಣಕ್ಕೂ ಜೈನ್ ಕವಿ ಪಂಪನ ಹೆಸರಿನ ರಸ್ತೆ ಬದಲಾಯಿಸದಂತೆ ಕಸಾಪ ಅಧ್ಯಕ್ಷರಿಗೆ ಮನವಿ ಮಾಡಿದ್ದಾರೆ.
ಹಿನ್ನೆಲೆ
‘ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ’ ಎನ್ನುವ ಶ್ರೇಯಸ್ಸು ಪಡೆದಿರುವ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಕೇಂದ್ರ ಕಚೇರಿ ಇರುವ ರಸ್ತೆಯ ಹೆಸರು ಬದಲಿಸಬೇಕು ಎಂದು ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಬಿಬಿಎಂಪಿ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಈ ವಿದ್ಯಮಾನವು ಇದೀಗ ಕನ್ನಡ ಬೌದ್ಧಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ‘ಹೆಸರು ಬದಲಿಸುವುದು ಸರಿಯಾದ ನಿರ್ಧಾರವಲ್ಲ’ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಚಾಮರಾಜಪೇಟೆಯ ಮಿಂಟೊ ಆಸ್ಪತ್ರೆ ಮತ್ತು ಮಕ್ಕಳ ಕೂಟ ಉದ್ಯಾನದ ನಡುವಣ ರಸ್ತೆಗೆ ‘ಸಾಹಿತ್ಯ ಪರಿಷತ್ ರಸ್ತೆ’ ಎಂದು ಹೊಸ ನಾಮಕರಣ ಮಾಡಬೇಕು ಎಂದು ಮಹೇಶ್ಜೋಶಿ ಕೋರಿದ್ದಾರೆ. ಈ ಇಡೀ ರಸ್ತೆಯನ್ನು ‘ಕನ್ನಡಮಯ’ಗೊಳಿಸಲಾಗುವುದು ಎಂದು ಸಾಹಿತ್ಯ ಪರಿಷತ್ ತಿಳಿಸಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಚರ್ಚಿಸಲಾಗುವುದು ಎಂಬ ಸಾಹಿತ್ಯ ಪರಿಷತ್ ಪದಾಧಿಕಾರಿಗಳ ಹೇಳಿಕೆಯನ್ನು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.
‘ಹೆಸರು ಬದಲಿಸುವ ಪ್ರಸ್ತಾವ ಕುರಿತು ಚರ್ಚಿಸಲು ಈ ರಸ್ತೆಯಲ್ಲಿರುವ ಇತರ ಸಂಘ ಸಂಸ್ಥೆಗಳು, ಕಚೇರಿಗಳ ಪ್ರತಿನಿಧಿಗಳನ್ನೂ ಆಹ್ವಾನಿಸಿದ್ದೇವೆ. ಪೊಲೀಸ್ ಠಾಣೆ, ಕರ್ನಾಟಕ ಸಂಸ್ಕೃತ ವಿವಿ, ಕನ್ನಡ ದಿನಪತ್ರಿಕೆ, ಕೆಲ ಬ್ಯಾಂಕ್ಗಳು, ಉದ್ಯಾನವನ, ಮಿಂಟೊ ಕಣ್ಣಿನ ಅಸ್ಪತ್ರೆ ಸೇರಿದಂತೆ ಎಲ್ಲರ ಗಮನಕ್ಕೆ ತಂದಿದ್ದೇವೆ’ ಎಂದು ಮಹೇಶ್ ಜೋಶಿ ಹೇಳಿದ್ದಾರೆ. ಕೆಲವು ದೇಶಗಳಲ್ಲಿ ನಿರ್ದಿಷ್ಟ ಥೀಮ್ಗಳ ಮೇಲೆ ರಸ್ತೆಗಳನ್ನು ರೂಪಿಸಿದ್ದಾರೆ. ಅಂಥ ಹಲವು ಉದಾಹರಣೆಗಳನ್ನು ಗಮನಿಸಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಈ ರಸ್ತೆಯು ಕನ್ನಡ ಪ್ರೇಮಿಗಳ ಕಣ್ಣಿಗೆ ಹಬ್ಬದಂತೆ ಆಗುತ್ತದೆ. ಬೆಂಗಳೂರಿಗೆ ಬರುವ ಪ್ರತಿಯೊಬ್ಬರೂ ಸಾಹಿತ್ಯ ಪರಿಷತ್ಗೆ ಭೇಟಿ ನೀಡುವಂತೆ ಮಾಡುತ್ತೇವೆ ಎಂದು ಜೋಶಿ ಹೇಳಿದರು.
ಮುಂದಿನ ದಿನಗಳಲ್ಲಿ ಈ ರಸ್ತೆಯಲ್ಲಿ ಖ್ಯಾತ ಸಾಹಿತಿಗಳ ಪ್ರತಿಮೆಗಳು, ಕನ್ನಡದ ಲೈವ್ ಹಾಡುಗಳು ಮತ್ತು ವಿಶೇಷ ಬೆಳಕಿನ ವ್ಯವಸ್ಥೆ ಮಾಡಲಾಗುವುದು. ಜನಪ್ರಿಯ ಕನ್ನಡಪರ ಹೇಳಿಕೆಗಳನ್ನು ಅಳವಡಿಸಲಾಗುವುದು ಎಂದು ಸಾಹಿತ್ಯ ಪರಿಷತ್ ಹೇಳಿದೆ.
ಮತ್ತಷ್ಟು ರಾಜ್ಯದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:42 pm, Mon, 12 September 22