ಕಾಂಗ್ರೆಸ್​ ಗೂಂಡಾಗಿರಿ ವಿರುದ್ಧ ಕಾನೂನು ಹೋರಾಟ: ನಳಿನ್​​ ಕುಮಾರ್ ಕಟೀಲ್

ದೇಶದಲ್ಲಿ, ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಾಗಲೂ ಕಾಂಗ್ರೆಸ್ ಗೂಂಡಾಗಿರಿ ಮಾಡಿದೆ. ಅವರಿಗೆ ಅದು ಹೊಸದೇನಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಕಿಡಿಕಾರಿದ್ದಾರೆ.

ಕಾಂಗ್ರೆಸ್​ ಗೂಂಡಾಗಿರಿ ವಿರುದ್ಧ ಕಾನೂನು ಹೋರಾಟ: ನಳಿನ್​​ ಕುಮಾರ್ ಕಟೀಲ್
ನಳಿನ್​ ಕುಮಾರ್ ಕಟೀಲ್ (ಸಂಗ್ರಹ ಚಿತ್ರ)
Edited By:

Updated on: Dec 16, 2020 | 10:25 PM

ಬೆಳಗಾವಿ: ವಿಧಾನ ಪರಿಷತ್​ನಲ್ಲಿ ಉಪ ಸಭಾಪತಿಯನ್ನು ಎಳೆದು ಹೊರ ಹಾಕುವುದರ ಮೂಲಕ ಕಾಂಗ್ರೆಸ್ ಗೂಂಡಾಗಿರಿ ಮಾಡಿದೆ. ಈ ಕುರಿತು ನಾವು ಕಾನೂನು ತಜ್ಞರ ಸಲಹೆ ಪಡೆದು ಹೋರಾಟ ಮಾಡುತ್ತೇವೆ. ಇತಿಹಾಸದಲ್ಲಿ ಕಾಂಗ್ರೆಸ್ ಮಾಡಿರುವ ಗೂಂಡಾಗಿರಿ ಬಹಳಷ್ಟಿದ್ದು, ಈಗ ಅದನ್ನು ವಿಧಾನ ಪರಿಷತ್ತಿಗೂ ಪರಿಚಯಿಸಿದೆ ಎಂದು ಬೆಳಗಾವಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​​ ಕುಮಾರ್ ಕಟೀಲು ಹೇಳಿದ್ದಾರೆ.

ವಿಧಾನ ಪರಿಷತ್​ನಲ್ಲಿ ಸದಸ್ಯರ ತಳ್ಳಾಟ, ನೂಕಾಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಸರ್ಕಾರ ಮತ್ತು ಬಿಜೆಪಿ ಪಕ್ಷ ಕಾನೂನು ಹೋರಾಟಕ್ಕೆ ಪ್ರಯತ್ನ ಮಾಡುತ್ತಿದೆ. ಕಾಂಗ್ರೆಸ್ ದೇಶದಲ್ಲಿ, ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಾಗಲೂ ಗೂಂಡಾಗಿರಿ ಮಾಡಿದೆ. ಅವರಿಗೆ ಅದು ಹೊಸದೇನಲ್ಲ ಎಂದು ಕಿಡಿಕಾರಿದ್ದಾರೆ.

ಹದಿನೇಳು ಜನ ಶಾಸಕರು ಬಿಜೆಪಿಗೆ ಬರುವ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಸುಧಾಕರ್ ಮೇಲೆ ಹಲ್ಲೆ ಮಾಡಿ ಗೂಂಡಾಗಿರಿಯನ್ನು ವಿಧಾನಸಭೆಯೊಳಗೆ ತಂದಿದ್ದರು. ಈಗ ವಿಧಾನಪರಿಷತ್​ನಲ್ಲಿ ಗೂಂಡಾಗಿರಿ ಮಾಡಿದ್ದಾರೆ. ಗೂಂಡಾಗಿರಿ ರಾಜ್ಯವನ್ನ ಕಾಂಗ್ರೆಸ್ ನಿರ್ಮಾಣ ಮಾಡಿದೆ ಎನ್ನುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

ಪರಿಷತ್ತಿನಲ್ಲಿ ಜಂಗೀ ಕುಸ್ತಿ: ಬಿಜೆಪಿ ಉದ್ದೇಶ ವಿಫಲ, ಕಾಂಗ್ರೆಸ್ ಒರಟುತನಕ್ಕೆ ಜಯ!

Published On - 10:23 pm, Wed, 16 December 20