ಬಿಜೆಪಿ ಉಳಿಯಬೇಕೆಂದರೆ ಸಿಎಂ ಬದಲಾಗಬೇಕು.. ಸಿಎಂ ಬದಲಾವಣೆ ನೂರಕ್ಕೆ ನೂರರಷ್ಟೂ ಖಚಿತ -ಬಸನಗೌಡ ಪಾಟೀಲ್​ ಯತ್ನಾಳ್

|

Updated on: Mar 21, 2021 | 2:30 PM

5 ರಾಜ್ಯಗಳ ಚುನಾವಣೆ ಬಳಿಕ ಯಾರ ಮಾತು ಮೇಲಾಗುತ್ತೆ ಅನ್ನೋದು ಗೊತ್ತಾಗುತ್ತೆ. ಮುಖ್ಯಮಂತ್ರಿಗಳ ಬದಲಾವಣೆ ನೂರಕ್ಕೆ ನೂರರಷ್ಟೂ ಖಚಿತ. ಈ ಸಿಎಂರನ್ನು ಇಟ್ಟುಕೊಂಡು ಚುನಾವಣೆಗೆ ಹೋದರೆ ಅಷ್ಟೆ. ಈ ವಿಚಾರ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿಗಳಿಗೆ ಗೊತ್ತು. ರಾಜ್ಯದಲ್ಲಿ ಸಿಎಂ ಬದಲಾವಣೆಯಾಗಲೇಬೇಕು. ಬಿಜೆಪಿ ಉಳಿಯಬೇಕೆಂದರೆ ಸಿಎಂ ಬದಲಾವಣೆ ಅವಶ್ಯಕ...

ಬಿಜೆಪಿ ಉಳಿಯಬೇಕೆಂದರೆ ಸಿಎಂ ಬದಲಾಗಬೇಕು.. ಸಿಎಂ ಬದಲಾವಣೆ ನೂರಕ್ಕೆ ನೂರರಷ್ಟೂ ಖಚಿತ -ಬಸನಗೌಡ ಪಾಟೀಲ್​ ಯತ್ನಾಳ್
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
Follow us on

ವಿಜಯಪುರ: ಮುಖ್ಯಮಂತ್ರಿಗಳ ಬದಲಾವಣೆ ನೂರಕ್ಕೆ ನೂರರಷ್ಟೂ ಖಚಿತ. ಈ ಸಿಎಂರನ್ನು ಇಟ್ಟುಕೊಂಡು ಚುನಾವಣೆಗೆ ಹೋದರೆ ಅಷ್ಟೆ ಎಂದು ವಿಜಯಪುರ ನಗರದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಮತ್ತೆ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ಪ್ರಹಾರ ಬೀಸಿದ್ದಾರೆ.

5 ರಾಜ್ಯಗಳ ಚುನಾವಣೆ ಬಳಿಕ ಯಾರ ಮಾತು ಮೇಲಾಗುತ್ತೆ ಅನ್ನೋದು ಗೊತ್ತಾಗುತ್ತೆ. ಮುಖ್ಯಮಂತ್ರಿಗಳ ಬದಲಾವಣೆ ನೂರಕ್ಕೆ ನೂರರಷ್ಟೂ ಖಚಿತ. ಈ ಸಿಎಂರನ್ನು ಇಟ್ಟುಕೊಂಡು ಚುನಾವಣೆಗೆ ಹೋದರೆ ಅಷ್ಟೆ. ಈ ವಿಚಾರ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿಗಳಿಗೆ ಗೊತ್ತು. ರಾಜ್ಯದಲ್ಲಿ ಸಿಎಂ ಬದಲಾವಣೆಯಾಗಲೇಬೇಕು. ಬಿಜೆಪಿ ಉಳಿಯಬೇಕೆಂದರೆ ಸಿಎಂ ಬದಲಾವಣೆ ಅವಶ್ಯಕ ಎಂದು ವಿಜಯಪುರದಲ್ಲಿ ಸಿಎಂ ಬದಲಾವಣೆ ಬಗ್ಗೆ ಯತ್ನಾಳ್ ಈ ರೀತಿ ಹೇಳಿಕೆ ನೀಡಿದ್ದಾರೆ.

ನನ್ನ ಮೂಲಗಳ ಪ್ರಕಾರ ನೂರಕ್ಕೆ ನೂರರಷ್ಟು ವಿಶ್ವಾಸವಿದೆ ಕರ್ನಾಟಕ ಬಿಜೆಪಿ ನಾಯಕತ್ವ ಬದಲಾಗುತ್ತದೆ. ಮೇ 2 ರ ಬಳಿಕ ಯಾವಾಗ ಬೇಕಾದರೂ ಸಿಎಂ ಬದಲಾವಣೆಯಾಗಬಹುದು. ಪಕ್ಷದ ಹೈಕಮಾಂಡ್, ಪ್ರಧಾನಿ, ಗೃಹ ಸಚಿವರು, ಪಕ್ಷದ ರಾಷ್ಟೀಯ ಅಧ್ಯಕ್ಷರು ಸೇರಿದಂತೆ ಎಲ್ಲರೂ ಮುಂದಿನ ಸಿಎಂ ಯಾರಾಗ್ತಾರೆ ಎಂಬುದನ್ನು ನಿರ್ಧಾರ ಮಾಡುತ್ತಾರೆ. ಯಾರೇ ಸಿಎಂ ಆಗಲಿ ಪ್ರಾಮಾಣಿಕರು, ಹಿಂದೂ ಪರವಾಗಿರುವವರು, ಉತ್ತರ ಕರ್ನಾಟಕ ಭಾಗದವರು ಸಿಎಂ ಅಗುತ್ತಾರೆಂಬ ವಿಶ್ವಾಸವಿದೆ. ನನ್ನ ಹೆಸರು ಸಿಎಂ ಆಗುವವರ ಪಟ್ಟಿಯಲ್ಲಿ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಉತ್ತರ ಕರ್ನಾಟಕದವರಿಗೆ ಸಿಎಂ ಹುದ್ದೆ ಸಿಗುತ್ತದೆ. ಮುಂಬರುವ 2023ರ ವಿಧಾನಸಭಾ ಚುನಾವಣೆಯನ್ನು ಬದಲಾವಣೆಯಾದ ಸಿಎಂ ಅವರ ನೇತೃತ್ವದಲ್ಲಿ ಎದುರಿಸುತ್ತೇವೆ. 75ವರ್ಷ ವಯಸ್ಸಾದ ಬಳಿಕ ನಮ್ಮ ಪಕ್ಷದಲ್ಲಿ ಅವಕಾಶವಿಲ್ಲ ಯಡಿಯೂರಪ್ಪ ಅವರಿಗೆ ವಿಶೇಷ ಸಂದರ್ಭದಲ್ಲಿ ಅವಕಾಶ ನೀಡಲಾಗಿದೆ ಎಂದು ಯತ್ನಾಳ್ ಹೇಳಿದ್ದಾರೆ.

ರಾಜ್ಯದಲ್ಲಿ ಸಿಎಂ B.S.ಯಡಿಯೂರಪ್ಪ ಬದಲಾವಣೆ ನಿಶ್ಚಿತ
3 ರಾಜ್ಯಗಳಲ್ಲಿ ಸಿಎಂ ಬದಲಾವಣೆಯ ಬಗ್ಗೆ ಚರ್ಚೆ ನಡೀತಿತ್ತು. ಈಗಾಗಲೇ ಉತ್ತರಾಖಂಡ್‌ನಲ್ಲಿ ಸಿಎಂ ಬದಲಾವಣೆ ಆಗಿದೆ. ಪಶ್ಚಿಮ ಬಂಗಾಳ ಚುನಾವಣೆ ಬಳಿಕ ನಾಯಕತ್ವ ಬದಲಾವಣೆಯಾಗುತ್ತೆ. ಕರ್ನಾಟಕದಲ್ಲಿ ಬಿಜೆಪಿ ನಾಯಕತ್ವ ಬದಲಾವಣೆ ಆಗುತ್ತದೆ. ಕರ್ನಾಟಕ, ಹರಿಯಾಣದಲ್ಲಿ ಸಿಎಂ ಬದಲಾವಣೆ ಆಗುತ್ತಾರೆ. ಕೇಂದ್ರದಲ್ಲಿನ ಆತ್ಮೀಯರಿಂದ ನನಗೆ ಈ ವಿಚಾರ ಗೊತ್ತಾಗಿದೆ ಎಂದು ಬಿಜೆಪಿ ಶಾಸಕ ಯತ್ನಾಳ್ ತಿಳಿಸಿದ್ದಾರೆ.

ಈ CD ಬಿಡುಗಡೆಯ ಹಿಂದೆ ದೊಡ್ಡ ಜಾಲವಿದೆ
ಇನ್ನು ಶಾಸಕ ರಮೇಶ್ ಜಾರಕಿಹೊಳಿ CD ಸುದ್ದಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಯತ್ನಾಳ್, ಈ CD ಬಿಡುಗಡೆಯ ಹಿಂದೆ ದೊಡ್ಡ ಜಾಲವಿದೆ. ಈ ಜಾಲ ಭೇದಿಸುವುದು ಎಸ್‌ಐಟಿ ತನಿಖೆಯಿಂದ ಅಸಾಧ್ಯ. ಅಂತಾರಾಷ್ಟ್ರೀಯ, ಅಂತಾರಾಜ್ಯ ಜಾಲ ಇದರಲ್ಲಿ ಶಾಮೀಲಾಗಿದೆ. ಹೀಗಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಒತ್ತಾಯ. CD ವಿಚಾರ ವಿದೇಶಗಳಲ್ಲಿ ಕೂಡ ಹಬ್ಬಿದೆ ವಿದೇಶಗಳಲ್ಲೂ ಕೆಲವೊಂದು CDಗಳು ಇವೆ ಎಂದು ಯತ್ನಾಳ್ ಹೇಳಿದ್ದಾರೆ.

ರಾಜ್ಯದಲ್ಲಿ CD ತಯಾರಿಸುವ ಎರಡು ಫ್ಯಾಕ್ಟರಿಗಳು ಇವೆ
ಮಾತು ಮುಂದುವರೆಸಿದ ಯತ್ನಾಳ್, ರಾಜ್ಯದಲ್ಲಿ CD ತಯಾರಿಸುವ ಎರಡು ಫ್ಯಾಕ್ಟರಿಗಳು ಇವೆ ಎಂದಿದ್ದಾರೆ. ಒಂದು ಫ್ಯಾಕ್ಟರಿ ಕಾಂಗ್ರೆಸ್‌ನಲ್ಲಿದೆ, ಮತ್ತೊಂದು BJPಯಲ್ಲಿದೆ. ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷರ ಐಟಿ ಸೆಲ್‌ನಲ್ಲಿದ್ದ ಸದಸ್ಯರು, ಈಗ ಸಿಎಂ ಬಿಎಸ್‌ವೈ ಪುತ್ರ ವಿಜಯೇಂದ್ರ ಜತೆಯಲ್ಲಿದ್ದಾರೆ. IT ಸೆಲ್‌ನಲ್ಲಿದ್ದವರು ಈಗ ನಿಗಮ, ಮಂಡಳಿ ಅಧ್ಯಕ್ಷರಾಗಿದ್ದಾರೆ. ಅವರೆಲ್ಲರೂ CD ತಯಾರಿಕಾ ಕೆಲಸದಲ್ಲಿ ಇದ್ದಾರೆ. ಮಸ್ಕಿ ಉಪಚುನಾವಣೆಗೆ ಬಂದವರು ಈ ಜಾಲದಲ್ಲಿದ್ದಾರೆ. ಇವರ ಜತೆಗೆ ಕಾಂಗ್ರೆಸ್‌ನಲ್ಲಿರುವ‌ ಮಹಾನ್ ನಾಯಕರಿದ್ದಾರೆ ಎಂದು ಯತ್ನಾಳ್ ಆರೋಪಿಸಿದ್ದಾರೆ.

ಜಲಸಂಪನ್ಮೂಲ, ಇಂಧನ, ಬೆಂಗಳೂರು ನಗರಾಭಿವೃದ್ಧಿ ಈ 3 ಖಾತೆ ಸಿಎಂ ಬಳಿ ಇಟ್ಟುಕೊಳ್ಳಬೇಕೆಂದು ಮೊದಲಿನಿಂದಲೂ ಸಿಎಂ ಯಡಿಯೂರಪ್ಪ ತಲೆಯಲ್ಲಿ ಇತ್ತು. ಮಾರ್ಚ್ ಅಂತ್ಯದಲ್ಲಿ ಈ ಇಲಾಖೆಗೆ ಸಾವಿರಾರು ಕೋಟಿ ರೂಪಾಯಿ ಬಿಡುಗಡೆಯಾಗುತ್ತೆ. ಆ ಹಣ ಹೇಗೆ ತೆಗೆದುಕೊಳ್ಳಬೇಕೆಂದು ಸಿಎಂ ಪ್ಲ್ಯಾನ್ ಆಗಿತ್ತು ಎಂದು ವಿಜಯಪುರದಲ್ಲಿ ಟಿವಿ9ಗೆ BJP ಶಾಸಕ ಯತ್ನಾಳ್ ಹೇಳಿದ್ದಾರೆ.

ಸಿಎಂ ಬಿಎಸ್​ವೈ ವಿರುದ್ಧ ಯತ್ನಾಳ್ ಈ ರೀತಿ ಹೇಳಿಕೆ ನೀಡಿರೋದು ಇದೇ ಮೊದಲೇನಲ್ಲ. ಅನೇಕ ಬಾರಿ ಅನೇಕ ಸಭೆಗಳಲ್ಲಿ ಯತ್ನಾಳ್ ತಮ್ಮದೇ ಪಕ್ಷದ ಸಚಿವರನ್ನು, ಸದಸ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ.ವಿಜಯೇಂದ್ರ ಕುರಿತು ನಾಲಿಗೆ ಹರಿಬಿಡುತ್ತಲೇ ಇರುವ ಯತ್ನಾಳ್, ಕೆಲ ತಿಂಗಳ ಹಿಂದೆ ನಡೆದ ಪಂಚಮಸಾಲಿ ಸಮುದಾಯದ ಸಮಾವೇಶದಲ್ಲಿ ರಾಜ್ಯ ಸರ್ಕಾರ ಹಾಗೂ ಸಿಎಂ ಬಿ.ಎಸ್​.ಯಡಿಯೂರಪ್ಪ ವಿರುದ್ಧ ಗುಡುಗಿದ್ದರು. ಇದಾದ ಬಳಿಕ ಹೈಕಮಾಂಡ್​ ದೆಹಲಿಗೆ ಬುಲಾವ್​ ನೀಡಿತ್ತು. ಇಷ್ಟೆಲ್ಲಾ ಆದ ನಂತರವೂ ಯತ್ನಾಳ್ ತಮ್ಮ ಆರೋಪಗಳನ್ನು, ವಾಗ್ದಾಳಿಯನ್ನು ಮುಂದುವರೆಸಿದ್ದಾರೆ.

ಇದನ್ನೂ ಓದಿ: ನಿಮಗೆ ತಾಕತ್ತಿದ್ದರೆ ದಾಖಲೆಗಳನ್ನು ಬಿಡುಗಡೆ ಮಾಡಿ.. ಯತ್ನಾಳ್‌ಗೆ ಶಾಸಕ ಎಂ.ಪಿ.ರೇಣುಕಾಚಾರ್ಯ ಸವಾಲ್

Published On - 1:17 pm, Sun, 21 March 21