ನಿಮಗೆ ತಾಕತ್ತಿದ್ದರೆ ದಾಖಲೆಗಳನ್ನು ಬಿಡುಗಡೆ ಮಾಡಿ.. ಯತ್ನಾಳ್‌ಗೆ ಶಾಸಕ ಎಂ.ಪಿ.ರೇಣುಕಾಚಾರ್ಯ ಸವಾಲ್
ಯತ್ನಾಳ್ ಹಾದಿ ಬೀದಿಲಿ ಮಾತನಾಡಿದರೆ ಇನ್ನು ಮುಂದೆ ಸಹಿಸೋದಿಲ್ಲ. ಯಡಿಯೂರಪ್ಪ ಬಗ್ಗೆ ಟೀಕೆ ಮಾಡಿದ್ರೂ ಒಂದೇ, ಪಕ್ಷದ ಉಪಾಧ್ಯಕ್ಷ ವಿಜಯೇಂದ್ರಗೆ ಟೀಕೆ ಮಾಡಿದ್ರೂ ಒಂದೇ. ಪಕ್ಷದ ಚೌಕಟ್ಟಿನಲ್ಲಿ ಇರೋದನ್ನು ಯತ್ನಾಳ್ ಕಲಿಬೇಕು ಎಂದು ಯತ್ನಾಳ್ ವಿರುದ್ಧ ರೇಣುಕಾಚಾರ್ಯ ಆಕ್ರೋಶ ಹೊರ ಹಾಕಿದ್ದಾರೆ.
ಬೆಂಗಳೂರು: ಬಿಎಸ್‌ವೈ ಕುಟುಂಬವನ್ನು ಟಾರ್ಗೆಟ್ ಮಾಡಿ ಮಾತಾಡ್ತಿದ್ದೀರಿ ಎಂದು BJP ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ. ಇಂದು ವಿಧಾನ ಪರಿಷತ್ನಲ್ಲಿ ನಡೆದ ಕಲಾಪದಲ್ಲಿ ಮಾತನಾಡಿದ ಶಾಸಕ ಎಂ.ಪಿ.ರೇಣುಕಾಚಾರ್ಯ, ಯತ್ನಾಳ್ ಹಾದಿ ಬೀದಿಲಿ ಮಾತನಾಡಿದರೆ ಇನ್ನು ಮುಂದೆ ಸಹಿಸೋದಿಲ್ಲ. ಯಡಿಯೂರಪ್ಪ ಬಗ್ಗೆ ಟೀಕೆ ಮಾಡಿದ್ರೂ ಒಂದೇ, ಪಕ್ಷದ ಉಪಾಧ್ಯಕ್ಷ ವಿಜಯೇಂದ್ರಗೆ ಟೀಕೆ ಮಾಡಿದ್ರೂ ಒಂದೇ. ಪಕ್ಷದ ಚೌಕಟ್ಟಿನಲ್ಲಿ ಇರೋದನ್ನು ಯತ್ನಾಳ್ ಕಲಿಬೇಕು ಎಂದು ಯತ್ನಾಳ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಈ ವೇಳೆ ರೇಣುಕಾಚಾರ್ಯ.. ಬಿಎಸ್‌ವೈ ಕುಟುಂಬವನ್ನು ಟಾರ್ಗೆಟ್ ಮಾಡಿ ಮಾತಾಡ್ತಿದ್ದೀರಿ. ಈ ರೀತಿಯಾಗಿ ಮಾತನಾಡುವುದಕ್ಕೆ ದಾಖಲೆ ಏನಿದೆ? ಬಸನಗೌಡ ಪಾಟೀಲ್ ಯತ್ನಾಳ್ ನಾಟಕ ಮಾಡೋದು ಬಿಡಿ. ನಿಮಗೆ ತಾಕತ್ತಿದ್ದರೆ ದಾಖಲೆಗಳನ್ನು ಬಿಡುಗಡೆ ಮಾಡಿ ಎಂದು ಯತ್ನಾಳ್‌ಗೆ ರೇಣುಕಾಚಾರ್ಯ ಸವಾಲ್ ಹಾಕಿದ್ದಾರೆ. ಮಾಧ್ಯಮದ ಮುಂದೆ ಮಾತನಾಡೋದನ್ನೇ ಪಕ್ಷ ಹೇಳಿಕೊಟ್ಟಿದೆಯಾ? ನಿಮ್ಮ ಮಾತಿನಿಂದ ಬಿಜೆಪಿ ಕಾರ್ಯಕರ್ತರಿಗೆ ನೋವಾಗುತ್ತಿದೆ. ಬಿಜೆಪಿಯನ್ನು ಕಟ್ಟಿ ಬೆಳೆಸಿದವರು ಸಿಎಂ ಯಡಿಯೂರಪ್ಪ. ನಿಮ್ಮಿಂದ ಹೇಳಿಸಿಕೊಳ್ಳುವ ಅಗತ್ಯ ಯಡಿಯೂರಪ್ಪಗೆ ಇಲ್ಲ. ಪಂಚಮಸಾಲಿ ಸಮಾಜ ಸೇರಿ ಎಲ್ಲ ಪಂಗಡದವರೂ ನನಗೆ ಓಟು ಹಾಕಿದ್ದಾರೆ. ನಾನು ವಿಜಯಪುರ ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡುತ್ತೇನೆ. ನಿಮಗೆ ತಾಕತ್ತಿದ್ದರೆ ಹೊನ್ನಾಳಿಗೆ ಬಂದು ಪ್ರಚಾರ ಮಾಡಿ. ಇನ್ಮುಂದೆ ಬಿಎಸ್‌ವೈ ಬಗ್ಗೆ ಆರೋಪ ಮಾಡಿದರೆ ಸಹಿಸಲ್ಲ ಎಂದು ಗುಡುಗಿದ್ದಾರೆ.
ಇನ್ನು ಮಾತು ಮುಂದುವರೆಸಿದ ಅವರು ಯತ್ನಾಳ್‌ರನ್ನು ಉಚ್ಚಾಟನೆ ಮಾಡುವಂತೆ ಆಗ್ರಹಿಸುತ್ತೇನೆ. ಮಾತೆತ್ತಿದರೆ ವಾಜಪೇಯಿ ಹೆಸರೇಳಿ ಕಪಟ ನಾಟಕವಾಡ್ತಾರೆ. ಯತ್ನಾಳ್ ಹಾದಿಬೀದಿಯಲ್ಲಿ ಮಾತಾಡಿದರೆ ಸಹಿಸುವುದಿಲ್ಲ. ಸಿಎಂ ಬಿ.ಎಸ್.ಯಡಿಯೂರಪ್ಪರನ್ನು ಟೀಕಿಸಿದ್ರೂ ಒಂದೇ, ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರರನ್ನ ಟೀಕಿಸಿದ್ರೂ ಒಂದೆ. ಯತ್ನಾಳ್ ಪಕ್ಷದ ಚೌಕಟ್ಟಿನಲ್ಲಿ ಇರುವುದನ್ನು ಕಲಿಯಬೇಕು. ವರ್ಗಾವಣೆ ವಿಚಾರದಲ್ಲಿ ಯಡಿಯೂರಪ್ಪ ಭ್ರಷ್ಟಾಚಾರ ಮಾಡಿಲ್ಲ. ಸಿಎಂ ಪುತ್ರ ಬಿ.ವೈ.ವಿಜಯೇಂದ್ರನೂ ಭ್ರಷ್ಟಾಚಾರ ಮಾಡಿಲ್ಲ. ಆಡಳಿತ ಪಕ್ಷದ ಶಾಸಕನಾಗಿ ಹಾದಿ ಬೀದಿಲಿ ಮಾತಾಡುತ್ತೀರಿ. ನೀವು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತಾಡಿ. ಶಾಸಕಾಂಗ ಸಭೆ ಕರೆದು ಯತ್ನಾಳರನ್ನ ಉಚ್ಚಾಟನೆ ಮಾಡುವಂತೆ ನಾನು ಆಗ್ರಹಿಸುತ್ತೇನೆ ಎಂದು ಯತ್ನಾಳ್ ವಿರುದ್ಧ ಶಾಸಕ ಎಂ.ಪಿ.ರೇಣುಕಾಚಾರ್ಯ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ಯತ್ನಾಳ್ ತಿಳಿದುಕೊಂಡು ಮಾತನಾಡುವುದು ಉತ್ತಮ ಇನ್ನು ಇದೇ ವೇಳೆ ಕಲಾಪದಲ್ಲಿ ಯತ್ನಾಳ್ ವಿರುದ್ಧ ಮಾಡಾಳ್ ವಿರೂಪಾಕ್ಷಪ್ಪ ವಾಗ್ದಾಳಿ ನಡೆಸಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ಹಿರಿಯ ಮುಖಂಡರು ಹಾಗಂತ ಪದೇಪದೆ ಸಿಎಂರನ್ನ ಟೀಕಿಸುವುದು ಎಷ್ಟು ಸರಿ? ಯತ್ನಾಳ್ BSY ಕುಟುಂಬವನ್ನು ಟಾರ್ಗೆಟ್ ಮಾಡ್ತಿದ್ದಾರೆ. ವಿಜಯೇಂದ್ರ ಭ್ರಷ್ಟಾಚಾರ ಮಾಡಿದ್ರೆ ದಾಖಲೆ ನೀಡಲಿ. ಸುಮ್ನೆ ಆರೋಪ ಮಾಡಿದ್ರೆ ಶಿಸ್ತುಕ್ರಮಕ್ಕೆ ಆಗ್ರಹಿಸುತ್ತೇವೆ. ಕಾರ್ಯಕರ್ತರು ಯತ್ನಾಳ್ ವಿರುದ್ಧ ಧರಣಿ ಮಾಡಿದರೂ ಅಚ್ಚರಿ ಇಲ್ಲ. ಯತ್ನಾಳ್ ಹೀಗೆ ಮಾತಾಡಿದರೆ ಪಕ್ಷಕ್ಕೆ ಡ್ಯಾಮೇಜ್ ಆಗುತ್ತೆ. ತಿಳಿದುಕೊಂಡು ಮಾತನಾಡುವುದು ಉತ್ತಮ. ಇನ್ನಾದರೂ ಯತ್ನಾಳ್ ತಮ್ಮ ನಡವಳಿಕೆ ತಿದ್ದಿಕೊಳ್ಳಬೇಕು. ಅವರು ಬಾಯಿ ಮುಚ್ಚಿಕೊಂಡಿರಬೇಕು. ಜಗ್ಗದೆ ಬಗ್ಗದೆ ಮಾತನಾಡಿದರೆ ನಾವು ಏನೆಂದು ತೋರಿಸ್ತೇವೆ ಎಂದು ವಿಧಾನಸೌಧದಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಲೆಡೀಸ್ ಬೈಕ್ ಱಲಿಯಲ್ಲಿ M.P.ರೇಣುಕಾಚಾರ್ಯ.. ಪತ್ನಿ ಜೊತೆ ಹೊನ್ನಾಳಿ ಶಾಸಕರ ಬಿಂದಾಸ್ ಬೈಕ್ ಸವಾರಿ!
Published On - 1:38 pm, Tue, 16 March 21