KPCC ಅಧ್ಯಕ್ಷರ ವಿರುದ್ಧ ಸಿಬಿಐ ತನಿಖೆಗೆ ಅಸ್ತು, ಡಿಕೆಶಿಗೆ ಮುಂದಿದೆಯಾ ಗಂಡಾಂತರ?

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ ಭಾರೀ ಹಿನ್ನಡೆಯಾಗಿದೆ. ತಮ್ಮ ವಿರುದ್ಧ ಸಿಬಿಐ ತನಿಖೆಗೆ ರಾಜ್ಯ ಸರ್ಕಾರ ನೀಡಿದ್ದ ಅನುಮತಿಯನ್ನ ರದ್ದು ಪಡಿಸಬೇಕೆಂದು ಕೋರಿ ಸಲ್ಲಿಸಿದ್ದ ಮನವಿಯನ್ನ ಕರ್ನಾಟಕ ಹೈಕೋರ್ಟ್‌ ತಳ್ಳಿಹಾಕಿದೆ . ಹೌದು ದೆಹಲಿಯ ಡಿಕೆ ಶಿವಕುಮಾರ್‌ ನಿವಾಸಗಳ ಮೇಲೆ ಆದಾಯ ತೆರಿಗೆ ಇಲಾಖೆ ತನಿಖೆ ದಾಳಿ ನಡೆಸಿತ್ತು. ನಂತರ ಜಾರಿ ನಿರ್ದೇಶನಾಲಯ ಕೂಡಾ ಡಿಸಿಶಿ ವಿರುದ್ದ ತನಿಖೆ ನಡೆಸಿತ್ತು. ಇದಾದ ನಂತರ ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲಿ ಡಿಕೆ ಶಿವಕುಮಾರ್‌ ವಿರುದ್ಧ ಸಿಬಿಐ ಪ್ರಕರಣ […]

KPCC ಅಧ್ಯಕ್ಷರ ವಿರುದ್ಧ ಸಿಬಿಐ ತನಿಖೆಗೆ ಅಸ್ತು, ಡಿಕೆಶಿಗೆ ಮುಂದಿದೆಯಾ ಗಂಡಾಂತರ?
Guru Edited By:

Updated on: Jul 23, 2020 | 2:01 PM

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ ಭಾರೀ ಹಿನ್ನಡೆಯಾಗಿದೆ. ತಮ್ಮ ವಿರುದ್ಧ ಸಿಬಿಐ ತನಿಖೆಗೆ ರಾಜ್ಯ ಸರ್ಕಾರ ನೀಡಿದ್ದ ಅನುಮತಿಯನ್ನ ರದ್ದು ಪಡಿಸಬೇಕೆಂದು ಕೋರಿ ಸಲ್ಲಿಸಿದ್ದ ಮನವಿಯನ್ನ ಕರ್ನಾಟಕ ಹೈಕೋರ್ಟ್‌ ತಳ್ಳಿಹಾಕಿದೆ .

ಹೌದು ದೆಹಲಿಯ ಡಿಕೆ ಶಿವಕುಮಾರ್‌ ನಿವಾಸಗಳ ಮೇಲೆ ಆದಾಯ ತೆರಿಗೆ ಇಲಾಖೆ ತನಿಖೆ ದಾಳಿ ನಡೆಸಿತ್ತು. ನಂತರ ಜಾರಿ ನಿರ್ದೇಶನಾಲಯ ಕೂಡಾ ಡಿಸಿಶಿ ವಿರುದ್ದ ತನಿಖೆ ನಡೆಸಿತ್ತು. ಇದಾದ ನಂತರ ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲಿ ಡಿಕೆ ಶಿವಕುಮಾರ್‌ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಇದಕ್ಕೆ ರಾಜ್ಯ ಸರ್ಕಾರ ಸೆಪ್ಟೆಂಬರ್‌ 25, 2019ರಂದು ಅನುಮತಿ ನೀಡಿತ್ತು.

ಕಾಂಗ್ರೆಸ್‌ ನಾಯಕ ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ ನಡೆಸುತ್ತಿರುವ ತನಿಖೆಯನ್ನು ರದ್ದು ಪಡಿಸುವಂತೆ ಅವರ ಆಪ್ತ ಶಶಿಕುಮಾರ್ ಶಿವಣ್ಣ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ಬಗ್ಗೆ ವಿಚಾರಣೆ ನಡೆಸಿರುವ ಹೈಕೋರ್ಟ್, ಇದೀಗ‌ ಪ್ರಕರಣ ರದ್ದು ಪಡಿಸುವಂತೆ ಶಶಿಕುಮಾರ್ ಶಿವಣ್ಣ ಮಾಡಿದ್ದ ಮನವಿ ತಳ್ಳಿ ಹಾಕಿದೆ‌. ಹೀಗಾಗಿ ಡಿಕೆಶಿ ವಿರುದ್ಧದ ಸಿಬಿಐ ತನಿಖೆ ಮುಂದುವರಿಯಲಿದೆ.

Published On - 12:50 pm, Wed, 22 July 20

Loading...
Unable to load recommendations.
Follow Us