ಪರಿಷತ್​ ಸಭಾಪತಿ ಸ್ಥಾನಕ್ಕೆ ಪ್ರತಾಪಚಂದ್ರ ಶೆಟ್ಟಿ ರಾಜೀನಾಮೆ

ವಿಧಾನಪರಿಷತ್​ ಸಭಾಪತಿ ಪೀಠ ಸಿಕ್ಕಿದ್ದು ನನ್ನ ಸೌಭಾಗ್ಯ. 2 ವರ್ಷಗಳಿಂದ ಸಭಾಪತಿಯಾಗಿ ಕರ್ತವ್ಯ ನಿರ್ವಹಿಸಿದ್ದೇನೆ ಎಂದು ಪ್ರತಾಪಚಂದ್ರಶೆಟ್ಟಿ ಹೇಳಿದ್ದಾರೆ.

ಪರಿಷತ್​ ಸಭಾಪತಿ ಸ್ಥಾನಕ್ಕೆ ಪ್ರತಾಪಚಂದ್ರ ಶೆಟ್ಟಿ ರಾಜೀನಾಮೆ
ಪ್ರತಾಪ್ ಚಂದ್ರ ಶೆಟ್ಟಿ
Follow us
ರಾಜೇಶ್ ದುಗ್ಗುಮನೆ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Feb 04, 2021 | 8:54 PM

ಬೆಂಗಳೂರು: ಪರಿಷತ್​ ಸಭಾಪತಿ ಸ್ಥಾನಕ್ಕೆ ಪ್ರತಾಪಚಂದ್ರ ಶೆಟ್ಟಿ ಇಂದು ರಾಜೀನಾಮೆ ಸಲ್ಲಿಸಿದ್ದಾರೆ. ಉಪಸಭಾಪತಿಗೆ ಅವರು ರಾಜೀನಾಮೆ ಪತ್ರ ಸಲ್ಲಿಕೆ ಮಾಡಿದ್ದಾರೆ.  2018ರ ಡಿ.12ರಿಂದ ಪ್ರತಾಪಚಂದ್ರ ಶೆಟ್ಟಿ ಸಭಾಪತಿಯಾಗಿದ್ದರು. 113 ವರ್ಷಗಳ ರಾಜ್ಯದ ಮೇಲ್ಮನೆಗೆ ಭವ್ಯ ಇತಿಹಾಸವಿದೆ. ಈ ಸದನದ ಘನತೆ ಎತ್ತಿಹಿಡಿಯುವುದು ನಮ್ಮೆಲ್ಲರ ಕರ್ತವ್ಯ. ಕಳೆದ 37 ವರ್ಷಗಳಿಂದ ನಾನು ಸಾರ್ವಜನಿಕ ಬದುಕಿನಲ್ಲಿದ್ದೇನೆ. ಆದರೆ ಈಗ ಮೌಲ್ಯಗಳು ಕಡಿಮೆಯಾಗುತ್ತಿದೆ. ವಿಧಾನಪರಿಷತ್​ ಸಭಾಪತಿ ಪೀಠ ಸಿಕ್ಕಿದ್ದು ನನ್ನ ಸೌಭಾಗ್ಯ. 2 ವರ್ಷಗಳಿಂದ ಸಭಾಪತಿಯಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಜವಾಬ್ದಾರಿಯಿಂದ ನಡೆದುಕೊಂಡಿದ್ದೇನೆ ಎಂಬ ತೃಪ್ತಿ ಇದೆ ಎಂದು ಪರಿಷತ್​ ಸಭಾಪತಿ ಪ್ರತಾಪಚಂದ್ರಶೆಟ್ಟಿ ವಿದಾಯ ಭಾಷಣ ಮಾಡಿದ್ದಾರೆ. 

2018ರ ಡಿ.12ರಿಂದ ಪ್ರತಾಪಚಂದ್ರ ಶೆಟ್ಟಿ ಸಭಾಪತಿಯಾಗಿದ್ದರು. ಇವರು ವಿಧಾನಪರಿಷತ್​ನ ಕಾಂಗ್ರೆಸ್ ಸದಸ್ಯರಾಗಿದ್ದಾರೆ. ಪ್ರತಾಪಚಂದ್ರಶೆಟ್ಟಿ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡಿಸಿತ್ತು. ಬಿಜೆಪಿಯ ಅವಿಶ್ವಾಸ ನಿರ್ಣಯವನ್ನು ಜೆಡಿಎಸ್ ಬೆಂಬಲಿಸಿತ್ತು. ಹೀಗಾಗಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ರಾಜೀನಾಮೆ ನೀಡಿದ್ದಾರೆ.  ನಿನ್ನೆ ನಡೆದ ಸಿಎಲ್​ಪಿ ಸಭೆಯಲ್ಲೇ ಅವರು  ರಾಜೀನಾಮೆ ನಿರ್ಧಾರಕ್ಕೆ ಬಂದಿದ್ದರು.  ಪಕ್ಷಕ್ಕೆ ಮುಜುಗರವಾಗುವುದನ್ನು ತಪ್ಪಿಸಲು ರಾಜೀನಾಮೆ ನೀಡುತ್ತಿರುವುದಾಗಿ ಅವರು ಸಿಎಲ್​ಪಿ ಸಭೆಯಲ್ಲಿ ಹೇಳಿದ್ದರು ಎನ್ನಲಾಗಿದೆ.

ರಾಜೀನಾಮೆ ನೀಡಿದ ನಂತರ ವಿಧಾನಸೌಧದ ತಮ್ಮ ಕೊಠಡಿಗೆ ಪ್ರತಾಪಚಂದ್ರ ಶೆಟ್ಟಿ ತೆರಳಿದ್ದಾರೆ. ಸಭಾಪತಿ ಭೇಟಿಗೆ ಮೂರೂ ಪಕ್ಷಗಳ ನಾಯಕರು ಆಗಮಿಸಿದ್ದಾರೆ. ಸಚಿವರಾದ ಬಸವರಾಜ ಬೊಮ್ಮಾಯಿ, ಶ್ರೀನಿವಾಸ ಪೂಜಾರಿ, ಲಕ್ಷ್ಮಣ ಸವದಿ, ಎಸ್.ಆರ್.ಪಾಟೀಲ್, ಹೆಚ್.ವಿಶ್ವನಾಥ್​, ಬಸವರಾಜ ಹೊರಟ್ಟಿ ಸೇರಿ ಹಲವು ನಾಯರು ಪ್ರತಾಪಚಂದ್ರ ಶೆಟ್ಟಿ ಭೇಟಿಯಾಗಿದ್ದಾರೆ.

‘ವಿಧಾನ ಪರಿಷತ್​​ನಲ್ಲಿ ಇನ್ಮುಂದೆ ಮೊಬೈಲ್​ ಬಳಕೆ​ ಬ್ಯಾನ್​.. ಒಂದು ವೇಳೆ ನೋಡಬೇಕೆಂದ್ರೆ ಸಭಾಪತಿಯ ಅನುಮತಿ ಪಡೆಯಬೇಕು’

Published On - 8:30 pm, Thu, 4 February 21