ನಕಲಿ ಫೇಸ್ಬುಕ್ ಖಾತೆ: ಹುಡುಗಿ ಹೆಸರಿನಲ್ಲಿ ಹಣ ಪಡೆದು ವಂಚನೆ
ರುದ್ರಗೌಡ ಎನ್ನುವ ಹುಬ್ಬಳಿ ಮೂಲದ ಯುವಕನಿಗೆ ಸುಷ್ಮಾ ಸುಸು ಎನ್ನುವ ಫೇಕ್ ಫೇಸ್ಬುಕ್ ಅಕೌಂಟ್ನ ಮೂಲಕ ಹಾಸನದ ಪ್ರತಾಪ್ ವಂಚನೆ ಮಾಡಿದ್ದಾನೆ.
ಧಾರವಾಡ: ನಕಲಿ ಫೇಸ್ಬುಕ್ ಖಾತೆ ಸೃಷ್ಟಿಸಿ ಹುಡುಗಿ ಹೆಸರಿನಲ್ಲಿ ₹ 15 ಲಕ್ಷ ಪಡೆದು ಯುವಕನೊಬ್ಬನಿಗೆ ಮೋಸ ಮಾಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ರುದ್ರಗೌಡ ಎನ್ನುವ ಹುಬ್ಬಳ್ಳಿ ಮೂಲದ ಯುವಕನಿಗೆ ಸುಷ್ಮಾ ಸುಸು ಎನ್ನುವ ಫೇಕ್ ಫೇಸ್ಬುಕ್ ಅಕೌಂಟ್ನ ಮೂಲಕ ಹಾಸನದ ಪ್ರತಾಪ್ ವಂಚನೆ ಮಾಡಿದ್ದಾನೆ. ವ್ಯಾಟ್ಸ್ಆ್ಯಪ್ ಮೂಲಕ ನಿತ್ಯ ಚಾಟಿಂಗ್ ಮಾಡುತ್ತಿದ್ದ ಪ್ರತಾಪ್ ತಾನು ಮೂಕಿ, ಕಿವುಡಿ ಎಂದು 8 ರಿಂದ 10 ಬ್ಯಾಂಕ್ ಖಾತೆಗಳನ್ನ ನೀಡಿ ಹಣ ಹಾಕಿಸಿಕೊಂಡಿದ್ದಾನೆ. ಮೋಸ ಹೋದ ಯುವಕ ಸದ್ಯ ದೂರು ದಾಖಲಿಸಿದ್ದು, ಆರೋಪಿ ಪ್ರತಾಪ್ನನ್ನ ಧಾರವಾಡ ಸೈಬರ್ ಪೊಲೀಸರು ಬಂಧಿಸಿದ್ದಾರೆ.
IPS ಅಧಿಕಾರಿ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ: ಸಿಐಡಿ ಸೈಬರ್ ಠಾಣೆಗೆ ರಮೇಶ್ ಬಾನೋತ್ ದೂರು