ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ನೀಡುವ ವಿವಿಧ ವಾರ್ಷಿಕ ಪ್ರಶಸ್ತಿಗಳು ಘೋಷಣೆಯಾಗಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ 2020ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಪ್ರೊ.ಅಮೃತ ಸೋಮೇಶ್ವರ, ವಿದ್ವಾನ್ ಷಣ್ಮುಖಯ್ಯ ಅಕ್ಕೂರಮಠ, ಡಾ.ಕೆ.ಕೆಂಪೇಗೌಡ, ಡಾ.ಕೆ.ಆರ್.ಸಂಧ್ಯಾರೆಡ್ಡಿ, ಅಶೋಕಪುರಂ ಕೆ.ಗೋವಿಂದರಾಜು ಅವರುಗಳನ್ನು ಆಯ್ಕೆಮಾಡಿರುವುದಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಹೇಳಿದೆ.
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಗಮನಾರ್ಹ ಸಾಧನೆಯನ್ನು ಗುರುತಿಸಿ 10 ಸಾಹಿತಿಗಳನ್ನು 2020ನೇ ಸಾಲಿನ ಸಾಹಿತ್ಯಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಪ್ರೇಮಶೇಖರ್, ಡಾ.ರಾಜಪ್ಪ ದಳವಾಯಿ, ಬಿ.ಟಿ.ಜಾಹ್ನವಿ, ಪ್ರೊ. ಕಲ್ಯಾಣರಾವ್ ಜಿ.ಪಾಟೀಲ್, ಡಾ.ಜೆ.ಪಿ.ದೊಡ್ಡಮನಿ, ಡಾ. ಮೃತ್ಯುಂಜಯ ರುಮಾಲೆ, ಡಿ.ವಿ.ಪ್ರಹ್ಲಾದ, ಡಾ.ಎ.ಎಸ್.ಆಶಾದೇವಿ, ಶಿವಾನಂದ ಕಳವೆ ಮತ್ತು ಡಾ.ವೀಣಾ ಬನ್ನಂಜೆ ಅವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಿಸಿದೆ.
18 ಸಾಹಿತ್ಯ ಪ್ರಕಾರಗಳ ಕೃತಿಗಳಿಗೆ ನೀಡುವ ವಾರ್ಷಿಕ ಪ್ರಶಸ್ತಿಗಳು ಸಹ ಘೋಷಣೆಯಾಗಿದ್ದು, 2019ನೇ ಸಾಲಿನಲ್ಲಿ ಖ್ಯಾತ ಸಾಹಿತಿ ವಸುಧೇಂದ್ರ ಅವರ ತೇಜೋ ತುಂಗಭದ್ರಾ ಕಾದಂಬರಿಗೆ ಪುರಸ್ಕಾರ ಲಭಿಸಿದೆ. ಕವಿತೆ ಪ್ರಕಾರದಲ್ಲಿ ಸುಮಿತ್ ಮೇತ್ರಿ ಅವರ ‘ಥಟ್ ಅಂತ ಬರೆದುಕೊಡುವ ರಶೀದಿಯಲ್ಲ ಕವಿತೆ’, ರಘುನಾಥ ಚ.ಹ ಅವರ ‘ಬೆಳ್ಳಿತೊರೆ’, ಸುಧಾ ಆಡುಕಳ ಅವರ ‘ಬಕುಲದ ಬಾಗಿಲಿನಿಂದ’, ಕಪಿಲ ಪಿ ಹುಮನಾಬಾದೆ ಅವರ ‘ಹಾಣಾದಿ’ ಅವರ ಕೃತಿಯೂ ಸೇರಿ ಒಟ್ಟು 18 ಕೃತಿಗಳಿಗೆ ಪುರಸ್ಕಾರ ಲಭಿಸಿದೆ. ಡಾ.ಪ್ರಭಾಕರ ಶಿಶಿಲ, ಪ್ರಮೋದ್ ಮುತಾಲಿಕ್ ಸೇರಿದಂತೆ ಹಲವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 9 ದತ್ತಿನಿಧಿ ಪುರಸ್ಕಾರಗಳು ಘೋಷಣೆಯಾಗಿವೆ
ಇದನ್ನೂ ಓದಿ: Poetry; ಅವಿತಕವಿತೆ: ಅವರದೇ ಎದೆಯೊಳಗಿನ ಹಕ್ಕಿಯೊಂದು ಸೊರಗತೊಡಗಿತು
Motherhood; ನಾನೆಂಬ ಪರಿಮಳದ ಹಾದಿಯಲಿ: ಅಮ್ಮ ಕಾಲುಜಾರಿ ಬಿದ್ದ ಬಾವಿಗೆ ಕಟ್ಟೆ ಕಟ್ಟಲೇ ಇಲ್ಲ
Published On - 6:02 pm, Fri, 26 February 21