ಪ್ರಧಾನಿ ಮೋದಿ ನಾಡಲ್ಲಿ ಆಮ್ ​ಆದ್ಮಿ ಪಕ್ಷದ ಗೆಲುವು; ಗುಜರಾತ್ ರಾಜಕೀಯದ ಒಳಗುಟ್ಟು ಉಸುರುವುದೇನು?

Gujarat Civic Poll Election Result 2021: ಪಾಟೀದಾರ ಅಥವಾ ಪಟೇಲ್ ಸಮುದಾಯ ಗುಜರಾತ್​ನ ಅತಿ ಪ್ರಬಲ ಸಮುದಾಯ. ಈ ಸಮುದಾಯ ಇಷ್ಟು ವರ್ಷಗಳ ಕಾಲ ಕಾಂಗ್ರೆಸ್​ ಜತೆ ಗುರುತಿಸಿಕೊಂಡಿತ್ತು. ಪಾಟೀದಾರ್ ಚಳುವಳಿಯ ನಂತರ ರಾಜಕೀಯವಾಗಿ ಮುನ್ನೆಲೆಗೆ ಬರಬೇಕಾದ ಮಹತ್ವವನ್ನು ಅರಿತ ಈ ಸಮುದಾಯದ ನಾಯಕರು ಈ ಬಾರಿಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತಮ್ಮ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಲು ಕಾಂಗ್ರೆಸ್ ಬಳಿ ಕೇಳಿಕೊಂಡರು. ಆದರೆ, ಕಾಂಗ್ರೆಸ್ ಪಾಟೀದಾರರ ಈ ಮನವಿಯನ್ನು ಒಳಗೆ ಬಿಟ್ಟುಕೊಳ್ಳದೇ ತಿರಸ್ಕರಿಸಿತು.

ಪ್ರಧಾನಿ ಮೋದಿ ನಾಡಲ್ಲಿ ಆಮ್ ​ಆದ್ಮಿ ಪಕ್ಷದ ಗೆಲುವು; ಗುಜರಾತ್ ರಾಜಕೀಯದ ಒಳಗುಟ್ಟು ಉಸುರುವುದೇನು?
ಸೂರತ್ ಜನತೆಗೆ ಧನ್ಯವಾದ ಹೇಳಿದ ಆಮ್ ಆದ್ಮಿ ಪಕ್ಷ
Follow us
guruganesh bhat
| Updated By: ರಾಜೇಶ್ ದುಗ್ಗುಮನೆ

Updated on: Feb 26, 2021 | 8:16 PM

ಆಮ್​ ಆದ್ಮಿ ಪಕ್ಷ ಈಗ ಪಾಯಸ ಉಂಡಷ್ಟು ಖುಷಿಯಲ್ಲಿದೆ. ದೆಹಲಿಯಲ್ಲಿ ಎರಡನೇ ಬಾರಿಗೆ ಅಧಿಕಾರ ಹಿಡಿದಿದ್ದ ಅರವಿಂದ್ ಕೇಜ್ರಿವಾಲ್ ನೇತೃತ್ವದ ‘ಜನಸಾಮಾನ್ಯರ ಪಕ್ಷ’ ಪ್ರಧಾನಿ ನರೇಂದ್ರ ಮೋದಿಯವರ ತವರಿಗೂ ಲಗ್ಗೆಯಿಟ್ಟು  ಸಂಭ್ರಮ ಆಚರಿಸುತ್ತಿದೆ. ಸೂರತ್ ಸ್ಥಳೀಯ ಸಂಸ್ಥೆಯಲ್ಲಂತೂ ಕಾಂಗ್ರೆಸ್​ ಪಕ್ಷದ್ದು ಶೂನ್ಯಸಾಧನೆ. 25 ವರ್ಷಗಳಿಂದ ಗುಜರಾತ್​ನಲ್ಲಿ ಚುಕ್ಕಾಣಿ ಹಿಡಿದಿರುವ ಬಿಜೆಪಿಯ ಗುಹೆಗೆ ಆಮ್ಆದ್ಮಿ ಪಕ್ಷ ನುಗ್ಗಿರುವುದು ರಾಷ್ಟ್ರ ರಾಜಕಾರಣದಲ್ಲಿನ ಬದಲಾವಣೆಯ ನಡೆ ಎಂದು ಆಮ್ಆದ್ಮಿ ವಿಶ್ಲೇಷಿಸಿದೆ. ಆದರೆ, ಈ ಫಲಿತಾಂಶ ನಿಜಕ್ಕೂ ಬದಲಾವಣೆಯ ಸಂಕೇತವೇ? ಆಮ್ಆದ್ಮಿ ಗುಜರಾತ್​ನಲ್ಲಿ ತನ್ನ ಬಲವನ್ನು ನಿಜವಾಗಿಯೂ ವಿಸ್ತರಿಸಿಕೊಂಡಿದೆಯೇ? ‘ಇಲ್ಲ’ ಎನ್ನುತ್ತದೆ ವಾಸ್ತವ ವಿಶ್ಲೇಷಣೆ.

ಪಾಟೀದಾರ ಅಥವಾ ಪಟೇಲ್ ಸಮುದಾಯ ಗುಜರಾತ್ನ ಅತಿ ಪ್ರಬಲ ಸಮುದಾಯ. ಈ ಸಮುದಾಯ ಇಷ್ಟು ವರ್ಷಗಳ ಕಾಲ ಕಾಂಗ್ರೆಸ್​ ಜತೆ ಗುರುತಿಸಿಕೊಂಡಿತ್ತು. ಪಾಟೀದಾರ್ ಚಳುವಳಿಯ ನಂತರ ರಾಜಕೀಯವಾಗಿ ಮುನ್ನೆಲೆಗೆ ಬರಬೇಕಾದ ಮಹತ್ವವನ್ನು ಅರಿತ ಈ ಸಮುದಾಯದ ನಾಯಕರು ಈ ಬಾರಿಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತಮ್ಮ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಲು ಕಾಂಗ್ರೆಸ್ ಬಳಿ ಕೇಳಿಕೊಂಡರು. ಆದರೆ, ಕಾಂಗ್ರೆಸ್ ಪಾಟೀದಾರರ ಈ ಮನವಿಯನ್ನು ಒಳಗೆ ಬಿಟ್ಟುಕೊಳ್ಳದೇ ತಿರಸ್ಕರಿಸಿತು. ಮೂಲತಃ ಕಾಂಗ್ರೆಸ್ ಸದಸ್ಯರಿಗೇ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೇಟ್ ನೀಡಿತು. ಈ ನಡೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಬಹುದೊಡ್ಡ ಪೆಟ್ಟು ನೀಡಿತು.

ಕಾಂಗ್ರೆಸ್ ತಮ್ಮ ಸಮುದಾಯದ ಅಭ್ಯರ್ಥಿಗಳಿಗೆ ಟಿಕೇಟ್ ನೀಡಲು ನಿರಾಕರಿಸಿದಾಗಲೇ,  ಪಾಟೀದಾರರು ತಮ್ಮ ಬಲ ಪ್ರದರ್ಶನಕ್ಕೆ ನಿರ್ಧರಿಸಿದರು. ಇಡೀ ಪಾಟೀದಾರ ಸಮುದಾಯಕ್ಕೆ ರಾಜಕೀಯವಾಗಿ ಒಂದು ಮಹತ್ವದ ಪಕ್ಷದ ಅಡಿ ಸ್ಪರ್ಧಿಸುವ ಬಲವಾದ ಇಚ್ಛೆಯಿತ್ತು. ಅದೇ ಕಾರಣಕ್ಕೆ ಪಾಟೀದಾರರು ಕಾಂಗ್ರೆಸ್​ ಪಕ್ಷವನ್ನು ಸಂಪರ್ಕಿಸಿದರು. ಆದರೆ, ಅಲ್ಲಿ ಅವರಿಗೆ ಬೇಕಾದದ್ದು ದೊರಕಲಿಲ್ಲ. ಆಗ ಹೊಳೆದದ್ದೇ ಆಮ್ಆದ್ಮಿ ಎಂಬ ಹಾಲುಗಲ್ಲದ ಕಿಲಾಡಿ ಮಗು.

ಸೂರತ್ ಸ್ಥಳೀಯ ಸಂಸ್ಥೆಯಲ್ಲಿ ಆಮ್ಆದ್ಮಿ ಪಕ್ಷ 27 ಸ್ಥಾನಗಳಲ್ಲಿ ಗೆದ್ದು ಬೀಗಿತು ನಿಜ. ಆದರೆ ಗೆದ್ದ ಹೆಚ್ಚಿನವರಿಗೆ ಆಮ್ಆದ್ಮಿ ಪಕ್ಷ ಎಂಬುದು ನೆವ ಅಷ್ಟೇ. ಮೂಲತಃ ಪಾಟೀದಾರ ಚಳುವಳಿಯಲ್ಲಿ ಗುರುತಿಸಿಕೊಂಡ, ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲೇಬೇಕೆಂಬ ಉಮೇದಿನಲ್ಲಿದ್ದ ಅವರಿಗೆ ಸಿಕ್ಕಿದ್ದೇ ಆಮ್ಆದ್ಮಿ. ಆಮ್​ಆದ್ಮಿಯಿಂದ ಗೆದ್ದ 27 ಸ್ಪರ್ಧಿಗಳಲ್ಲಿ  ತಮ್ಮ ಸ್ವಂತ ವರ್ಚಸ್ಸು, ಪ್ರಚಾರ ಮತ್ತು ಸಮುದಾಯದ ಬಲದ ಮೇಲೆ ಗೆದ್ದ ಸ್ಥಾನಗಳೇ ಹೆಚ್ಚಿವೆ.

ಎಐಎಂಐಎಂ ಸ್ಪರ್ಧಿಸಿದರೆ ಬಿಜೆಪಿಗೆ ಒಳ್ಳೆಯದೇ? ಗುಜರಾತ್​ನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಬಲ ಇನ್ನಷ್ಟು ಬಲಗೊಂಡಿದೆ. ಆಮ್ಆದ್ಮಿ ಫಲಿತಾಂಶ ಬಿಜೆಪಿಗೆ ತೃಣಮಾತ್ರವೂ ಅಚ್ಚರಿ ನೀಡಿಲ್ಲ. ಆಮ್ಆದ್ಮಿ ಗೆದ್ದದ್ದು ಕಾಂಗ್ರೆಸ್​ ಸ್ಥಾನಗಳೇ ಹೊರತು ಬಿಜೆಪಿಯದ್ದಂತೂ ಅಲ್ಲ. ಗುಜರಾತ್​ನಲ್ಲಿ ಹಿಂದೆಂದಿಗಿಂತಲೂ ಬಿಜೆಪಿಯ ತೋಳುಗಳು ದಷ್ಟಪುಷ್ಟವಾಗಿವೆ. ಅದರಲ್ಲೂ ಅಸಾದುದ್ದೀನ್ ಓವೈಸಿಯ ಎಐಎಂಐಎಂ ಪಕ್ಷ ಸ್ಪರ್ಧೆಯೂ ಬಿಜೆಪಿಗೆ ಒಳ್ಳೆಯದನ್ನೇ ಮಾಡಿದೆ ಎಂದು ಪರಿಣಿತರು ಹೇಳುತ್ತಾರೆ. ಎಐಎಂಐಎಂ ಸ್ಪರ್ಧೆ ಬಿಜೆಪಿಯ ಮತಗಳನ್ನು ಒಂದೆಡೆ ಕ್ರೋಢೀಕರಿಸಲು ನೆರವಾಯಿತು. ಎಐಎಂಐಎಂ ಸ್ಪರ್ಧೆ ಕಾಂಗ್ರೆಸ್​ನ ಮತ ಸೆಳೆದುಕೊಳ್ಳುವುದೇ ಹೊರತು ಬಿಜೆಪಿಯದ್ದಂತೂ ಅಲ್ಲ ಎಂಬುದು ಈಗಾಗಲೇ ಹಲವು ಉದಾಹರಣೆಗಳಲ್ಲಿ ಸಾಬೀತಾಗಿದೆ. ಬಿಜೆಪಿ ಗೆಲ್ಲಬೇಕೆಂದರೆ ಎಐಎಂಐಎಂ ಸ್ಪರ್ಧಿಸಬೇಕು ಎಂಬ ಮಾತುಗಳಿಗೆ ಗುಜರಾತ್ ಸ್ಥಳೀಯ ಸಂಸ್ಥೆ ಚುನಾವಣೆ ಇನ್ನಷ್ಟು ಪುಷ್ಠಿ ನೀಡಿದೆ.

ಅಹ್ಮದ್ ಪಟೇಲ್ ನಿಧನ, ಕಾಂಗ್ರೆಸ್​ಗೆ ನಷ್ಟ ಇತ್ತೀಚಿಗಷ್ಟೇ ಕಾಂಗ್ರೆಸ್ನ ಹಿರಿಯ ನಾಯಕ, ಸೋನಿಯಾ ಗಾಂಧಿ ಆಪ್ತ ಅಹ್ಮದ್ ಪಟೇಲ್ ನಿಧನರಾಗಿದ್ದರು. ಗುಜರಾತ್ ಮೂಲದ ಅವರು ಪಟೇಲ್ ಸಮುದಾಯದ ಮತಗಳನ್ನು ಕಾಂಗ್ರೆಸ್ ಜೇಬಿಗೆ ಇಳಿಸಲು ನೆರವಾಗುತ್ತಿದ್ದರು. ಆದರೆ ಈಗ ಅವರಿಲ್ಲದಿರುವುದೂ ಕಾಂಗ್ರೆಸ್ಗೆ ಮುಳುವಾಯಿತು ಎನ್ನಬಹುದು.

ಆದರೆ, ಇಲ್ಲಿ ಇನ್ನೊಂದು ಪ್ರಶ್ನೆ ಉದ್ಭವಿಸುತ್ತದೆ. ಪಾಟೀದಾರ ಸಮುದಾಯಕ್ಕೆ ಓಬಿಸಿ ಮೀಸಲಾತಿ ಬೇಕೆಂದು ಚಳುವಳಿ ಸಂಘಟಿಸಿದವರು ಹಾರ್ದಿಕ ಪಟೇಲ್. ನಂತರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಶಾಸಕರೂ ಆಗಿರುವ ಹಾರ್ದಿಕ ಪಟೇಲ್, ಇದೀಗ ಗುಜರಾತ್ ಕಾಂಗ್ರೆಸ್ನ ಅಧ್ಯಕ್ಷರೂ ಹೌದು. ಪಟೇಲ್ ಸಮುದಾಯವನ್ನು ಕಾಂಗ್ರೆಸ್ ಪಕ್ಷಕ್ಕೆ ಆಯಸ್ಕಾಂತದಂತೆ ಹಿಡಿದಿಟ್ಟುಕೊಳ್ಳಲು ಅವರ ಬಳಿಯೂ ಸಾಧ್ಯವಾಗಲಿಲ್ಲ. ಇದಕ್ಕೆ ಮೂಲ ಕಾರಣ ಪಾಟೀದಾರ ಸಮುದಾಯದ ಅಭ್ಯರ್ಥಿಗಳಿಗೆ ಚುನಾವಣೆಗೂ ಮುನ್ನ ಟಿಕೇಟ್ ನಿರಾಕರಣೆಯಷ್ಟೇ. ಒಟ್ಟಿನಲ್ಲಿ ಕಾಂಗ್ರೆಸ್​ನ ಹೊಸ ಸಮೀಕರಣವೊಂದು ಮಗುಚಿ ಬಿದ್ದಿರುವುದಷ್ಟೇ ಆಮ್ಆದ್ಮಿಯ ‘ಸೂರತ್’ ಗೆಲುವಿಗೆ ಕಾರಣವಾಗಿದೆ.

ಮುಂದಿದೆ ನಿಜವಾದ ಪರೀಕ್ಷೆ

ಈಗ ನಡೆದಿರುವುದು ನಗರ ಪಾಲಿಕೆಗಳ ಚುನಾವಣೆ. ಇನ್ನೇನು ಕೆಲವೇ ದಿನಗಳಲ್ಲಿ ಗುಜರಾತ್​ನ ಜಿಲ್ಲಾ ಮತ್ತು ತಾಲೂಕಾ ಪಂಚಾಯತ್​ಗಳಿಗೆ ಚುನಾವಣೆ ಜರುಗಲಿದೆ. ಈ ಚುನಾವಣೆಯಲ್ಲೂ ಆಮ್​ಆದ್ಮಿ ಕೆಲವು ಕ್ಷೇತ್ರಗಳಲ್ಲಾದರೂ ಗೆದ್ದರೆ ಮಾತ್ರ ಪಕ್ಷದ ನಿಜವಾದ ಬೆಳವಣಿಗೆ ಎನ್ನಬಹುದಷ್ಟೇ.  ಇಲ್ಲವೆ, ಪಾಟೀದಾರ ಸಮುದಾಯದ ಅಭ್ಯರ್ಥಿಗಳ ವೈಯಕ್ತಿಕ ವರ್ಚಸ್ಸು ಆಮ್​ಆದ್ಮಿಗೆ ಪ್ರಚಾರ ಪಡೆಯಲು ನೆರವಾಯಿತು ಎಂದು ಹೇಳಬಹುದಷ್ಟೇ.

ಇದನ್ನೂ ಓದಿ: ಗುಜರಾತ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಹಿಂದಿಕ್ಕಿದ ಆಮ್ ಆದ್ಮಿ ಪಕ್ಷ

Gujarat BJP: ಭರೂಚ್ ಸ್ಥಳೀಯ ಪಾಲಿಕೆ ಚುನಾವಣೆ; ಅತಿ ಹೆಚ್ಚು ಮುಸ್ಲಿಂ ಅಭ್ಯರ್ಥಿಗಳಿಗೆ ಮಣೆ ಹಾಕಿದ ಬಿಜೆಪಿ

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ